ಬೆಂಗಳೂರು: ನಟ ಚಂದನ್ ಕುಮಾರ್, ನಟಿ ಕವಿತಾ ಗೌಡ ಧಾರಾವಾಹಿಯಲ್ಲಿ ಯಶಸ್ವಿ ಜೋಡಿಯಾಗಿ ಕಾಣಿಸಿಕೊಂಡಿದ್ದ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಏಪ್ರಿಲ್ ಒಂದರಂದು ಈ ಜೋಡಿ ಎಂಗೇಜ್‍ಮೆಂಟ್ ಕೂಡ ಮಾಡಿಕೊಂಡಿತ್ತು. ಇದೀಗ ಸರಳವಾಗಿ ಚಂದನ್ ಮತ್ತು ಕವಿತಾ ಸಪ್ತಪದಿ ತುಳಿದು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇಂದು ನೂತನ ದಂಪತಿಗಳು ಮಾಸ್ಕ್ ಧರಿಸಿಯೇ ಮದುವೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿದೆ. ಬೆಂಗಳೂರಿನ ಸಹಕಾರ ನಗರದಲ್ಲಿರುವ ಚಂದನ್ ಮನೆಯಲ್ಲಿ ಈ ಮದುವೆ ನೆರವೇರಿದೆ.
View this post on Instagram
ಏಪ್ರಿಲ್ ಒಂದರಂದು ಬೆಂಗಳೂರಿನ ಖಾಸಗಿ ಹೋಟೆಲ್‍ವೊಂದರಲ್ಲಿ ಚಂದನ್ ಮತ್ತು ಕವಿತಾ ಅವರ ನಿಶ್ಚಿತಾರ್ಥ ಕಾರ್ಯಕ್ರಮವು ನೆರವೇರಿತ್ತು. ಆನಂತರ ಮೇ 13-14ರಂದು ನಾವು ಸಪ್ತಪದಿ ತುಳಿಯಲಿದ್ದೇವೆ ಎಂದು ಈ ಜೋಡಿ ಹೇಳಿಕೊಂಡಿತ್ತು. ಕನ್ನಡ ಕಿರುತೆರೆಯ ಯಶಸ್ವಿ ಧಾರಾವಾಹಿಯಲ್ಲಿ ಚಂದು ಮತ್ತು ಚಿನ್ನು ಪಾತ್ರಗಳಲ್ಲಿ ಮಿಂಚಿದವರು ಚಂದನ್ ಕುಮಾರ್ ಮತ್ತು ಕವಿತಾ ಗೌಡ. ಧಾರಾವಾಹಿಯಲ್ಲಿ ಯಶಸ್ವಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಸೆಲೆಬ್ರಿಟಿಗಳು ಈಗ ನಿಜಜೀವನದಲ್ಲೂ ಜೋಡಿಯಾಗಿದ್ದಾರೆ.
View this post on Instagram
ಪ್ರಸ್ತುತ ಕೊರೊನಾ ಲಾಕ್‍ಡೌನ್ ಇರುವುರಿಂದ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ, ಕೋವಿಡ್ ನಿಯಮಗಳ ಅನ್ವಯದಂತೆ ಚಂದನ್ ಮತ್ತು ಕವಿತಾ ಅವರ ವಿವಾಹವು ಸರಳವಾಗಿ ನಡೆದಿದೆ. ಚಂದನ್ ಮತ್ತು ಕವಿತಾ ಮಾಸ್ಕ್ ಧರಿಸಿಯೇ ಮದುವೆಯಾಗಿದ್ದು ವಿಶೇಷವಾಗಿತ್ತು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಇದೀಗ ತಮ್ಮ ಪ್ರೀತಿಗೆ ಮದುವೆಯ ಮುದ್ರೆಯನ್ನು ಒತ್ತಿದೆ.