ಚಿಕ್ಕಬಳ್ಳಾಪುರ: ಮಹಾಮಾರಿ ಕೊರೊನಾಗೆ ರಾಜ್ಯದಲ್ಲಿ ಇಂದು 592 ಮಂದಿ ಸಾವನ್ನಪ್ಪಿದ್ದಾರೆ ಅಂತ ಚಿಕ್ಕಬಳ್ಳಾಪುರ ದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ನಗರಕ್ಕೆ ಭೇಟಿ ನೀಡಿ ಕೋವಿಡ್ ಸಂಬಂಧ ಜಿಲ್ಲಾಡಳಿತದೊಂದಿಗೆ ಸಭೆ ಸಮಾಲೋಚನೆ ನಡೆಸಿ ಮಾತನಾಡಿದ ಸಚಿವ, ಇಂದು ರಾಜ್ಯದಲ್ಲಿ ಅತಿ ಹೆಚ್ಚಿನ ಸಾವಾಗಿದೆ. ಜನತಾ ಕಫ್ರ್ಯೂ ಮಾದರಿಯ ಲಾಕ್ ಡೌನ್ ಸಮಾಧಾನಕರಾಗಿಲ್ಲ. ಅನುಷ್ಠಾನ ಮಾಡಲಾಗಲಿಲ್ಲ. ಅಳವಡಿಸಿಕೊಳ್ಳಲು ಆಗಿಲ್ಲ. ಹೀಗಾಗಿ ಸೋಂಕಿನ ಸಂಖ್ಯೆ ಕಡಿಮೆ ಆಗಿಲ್ಲ ಎಂದರು.
ಕಳೆದ ವರ್ಷ ಕೊರೊನಾ ಪ್ರಾರಂಭದ ದಿನಗಳಲ್ಲಿ ತೆಗೆದುಕೊಂಡ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. 14 ದಿನಗಳ ಕಾಲ ತೆಗೆದುಕೊಂಡರೆ ಮಾತ್ರ ಈ ಚೈನ್ ಗೆ ಕಡಿವಾಣ ಹಾಕಲು ಸಾಧ್ಯ ಅಂತ ಸಿಎಂ ಗಮನಕ್ಕೆ ತಂದಿದ್ದೇನೆ ಎಂದರು.
ಇನ್ನೂ ಇದೇ ವೇಳೆ ಡಿಜಿಟಲ್ ಎಕ್ಸ್ ರೇ ಗೆ 250 ರೂಪಾಯಿ ಹಾಗೂ ಸಿಟಿ ಸ್ಕ್ಯಾನ್ ಗೆ 1,500 ರೂಪಾಯಿ ದರ ನಿಗದಿ ಮಾಡಿದ್ದು, ಹೆಚ್ಚುವರಿ ಹಣ ಪಡೆಯೋ ಆಸ್ಪತ್ರೆಗಳ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದ್ರು.