ಕಲಬುರಗಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಕರೆದೊಯ್ಯಲು ದಿನದ 24 ಗಂಟೆಯೂ ಆಟೋ ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ಒಟ್ಟು ಐದು ಆಟೋಗಳನ್ನು ರಸ್ತೆಗಿಳಿಸಲಾಗಿದೆ.
ಈ ಆಟೋಗಳಲ್ಲಿ ಡ್ರೈವರ್ ಹಾಗೂ ಓರ್ವ ಸೂಪರ್‍ವೈಸರ್ ನಿಯೋಜಿಸಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಆದೇಶ ಹೊರಡಿಸಿದ್ದಾರೆ. ಪ್ರತಿ ದಿನ ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆಯವರೆಗೆ ಆಟೋ ಡ್ರೈವರ್ ಗಳಾದ ಶೇಖ್ ರಶೀದ್ (ಮೊ.9060637888), ಶೇಖ್ ಶಬ್ಬೀರ್ (ಮೊ.9900562301) ಹಾಗೂ ರವಿಚಂದ್ರ (ಮೊ.9035853125) ಅವರಿಗೆ ಸಂಪರ್ಕಿಸಬಹುದಾಗಿದೆ.
ರಾತ್ರಿ 10 ರಿಂದ ಬೆಳಗ್ಗೆ 8 ಗಂಟೆಯವರೆಗೆ ಆಟೋ ಡ್ರೈವರ್ ಗಳಾದ ಇಸಾಕ್ (ಮೊ.9538369631) ಹಾಗೂ ಶಕೀಲ ಮಿಯಾ (ಮೊ.7676704268) ಅವರಿಗೆ ಸಂಪರ್ಕಿಸಬಹುದು. ಅಲ್ಲದೆ ಸೂಪರ್‍ವೈಸರ್ ಪ್ರೇಮ ಶಿಲ್ದ್ (ಮೊ.9483855538) ಅವರಿಗೆ ಕರೆ ಮಾಡಬಹುದು.
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು, ರೋಗಿಗಳ ಹಿತದೃಷ್ಟಿಯಿಂದ ದಿನದ 24 ಗಂಟೆಯೂ ಪಾಳಿಯಂತೆ ಕಾರ್ಯನಿರ್ವಹಿಸಲು ಈ ಐದು ಆಟೋಗಳನ್ನೊಳಗೊಂಡಂತೆ ಡ್ರೈವರ್ ಹಾಗೂ ಓರ್ವ ಸುಪರ್‍ವೈಸರ್ ನಿಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ವೆಬ್‍ಸೈಟ್ www.gulbargacity.mrc.gov.in, ಪಾಲಿಕೆಯ ಇ-ಮೇಲ್ ವಿಳಾಸ itstaff_ulb_gulbarga@yahoo.com, ಪಾಲಿಕೆಯ ವಾಟ್ಸಪ್ ಸಂಖ್ಯೆ 8277777728 ಹಾಗೂ ಪಾಲಿಕೆಯ ದೂರವಾಣಿ ಸಂಖ್ಯೆ 08472-260776ಗೆ ಸಂಪರ್ಕಿಸಬಹುದು.