ಮುಂಬೈ: ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಇಂಗ್ಲೆಂಡ್‍ನಲ್ಲಿ ನಡೆಯುವ ಟೆಸ್ಟ್ ವಿಶ್ವಚಾಂಪಿಯನ್‍ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಆಡಲು ಸಜ್ಜಾಗಿದ್ದು, ಈ ಮೂಲಕ ಶಮ್ಮಿ ಟೆಸ್ಟ್ ಕ್ರಿಕೆಟ್‍ನಲ್ಲಿ ನೂತನ ಮೈಲಿಗಲ್ಲೊಂದನ್ನು ಬರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಶಮಿ ಈಗಾಗಲೇ ಭಾರತದ ಪರ 50 ಟೆಸ್ಟ್ ಪಂದ್ಯಗಳನ್ನು ಆಡಿ 180 ವಿಕೆಟ್ ಕಬಳಿಸಿದ್ದಾರೆ. ಇನ್ನು ಕೇವಲ 20 ವಿಕೆಟ್ ಪಡೆದರೆ 200 ವಿಕೆಟ್ ಪಡೆದ ಭಾರತದ ಐದನೇ ವೇಗದ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಈ ಸಾಧನೆಗಾಗಿ ಶಮಿಗೆ ಸಂಪೂರ್ಣ ಅವಕಾಶಗಳಿದ್ದು ಭಾರತ ಮೊದಲು ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಚಾಂಪಿಯನ್ ಶಿಪ್ ಟೆಸ್ಟ್ ಪಂದ್ಯ ನಡೆಯಲಿದೆ ಆ ಬಳಿಕ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಹಾಗಾಗಿ ಶಮಿಗೆ 200 ವಿಕೆಟ್ ಪಡೆಯುವ ಸಂಪೂರ್ಣ ಅವಕಾಶ ಬಂದೊದಗಿದೆ.
ಈಗಾಗಲೇ ಈ ಎರಡು ಸರಣಿಗಾಗಿ 20 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು ಈ ತಂಡದಲ್ಲಿ 6ಜನ ವೇಗದ ಬೌಲರ್ ಗಳನ್ನು ಆಯ್ಕೆ ಮಾಡಲಾಗಿದೆ ಇದರಲ್ಲಿ ಶಮಿ ಕೂಡ ಒಬ್ಬರಾಗಿದ್ದಾರೆ. ಶಮಿ ಇನ್ನು ಕೇವಲ 20 ವಿಕೆಟ್ ಪಡೆದರೆ ಟೆಸ್ಟ್ ನಲ್ಲಿ 200 ವಿಕೆಟ್ ಪಡೆಯುವ ಅವಕಾಶ ಪಡೆಯಲಿದ್ದಾರೆ.
ಈ ಮೊದಲು ಭಾರತ ತಂಡದ ಪರ ಕಪೀಲ್ ದೇವ್, ಜಹೀರ್ ಖಾನ್, ಇಶಾಂತ್ ಶರ್ಮಾ ಮತ್ತು ಜಾವಗಲ್ ಶ್ರೀನಾಥ್ 200ಕ್ಕೂ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಗಳಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಶಮಿ ಕೂಡ ಈ ಪಟ್ಟಿ ಸೇರುವ ತವಕದಲ್ಲಿದ್ದಾರೆ.