ಚಿನ್ನದ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಕುಲ್ಫಿ ವಾಲಾ – ವೀಡಿಯೋ ವೈರಲ್

Public TV
1 Min Read
FotoJet 4 18

ಭೋಪಾಲ್: ಕುಲ್ಫಿ-ಫಲೂಡಾ ಮಾರಾಟ ಮಾಡುವ ಇಂದೋರ್ ಮೂಲದ ವ್ಯಕ್ತಿಯೊಬ್ಬರು ಭಾರೀ ಚಿನ್ನದ ಆಭರಣಗಳನ್ನು ಧರಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವೀಡಿಯೋವನ್ನು ಫುಡ್ ಬ್ಲಾಗರ್ ಅಮರ್ ಸಿರೋಹಿ ಎಂಬವರು ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಒಂದೇ ವಾರದೊಳಗೆ, 3.2 ಕೋಟಿ ವ್ಯೂವ್ಸ್ ಗಳಿಸಿದ್ದು, ಟ್ರೆಂಡಿಂಗ್ ವೀಡಿಯೋಗಳಲ್ಲಿ ಒಂದಾಗಿದೆ.

FotoJet 5 16

ಗೋಲ್ಡ್ ಮ್ಯಾನ್ ಕುಲ್ಫಿ ವಾಲಾ ಎಂದೇ ಫೇಮಸ್ ಆಗಿರುವ ನಟವಾರ್ ನೇಮಾ ಕುಲ್ಫಿ ಮಾರಾಟಗಾರರಾಗಿದ್ದು, ಇಂದೋರ್‍ನಲ್ಲಿ ಕುಲ್ಫಿ-ಫಲೂಡಾ ಮಾಡುವವರಲ್ಲಿ ಫೇಮಸ್ ವ್ಯಕ್ತಿಯಾಗಿದ್ದಾರೆ. ಇವರ ಅಂಗಡಿ ನಗರದ ಸಾರಾಫಾ ಬಜಾರ್ ಪ್ರದೇಶದಲ್ಲಿದ್ದು, ಇಲ್ಲಿನ ಆಭರಣಗಳ ಮಾರುಕಟ್ಟೆ ಹಾಗೂ ಸ್ಟ್ರೀಟ್ ಫುಡ್‍ಗಳು ಫೇಮಸ್ ಆಗಿದೆ.

ನಟವಾರ್ ನೇಮಾರವರು ಸುಮಾರು 45 ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದು, ಬಾಲ್ಯದಲ್ಲಿ ತಂದೆಯೊಟ್ಟಿಗೆ ಕುಲ್ಫಿ ಅಂಗಡಿಗೆ ಹೋಗುತ್ತಿದ್ದರು. ಇಂದೋರ್‍ನಲ್ಲಿ ಸಾರಾಫಾ ಬಜಾರ್ ಆಭರಣಗಳಿಗೆ ಫೇಮಸ್ ಆಗಿರುವುದರಿಂದ ಅದರ ಸಂಕೇತಿಕವಾಗಿ ಚಿನ್ನ ಧರಿಸಲು ನಿರ್ಧರಿಸಿದರು.

ವೀಡಿಯೋದಲ್ಲಿ ಕೇಸರ್, ಬಾದಮ್, ಮಾವು, ಸೀತಾಫಲ, ಗೋಡಂಬಿ, ದ್ರಾಕ್ಷಿ ಮತ್ತು ಇತ್ಯಾದಿಗಳನ್ನು ಸೇರಿಸಿ ಕುಲ್ಫಿ-ಫಲೂಡಾವನ್ನು ತಯಾರಿಸಿವುದನ್ನು ಕಾಣಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *