ಚಿಕ್ಕೋಡಿ(ಬೆಳಗಾವಿ): ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಒಂದು ಕಡೆ ಹರಸಾಹಸಪಡುತ್ತಿದ್ದರೆ ಮತ್ತೊಂದು ಕಡೆ ಸಮಾಜ ಸೇವಕರು ಸರಕಾರದ ಜೊತೆಗೆ ಕೈ ಜೋಡಿಸಲು ಮುಂದಾಗಿದ್ದಾರೆ. ಇದಕ್ಕೆ ಸಾಕ್ಷ ಎನ್ನುವಂತೆ ಸಮಾಜ ಸೇವೆಯ ನಿಟ್ಟಿನಲ್ಲಿ ಇಡಿ ಗ್ರಾಮದ ಪ್ರತಿಯೊಬ್ಬರಿಗೂ ಮಾಸ್ಕ ಹಾಗೂ ಸ್ಯಾನಿಟೈಸರ್ ನೀಡುವ ಕಾರ್ಯಕ್ಕೆ ಇಲ್ಲೊಂದು ಕುಟುಂಬ ಮುಂದಾಗಿದೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದ ಸಮಾಜ ಸೇವಕ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ಹನುಮಂತರಾವ ಇನಾಮದಾರ ಹಾಗೂ ಅವರ ಪುತ್ರ ಬಾಲಚಂದ್ರ ಇನಾಮದಾರ ಎನ್ನುವರು ಅರ್ಜುನವಾಡ ಹಾಗೂ ಕೋಚರಿ ಗ್ರಾಮದ ಪ್ರತಿ ಮನೆ ಮೆನಗಳಿಗೆ ತೆರಳುತ್ತಿದ್ದಾರೆ. ಅಲ್ಲದೆ ಪ್ರತಿಯೊಬ್ಬರಿಗೂ ಮಾಸ್ಕ ವಿತರಣೆ ಮಾಡಿ ಕೊರೊನಾ ಮಹಾಮಾರಿಯ ನಿಯಂತ್ರಣಕ್ಕೆ ಮುಂದಾಗಿ ಮಾನವೀಯತೆ ಮೆರೆಯುತ್ತಿದ್ದಾರೆ.
ಅಲ್ಲದೇ 100 ಲೀಟರ್ ಸ್ಯಾನಿಟೈಸರ್ ಸಿಂಪಡಿಸಿ ದಿನನಿತ್ಯ ಗ್ರಾಮದಲ್ಲಿ ಕೊರೊನಾ ಹರಡದಂತೆ ಕ್ರಮ ಕೈಗೊಂಡಿದ್ದಾರೆ. ಇನಾಮದಾರ ಕುಟುಂಬದ ಈ ಕಾರ್ಯಕ್ಕೆ ಗ್ರಾಮಸ್ಥರು, ಗ್ರಾಮ ಪಂಚಾಯ್ತಿ ಸಿಬ್ಬಂದಿ ಅಲ್ಲದೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.