ಬಿಗ್ ಬಾಸ್ ಮನೆಯಲ್ಲಿ ಮನೆ ಮಂದಿ ಹಿಂದೆಂದಿಗಿಂತ ಆಕ್ಟಿವ್ ಆಗಿದ್ದಾರೆ. ಒಬ್ಬರಿಗೊಬ್ಬರು ಕ್ಲೋಸ್ ಆಗ್ತಾ ಇದ್ದಾರೆ. ತಮ್ಮ ವೈಯಕ್ತಿಕ ವಿಚಾರಗಳನ್ನ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇರೋದು ಸ್ವಲ್ಪೇ ದಿನ, ಸುದೀಪ್ ಕಿವಿ ಮಾತು ಹೇಳುವ ಮುನ್ನ ಇದೊಂದು ಬಿಗ್ಬಾಸ್ ಮನೆ, ಬಂದಿರೋದು ಆಡೋಕೆ ಅಂತ ನೋಡ್ತಿದ್ದವರು, ಈಗ ಇಲ್ಲಿರುವವರೇ ನಮ್ಮವರು ಅಂತ ಭಾವಿಸ್ತಾ ಇದ್ದಾರೆ. ಅದಕ್ಕೆ ಉದಾಹರಣೆ ಇಂದು ದಿವ್ಯ ಎಸ್ ಹಾಗೂ ವೈಷ್ಣವಿ ಕುಳಿತು ಆಡಿದ ಮಾತುಕತೆ.
ತೀರಾ ವೈಯಕ್ತಿಕ ವಿಚಾರಗಳನ್ನ ಯಾರು ಅಷ್ಟು ಸುಲಭದಲ್ಲಿ ಶೇರ್ ಮಾಡಿಕೊಳ್ಳಲ್ಲ ಅದರಲ್ಲೂ ವೈಷ್ಣವಿ ಸ್ವಲ್ಪ ಚೂಸಿ ಹುಡುಗಿ. ಆದ್ರೆ ಇವತ್ತು ತೀರಾ ವೈಯಕ್ತಿಕ ಆಸೆಯನ್ನ ದಿವ್ಯಾ ಬಳಿ ಹಂಚಿಕೊಂಡಿದ್ದಾರೆ. ದಿವ್ಯಾ ಮತ್ತು ವೈಷ್ಣವಿ ಇಬ್ಬರೆ ಕುಳಿತಿದ್ರು. ಆಗ ದಿವ್ಯಾ, ವೈಷ್ಣವಿಯನ್ನ ಮದುವೆ ವಿಚಾರದ ಬಗ್ಗೆ ಕೇಳ್ತಾರೆ. ನಿಮ್ಗೆ ಮದುವೆ ಬಗ್ಗೆ ಏನ್ ಅನ್ಸುತ್ತೆ ಅಂತ ಅದ್ಕೆ ವೈಷ್ಣವಿ ಅದರ ಬಗ್ಗೆ ಇರುವ ಒಂದು ದೊಡ್ಡ ಕನಸನ್ನೇ ತೆರೆದಿಟ್ಟಿದ್ದಾರೆ.
ಮದುವೆ ಆಗೋದಕ್ಕೆ ನಾನ್ ತುದಿಗಾಲಲ್ಲಿ ನಿಂತಿದ್ದೀನಿ. ಮ್ಯಾರೇಜ್ ಅನ್ನೋದು ತುಂಬಾ ಇಷ್ಟ. ಅದರಲ್ಲಿ ಪ್ರೀತಿ, ಕನೆಕ್ಷನ್, ಕೇರಿಂಗ್, ನಿಮ್ಮೋರು ಅಂತ ಹೇಳಿಕೊಳ್ಳೋಕೆ ಒಂದು ಕಂಪ್ಯಾನಿಯನ್ ಇರುತ್ತೆ. ಗಂಡ ಅನ್ನೋ ಸೆಂಟಿಮೆಂಟ್ ಬೇರೆ. ಎಲ್ಲವನ್ನು ಎಲ್ಲರ ಬಳಿ ಹೇಳಿಕೊಳ್ಳೋಕೆ ಆಗಲ್ಲ. ಅಣ್ಣ ತಮ್ಮ ಇರಬಹುದು, ಅಪ್ಪ ಅಮ್ಮ ಇರಬಹುದು, ಇವನ್ ಗಂಡನ ಬಳಿಯೂ ಎಲ್ಲವನ್ನು ಹೇಳಿಕೊಳ್ತೀವಿ ಅಂತಲ್ಲ. ನಂಗೆ ಫ್ರೆಂಡ್ಸ್ ಯಾರಿಲ್ಲ ಅಂದಾಗ ದಿವ್ಯ ಯಾಕಿಲ್ಲ ಫ್ರೆಂಡ್ಸ್ ಅಂತಾಳೆ. ಅದಕ್ಕೆ ವೈಷ್ಣವಿ. ನಾನು ಎಲ್ಲರನ್ನು ನಂಬಲ್ಲ. ಒಬ್ಬರನ್ನ ನಂಬ್ತೀನಿ, ಗ್ಯಾಂಗ್ ಇರೋದಕ್ಕೆ ಇಷ್ಟಪಡಲ್ಲ ಅಂತಾಳೆ. ಅಲ್ಲಿಗೆ ದಿವ್ಯಾ ಹಾಗೂ ವೈಷ್ಣವಿ ನಡುವಿನ ಮಾತುಕತೆ ಮುಗಿಯುತ್ತೆ.
ರಘು, ಶುಭಾ, ಅರವಿಂದ್, ಶಮಂತ್ ಕೂತು ಮಾತಾಡ್ತಾ ಇರ್ತಾರೆ. ಅಲ್ಲಿಗೆ ಬಂದ ವೈಷ್ಣವಿ ಮಾತುಕತೆಯಲ್ಲಿ ಭಾಗಿಯಾಗ್ತಾರೆ. ಆಗ ಶುಭಾಗೆ ಏನ್ ಅನ್ನಿಸ್ತೋ ಏನೋ ನಿನ್ ಮದ್ವೆ ಆಗೋನು ಎರಡು ವಾರಾನೂ ಇರಲ್ಲ. ಬೋರ್ ಆಗಿ ಓಡಿ ಹೋಗ್ತಾನೆ ಅಂತಾಳೆ. ಇಲ್ಲ ಅವ್ನು ತುಂಬಾ ಖುಷಿ ಪಡ್ತಾನೆ ಅಂತ ವೈಷ್ಣವಿ ಅಂದಾಗ ಅದೇ ಭ್ರಮೆನಲ್ಲಿ ಬದುಕ್ತಾನೆ ಅನ್ನೋ ಅರ್ಥದಲ್ಲಿ ರಘು ಹಾಗೂ ಶುಭಾ ರೇಗಿಸ್ತಾರೆ.