ಗದಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಾಂಪ್ಲೆಕ್ಸ್ ನ 3 ಅಂಗಡಿಗಳಲ್ಲಿ ಬೆಂಕಿ ಹೊತ್ತಿಕೊಂಡು ಧಗಧಗಿಸಿರುವ ಘಟನೆ ನಗರದ ಚೇತನಾ ಕ್ಯಾಂಟೀನ್ ಬಳಿ ನಡೆದಿದೆ.
ಬಸನಗೌಡ ನಾಡಗೌಡ್ರ ಅವರಿಗೆ ಸೇರಿದ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಬಟ್ಟೆ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ, ಬೆಂಕಿ ಹೊತ್ತಿಕೊಂಡಿದೆ. ಲಾಕ್‍ಡೌನ್ ಹಿನ್ನೆಲೆ ಅಂಗಡಿಗಳಲ್ಲಿ ಯಾರು ಇಲ್ಲದಕ್ಕೆ, ಅಕ್ಕ ಪಕ್ಕದ ಕಿರಾಣಿ ಹಾಗೂ ಜನರಲ್ ಸ್ಟೋರ್ ಗೂ ಬೆಂಕಿ ವ್ಯಾಪಿಸಿದೆ. ನಂತರ ದಟ್ಟವಾದ ಹೋಗೆ ಕಂಡು ಸ್ಥಳಿಯರು ಬೆರಗಾಗಿದ್ದಾರೆ.
ತಕ್ಷಣವೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳಿಯರು ಬೆಂಕಿ ನಂದಿಸಲು ಮುಂದಾದರು. ಈ ದುರ್ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.