ದರೋಡೆಗೆ ಹೊಂಚು ಹಾಕುತ್ತಿದ್ದ ರೌಡಿಶೀಟರ್ ಗ್ಯಾಂಗ್ ಅರೆಸ್ಟ್

Public TV
1 Min Read
Bengaluru theft

ಬೆಂಗಳೂರು: ಮಾರಕಾಸ್ತ್ರಗಳು ಹಿಡಿದು ದರೋಡೆಗೆ ಮುಂದಾಗಿದ್ದ ರೌಡಿಶೀಟರ್ ಆ್ಯಂಡ್ ಗ್ಯಾಂಗ್ ಅನ್ನ ಸಿಸಿಬಿ ಪೊಲೀಸರು ಖೆಡ್ಡಾಕ್ಕೆ ಬಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾನ್ ವಿಲಿಯಂ ಅಲಿಯಾಸ್ ಅಪ್ಪು , ಶಶಿಧರ್ ಅಲಿಯಾಸ್ ಗುಂಡ, ಪಾರ್ತಿಬನ್ ಮೈಕಲ್, ಜಾಕ್ಸನ್ ಬಂಧಿತ ಆರೋಪಿಗಳಾಗಿದ್ದಾರೆ. ಮಾರಕಾಸ್ತ್ರಗಳನ್ನು ತೋರಿಸಿ ಡರೋಡೆ ಮಾಡುತ್ತಿದ್ದ ವೇಳೆ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

police web

ನಿನ್ನೆ ಮಧ್ಯಾಹ್ನ ಆರೋಪಿಗಳು ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರೋ ಶಾಂತಿ ನಗರದ ಬರ್ಲಿ ಸ್ಟ್ರೀಟ್ ರೋಡ್ ನಲ್ಲಿ ನಲ್ಲಿರೋ ಕ್ರಿಶ್ಚಿಯನ್ ಮಸಣದ ಬಳಿ ದರೋಡೆಗೆ ಮುಂದಾಗಿದ್ದರು. ಆರೋಪಿಗಳು ಮಾರಕಾಸ್ತ್ರಗಳನ್ನ ತೋರಿಸಿ ಒಬ್ಬಂಟಿಯಾಗಿ ಬರುವವರನ್ನ ಬೆದರಿಸಿ ಹಣ , ಮೊಬೈಲ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನ ದೋಚಲು ಮುಂದಾಗಿದ್ದರು. ಆರೋಪಿಗಳ ದುಷ್ಕೃತ್ಯದ ಬಗ್ಗೆ ತಿಳಿಸಿ ಎಸಿಪಿ ಧರ್ಮೇಂದ್ರ ಆ್ಯಂಡ್  ಟೀಂ ದಾಳಿ ಮಾಡಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

Police Jeep

ಬಂಧಿತರಿಂದ ಕೃತ್ಯಕ್ಕೆ ಬಳಸಲು ತಂದಿದ್ದ ಮಾರಕಾಸ್ತ್ರಗಳು ಮತ್ತು ಬೈಕ್‍ಗಳನ್ನವಶಕ್ಕೆ ಪಡೆದುಕೊಂಡಿದ್ದಾರೆ.ಬಂಧಿತ ಆರೋಪಿಗಳು ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ ಸಹಚರರಾಗಿದ್ದು, ಗ್ಯಾಂಗ್ ನಲ್ಲಿ ಜಾನ್ ವಿಲಿಯಂ, ಮೈಕಲ್ ಇಬ್ಬರ ಮೇಲೆ ಕೊಲೆ, ಕೊಲೆಯತ್ನ ದರೋಡೆ ಕೇಸ್‍ಗಳಿದ್ದು ಇಬ್ಬರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ರೌಡಿಶೀಟರ್ ಗಳಾಗಿದ್ದಾರೆ. ಉಳಿದ ಇಬ್ಬರು ಆರೋಪಿಗಳ ಮೇಲೆ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಬಂಧಿಸಿ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *