ಇಂದು ದಾಖಲೆಯ 58,395 ಡಿಸ್ಚಾರ್ಜ್- 30,309 ಹೊಸ ಪ್ರಕರಣ, 525 ಸಾವು

Public TV
1 Min Read
corona virus 3

– ಬೆಂಗಳೂರಿನಲ್ಲಿ 8,676 ಕೇಸ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿಧಾನವಾಗಿ ಇಳಿಕೆಯಾಗುತ್ತಿವೆ. ಕರ್ನಾಟಕದಲ್ಲಿ ಇಂದು 30,309 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 525 ಜನರನ್ನು ಮಹಾಮಾರಿ ಬಲಿ ಪಡೆದಿದೆ. ಬೆಂಗಳೂರಿನಲ್ಲಿ 8,676 ಮಂದಿಗೆ ಕೊರೊನಾ ದೃಢಪಟ್ಟಿದ್ದು, 298 ಜನ ಸಾವನ್ನಪ್ಪಿದ್ದಾರೆ.

c 18 5 1

ಇಂದು 30,309 ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 5,75,028ಕ್ಕೆ ಏರಿಕೆಯಾಗಿದ್ದು, ಇಂದು 525 ಜನ ಕೊರೊನಾಗೆ ಬಲಿಯಾಗಿದ್ದು, ಈ ವರೆಗೆ ಒಟ್ಟು 22,838 ಜನ ಸಾವನ್ನಪ್ಪಿದ್ದಾರೆ. ಈ ವರೆಗೆ ಒಟ್ಟು 22,72,374 ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ.

c 18 5 2

ಇಂದು 58,395 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವರೆಗೆ ಒಟ್ಟು 16,74,487 ಜನ ಈ ವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.32.50ರಷ್ಟಿದ್ದು, ಮೃತಪಟ್ಟವರ ಪ್ರಮಾಣ ಶೇ.1.73ರಷ್ಟಿದೆ. ಇಂದು 12,535 ಆಂಟಿಜನ್ ಟೆಸ್ಟ್, 80,712 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 93,247 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 65,181 ಮಂದಿಗೆ ಲಸಿಕೆ ನೀಡಲಾಗಿದೆ.

ಬೆಳಗಾವಿ 2,118, ಮೈಸೂರು 1,916, ಬಳ್ಳಾರಿ 1,799, ತುಮಕೂರು 1,562, ಬೆಂಗಳೂರು ಗ್ರಾಮಾಂತರ 1,339, ಶಿವಮೊಗ್ಗ 1,168 ಹಾಗೂ ಕೋಲಾರದಲ್ಲಿ 1,021 ಪ್ರಕರಣಗಳು ವರದಿಯಾಗಿವೆ.

c 18 5

Share This Article
Leave a Comment

Leave a Reply

Your email address will not be published. Required fields are marked *