ಜೈಪುರ್: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಒ)ಯ ಜೈಪುರ ಘಟಕ 100 ಆಕ್ಸಿಜನ್ ಕಾನ್ಸೆಂಟ್ರೇಟರ್‌ಗಳನ್ನು ರಾಜಸ್ಥಾನ ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದೆ.

ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ಮೂಲಕ ಒದಗಿಸಲಾಗುವ ಆಕ್ಸಿಜನ್ ಕಾನ್ಸೆಂಟ್ರೇಟರ್‌ಗಳನ್ನು ಸಾಂಕ್ರಾಮಿಕ ರೋಗ ನಿಭಾಯಿಸುವ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುತ್ತಿದೆ. ಈ ಕಾನ್ಸೆಂಟ್ರೇಟರ್‌ಗಳಿಗೆ ನಿಮಿಷಕ್ಕೆ 8 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಸಾಮಥ್ರ್ಯವಿದೆ. ಅದನ್ನು ಅಗತ್ಯಕ್ಕೆ ಅನುಗುಣವಾಗಿ ನಿಮಿಷಕ್ಕೆ 10 ಲೀಟರ್‌ಗೆ ಹೆಚ್ಚಿಸಬಹುದು ಎಂದು ಅವರು ಡಬ್ಲ್ಯುಎಚ್‍ಒ ಪ್ರತಿನಿಧಿ ರಾಕೇಶ್ ಶ್ರೀವಾಸ್ತವ ಹೇಳಿದ್ದಾರೆ.


