ಯಜ್ಞ ನಡೆಸಿದರೆ ಕೋವಿಡ್ 3ನೇ ಅಲೆ ಭಾರತವನ್ನು ಟಚ್ ಮಾಡೋಲ್ಲ: ಉಷಾ ಠಾಕೂರ್

Public TV
1 Min Read
usha thakur

ಭೋಪಾಲ್: ಕೋವಿಡ್-19ಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್ ಅವರು ಮತ್ತೊಂದು ಸಲಹೆ ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ನಾಲ್ಕು ದಿನಗಳ ಕಾಲ ಯಜ್ಞ ಚಿಕಿತ್ಸೆ ನಡೆಸಿದರೆ ಕೋವಿಡ್ 19 ಮೂರನೇ ಅಲೆ ಭಾರತವನ್ನು ತಲುಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸದ್ಯಾ ಭಾರತದಲ್ಲಿ ಎರಡನೇ ಅಲೆ ಹಲವು ಸಮಸ್ಯೆ ಸೃಷ್ಟಿಸುತ್ತಿದೆ. ಎರಡನೇ ಅಲೆಯಿಂದ ಭಾರತ ನರಳುತ್ತಿದೆ. ಆರೋಗ್ಯ ಮೂಲ ಸೌಕರ್ಯ ವ್ಯವಸ್ಥೆಯನ್ನೇ ಅಲುಗಾಡಿಸಿದ್ದು, ಆರೋಗ್ಯ ಕಾರ್ಯಕರ್ತರ ಮೇಲೆ ಅಧಿಕ ಹೊರೆಯಾಗುತ್ತಿದೆ ಎಂದು ಹೇಳಿದ್ದಾರೆ.

ಇಂದೋರ್‍ನಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರ ಶುದ್ಧೀಕರಣಕ್ಕಾಗಿ, ನಾಲ್ಕು ದಿನಗಳ ಕಾಲ ಯಜ್ಞವನ್ನು ಮಾಡಿ. ಇದನ್ನು ಯಜ್ಞ ಚಿಕಿತ್ಸೆ ಎನ್ನತ್ತಾರೆ. ಹಿಂದಿನ ಕಾಲದಲ್ಲಿ, ನಮ್ಮ ಪೂರ್ವಜರು ಸಾಂಕ್ರಾಮಿಕ ರೋಗಗಳನ್ನು ತೊಡೆದುಹಾಕಲು ಯಜ್ಞ ಚಿಕಿತ್ಸೆ ಮಾಡುತ್ತಿದ್ದರು. ಇದನ್ನು ಮಾಡುವುದರಿಂದ ಕೋವಿಡ್ ಮೂರನೇ ಅಲೆ ಭಾರತವನ್ನು ಮುಟ್ಟುವುದಿಲ್ಲ ಎಂದು ಹೇಳಿದ್ದಾರೆ.

Corona 5

ತಜ್ಞರ ಪ್ರಕಾರ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಿದೆಯಂತೆ ಇದಕ್ಕಾಗಿ ಮಧ್ಯಪ್ರದೇಶ ಸರ್ಕಾರವು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸಾಂಕ್ರಾಮಿಕ ರೋಗವನ್ನು ನಾವು ಯಶಸ್ವಿಯಾಗಿ ನಿರ್ವಹಿಸುತ್ತೇವೆ ಎಂದು ಅವರು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *