ಬಿಗ್ಬಾಸ್ ರಿಯಾಲಿಟಿ ಶೋ ಮುಕ್ತಾಯಗೊಂಡ ನಂತರ ಕೆ.ಪಿ ಅರವಿಂದ್ ಮೊದಲ ಬಾರಿಗೆ ಫೇಸ್‍ಬುಕ್ ಲೈವ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅರವಿಂದ್‍ಗೆ ಅಭಿಮಾನಿಗಳು ಹಲವಾರು ಕೆಲವೊಂದು ಪ್ರಶ್ನೆ ಕೇಳಿದ್ದಾರೆ.
ಈ ಮಧ್ಯೆ ಅಭಿಮಾನಿಯೊಬ್ಬರು ದಿವ್ಯಾ ಉರುಡುಗ ಅಥವಾ ಬಿಗ್‍ಬಾಸ್ ಶೋನಲ್ಲಿ ಗೆಲ್ಲುವುದು ಈ ಎರಡರ ಮಧ್ಯೆ ನೀವು ಯಾವುದನ್ನು ಆಯ್ಕೆ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಅರವಿಂದ್ ದಿವ್ಯಾ ಉರುಡುಗರವರು ನನ್ನನ್ನು ಚೂಸ್ ಮಾಡಿಬಿಟ್ಟಿದ್ದಾರೆ. ಹಾಗಾಗಿ ನಾನು ಅವರನ್ನು ಚೂಸ್ ಮಾಡುವುದೇನಿಲ್ಲ. ಬಿಗ್‍ಬಾಸ್ ಮನೆಗೆ ಎಲ್ಲರೂ ಬರುವುದು ಗೆಲ್ಲುವುದಕ್ಕೆ, ನಾನು ಹೋಗಿದ್ದು ಒಳಗಡೆ ಅಲ್ಲಿ ಯಾರನ್ನು ಫ್ರೆಂಡ್ ಮಾಡಿಕೊಳ್ಳುವುದಕ್ಕೆ ಅಲ್ಲ. ಆಟ ಆಡುವ ವೇಳೆ ನಿಮಗೆ ಗೊತ್ತಾಗುತ್ತದೆ. ಇದು ಬಿಗ್‍ಬಾಸ್. ಡಿ ಯೂ ನನ್ನನ್ನು ಈಗಾಗಲೇ ಚೂಸ್ ಮಾಡಿ ಬಿಟ್ಟಿದ್ದಾರೆ ಎಂದು ಉತ್ತರಿಸಿದ್ದಾರೆ.
ನಂತರ ಇದೇ ಲೈವ್‍ನಲ್ಲಿ ಅರವಿಂದ್ ನಾನು ಈಚೆ ಬಂದ ಮೇಲೆ ದಿವ್ಯಾ ಉರುಡುಗಗೆ ಕರೆ ಮಾಡಿದ್ದೆ. ಅವರು ನಿನ್ನೆ ತಾನೇ ಮನೆಗೆ ತೆರಳಿದ್ದಾರೆ. ಚೇತರಿಸಿಕೊಂಡಿದ್ದಾರೆ ಮತ್ತು ಖುಷಿಯಾಗಿದ್ದಾರೆ. ಆದರೆ ಅವರಿಗೆ ಹುಷಾರಾಗಲು ಕೊಂಚ ಸಮಯ ಬೇಕಾಗುತ್ತದೆ. ಇನ್ನೂ ಅವರು ಕೊಟ್ಟಿರುವ ರಿಂಗ್ ನನ್ನ ಕೈನಲ್ಲಿಯೇ ಇದೆ ಅದನ್ನು ಯಾವಾಗಲೂ ತೆಗೆಯುವುದಿಲ್ಲ. ಅವರು ನನಗೆ ಒಲವಿನ ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಬಹಳ ವಾಲ್ಯೂ ಇದೆ. ಅದನ್ನು ಎಂದಿಗೂ ಬಿಚ್ಚಿ ಇಡುವುದಿಲ್ಲ. ಆದರೆ ಸ್ವಲ್ಪ ಟೈಟ್ ಇದೆ ಅದನ್ನು ಯಾವಾಗ ಆಗುತ್ತದೆಯೋ ಅವಾಗ ಸರಿಮಾಡಿಸಿಕೊಳ್ಳುತ್ತೇನೆ ಎಂದಿದ್ದಾರೆ.