ನನ್ನ ಮೇಲೆ ವರ್ಷಕ್ಕೆ 3 ಕೋಟಿ ಇನ್ವೆಸ್ಟ್ ಮಾಡ್ತಾರೆ

Public TV
2 Min Read
Aravind kp main

ಬಿಗ್‍ಬಾಸ್ ಶೋ ಆರಂಭದ ದಿನ ಅರವಿಂದ್ ಅವರು ವೇದಿಕೆಗೆ ಬೈಕನ್ನು ಏರಿ ಬಂದಿದ್ದರು. ಈ ಕಾರ್ಯಕ್ರಮಕ್ಕೆ ನಾನು ಅಂದು ಹೇಗೆ ತಯಾರಾಗಿದ್ದೆ ಎಂಬುದನ್ನು ಅರವಿಂದ್ ಅವರು ವಿವರಿಸಿದ್ದಾರೆ.

ಅರವಿಂದ್, ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಶಾಂತ್ ಸಂಬರಗಿ ಅವರು ಲಿವಿಂಗ್ ಏರಿಯಾದಲ್ಲಿ ಬೈಕ್ ಜಾಕೆಟ್ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಮಾತುಕತೆಯ ಸಮಯದಲ್ಲಿ,”ನಾನು ಬೈಕಿನಲ್ಲಿ ಸ್ಟೇಜ್‍ಗೆ ಬಂದೆ” ಎಂದು ಅರವಿಂದ್ ಹೇಳುತ್ತಾರೆ. ಇದಕ್ಕೆ ಚಕ್ರವರ್ತಿ,”ಬೈಕನ್ನು ನೀವು ಹಾರಿಸಿದ್ರಾ?” ಎಂದು ಪ್ರಶ್ನಿಸುತ್ತಾರೆ. ಆಗ ಅರವಿಂದ್,”ನಾನು ಬೈಕ್ ಹಾರಿಸಿಲ್ಲ. ಬೈಕಿನಲ್ಲೇ ಇಳ್ಕೊಂಡು ಬಂದೆ. 5 ನಿಮಿಷ ಮೊದಲು ಪ್ರಾಕ್ಟಿಸ್ ಮಾಡಿದ್ದೆ. ಎಲ್ಲೆಲ್ಲಿ ಸ್ಟಾಪ್ ಕೊಡಬೇಕು ಎಂದು ಹೇಳಿದ್ರು. ಅದೇ ರೀತಿ ಮಾಡಿದೆ” ಎಂದು ಉತ್ತರ ನೀಡುತ್ತಾರೆ.

aravind entry

ಪ್ರಶಾಂತ್ ಸಂಬರಗಿ,”450 ಆರ್‍ಆರ್ ಬೈಕ್.. ಸಿಕ್ಕಾಪಟ್ಟೆ ಸೌಂಡ್ ಇರುತ್ತಾ”ಅಂತ ಪ್ರಶ್ನೆ ಮಾಡ್ತಾರೆ. ಇದಕ್ಕೆ ಅರವಿಂದ್, “ಅದು 450 ಆರ್‍ಆರ್ ಟಿವಿಎಸ್ ಫ್ಯಾಕ್ಟರಿ ಬೈಕ್. ನಾನು ಸರ್ಕಿಟ್ ರೇಸ್‍ನಲ್ಲಿ ಇಲ್ಲ. ಈಗ ರೇಸರ್ ಗಳು ಮೊಣಕಾಲು ಅಲ್ಲ. ಭುಜವನ್ನು ಟಚ್ ಮಾಡುತ್ತಾರೆ. ಈ ವೇಳೆ ಬೈಕ್ 120 ರಲ್ಲಿ ಇರುತ್ತದೆ” ಎಂದು ವಿವರಿಸುತ್ತಾರೆ.

aravind chakravarthy prashanth

ಈ ಹಿಂದೆ ಗಾರ್ಡನ್ ಏರಿಯಾದಲ್ಲಿ ತಮ್ಮ ಬೈಕ್ ರೇಸ್ ಜೀವನದ ಅನುಭವ ಕಥೆಯನ್ನು ರಾಜೀವ್, ನಿಧಿ, ಮಂಜು ಅವರಿಗೆ ಅರವಿಂದ್ ವಿವರಿಸುತ್ತಿದ್ದರು. ರಾಜೀವ್ ಅವರು,”ಬೇರೆ ಕಂಪನಿಯರು ಅಪ್ರೋಚ್ ಮಾಡಿಲ್ವ?” ಎಂದು ಕೇಳಿದ್ದರು. ಅದಕ್ಕೆ ಅರವಿಂದ್,”ನನ್ನನ್ನು ಅಪ್ರೋಚ್ ಮಾಡಿದ್ರು. ಸುಮ್ನೆ ದುಡ್ಡು ಸಿಗುತ್ತೆ ಎಂಬ ಕಾರಣಕ್ಕೆ ಬೇರೆ ಕಡೆ ಹೋಗಬಾರದು. ನನಗೆ ಕಂಪನಿ ನನಗೆ ಬಹಳಷ್ಟು ನೀಡಿದೆ. ಒಮ್ಮೆ ಬದಲಾವಣೆ ಮಾಡಿದ್ರೆ ಪ್ರೋಗ್ರಾಂ, ಕ್ರೀವ್ ಎಲ್ಲವೂ ಬದಲಾವಣೆ ಮಾಡಬೇಕಾಗುತ್ತದೆ. ಮತ್ತೆ ಅದಕ್ಕೆ ಅಡ್ಜಸ್ಟ್ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ” ಎಂದು ಹೇಳುತ್ತಾರೆ.

aravind entry 1

“ನಮ್ಮ ಜೀವನದಲ್ಲಿ 45 ವರ್ಷ ಓಡಿಸಬಹುದು. ಆದರೆ ಈ ರೀತಿ ಗಾಯ ಮಾಡಿದ್ರೆ ಯಾರೂ ಓಡಿಸಲ್ಲ. ಮುಂದೆ ನಾನು 5 ವರ್ಷ ಆರಾಮವಾಗಿ ಓಡಿಸಬಹುದು. ಎಲ್ಲ ವಿಷಯಗಳು ನಮ್ಮ ಪರವಾಗಿ ಇರಬೇಕು. ಫಿಟ್‍ನೆಸ್, ಬೈಕ್ ಫಾರ್ ಆಗಿರಬೇಕು, ಮುಖ್ಯವಾಗಿ ಇಂಜುರಿ ಫ್ರೀ ಆಗಿರಬೇಕು” ಎಂದು ವಿವರಿಸುತ್ತಾರೆ.

aravaind kp 1

ತನ್ನನ್ನು ಪ್ರೋತ್ಸಾಹಿಸುತ್ತಿರುವ ಕಂಪನಿಯ ಬಗ್ಗೆ ಮಾತನಾಡಿದ ಅವರು,”ಯುಎಸ್ ವೀಸಾಗೆ ಅಪ್ಲೈ ಮಾಡಿದಾಗ ನನ್ನ ಬ್ಯಾಂಕ್ ಖಾತೆಯಲ್ಲಿ 700 ರೂ. ಇತ್ತು. ಆದರೆ ಅಮೆರಿಕದ ವೀಸಾ ಪಡೆಯಬೇಕಾದರೆ ಬ್ಯಾಂಕ್ ಖಾತೆಯಲ್ಲಿ ಕನಿಷ್ಟ 10 ಸಾವಿರ ಡಾಲರ್ ಇರಬೇಕು. ಮನೆಯವರ ಜೊತೆ ಲಕ್ಷ ಹಣ ಹಾಕಿ ಎಂದರೆ ಅವರಿಗೆ ಶಾಕ್ ಆಗಬಹುದು. ಆದರೆ ಎಲ್ಲವನ್ನೂ ಕಂಪನಿಯೇ ನನಗೆ ನೀಡಿದೆ. ತರಬೇತಿ, ವಿಮಾನ ಟಿಕೆಟ್ ಎಲ್ಲ ಸೇರಿ ವರ್ಷಕ್ಕೆ ನನ್ನ ಮೇಲೆ 3 ಕೋಟಿ ರೂ. ಹಣವನ್ನು ಕಂಪನಿ ಇನ್‍ವೆಸ್ಟ್ ಮಾಡುತ್ತೆ. ಅಷ್ಟೇ ಅಲ್ಲದೇ ಗಾಯವಾದರೂ ವಿಮಾನದಲ್ಲಿ ಟಿಕೆಟ್ ಮಾಡಿ ಕರೆದುಕೊಂಡು ಬರುತ್ತದೆ. ಎಲ್ಲದ್ದಕ್ಕೂ ಟ್ರಸ್ಟ್ ಬಹಳ ಮುಖ್ಯ” ಎಂದು ಕಂಪನಿಯ ಬಗ್ಗೆ ಅಭಿಮಾನದ ಮಾತನ್ನು ಅರವಿಂದ್ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *