ನವದೆಹಲಿ: ಮುಂದಿನ ಎರಡು ತಿಂಗಳು ಉಚಿತ ಪಡಿತರ, ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂ. ಸಹಾಯ ಧನ ನೀಡಲಾಗುವುದು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಲಾಕ್‍ಡೌನ್ ಜಾರಿಗೆ ತರಲಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ ಸರ್ಕಾರ ಜನರ ನೆರವಿಗೆ ಧಾವಿಸಿದೆ. ದೆಹಲಿಯ 72 ಲಕ್ಷ ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ರೇಷನ್ ಸಿಗಲಿದೆ ಎಂದು ಸಿಎಂ ಹೇಳಿದ್ದಾರೆ.
ದೆಹಲಿಯಲ್ಲಿರುವ ಎಲ್ಲ ಆಟೋ, ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂಪಾಯಿಯ ಆರ್ಥಿಕ ಸಹಾಯ ದೊರೆಯಲಿದೆ. ಸುಮಾರು ಒಂದೂವರೆ ಲಕ್ಷ ಜನರಿಗೆ ಆರ್ಥಿಕ ಸಹಾಯ ಸಿಗಲಿದೆ. ಕಳೆದ ವಾರವೂ ಕೇಜ್ರಿವಾಲ್ ಸರ್ಕಾರ ಕಾರ್ಮಿಕ ವರ್ಗಕ್ಕೂ ನೆರವು ನೀಡಿದ್ದರು.
Lockdown के दौरान ग़रीबों का ख्याल रख रही @ArvindKejriwal सरकार ‼️
➡️सभी मज़दूरों के खाते में ₹5000 की सहायता राशि डाली
➡️सभी Auto और Taxi चालकों को ₹5000-₹5000 की सहायता राशि
➡️72 लाख राशन Card धारकों को अगले 2 महीने मिलेगा मुफ़्त राशन
— AAP (@AamAadmiParty) May 4, 2021
ಇದೇ ವೇಳೆ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಎರಡು ತಿಂಗಳ ಪಡಿತರ ನೀಡುತ್ತಿರೋದರಿಂದ, ಅಷ್ಟು ದಿನ ಲಾಕ್‍ಡೌನ್ ಮಾಡುತ್ತೇವೆ ಎಂದರ್ಥ ಅಲ್ಲ. ಪರಿಸ್ಥಿತಿ ನೋಡಿಕೊಂಡು ಲಾಕ್‍ಡೌನ್ ಸಡಿಲಗೊಳಿಸಲಾಗುತ್ತದೆ. ಶೀಘ್ರದಲ್ಲೇ ಲಾಕ್‍ಡೌನ್ ತೆರವು ಮಾಡುತ್ತೇವೆ. ದೆಹಲಿ ಕೊರೊನಾ ಸಂಕಷ್ಟದಲ್ಲಿದ್ದು, ಆರ್ಥಿಕವಾಗಿ ಸದೃಢರಾಗಿರುವ ಸಶಕ್ತರು ಸಹಾಯಕ್ಕೆ ಮುಂದಾಗಬೇಕು. ನಿಮ್ಮ ಸಾಮಾರ್ಥ್ಯಕ್ಕನುಗುಣವಾಗಿ ಅವಶ್ಯಕತೆ ಇರೋರಿಗೆ ಊಟ ತಲುಪಿಸಿ ಎಂದು ಮನವಿ ಮಾಡಿಕೊಂಡರು.
यह राजनीति का नहीं, इंसानियत का समय है। इस कठिन दौर में मेरी सभी से अपील है कि एक दूसरे की मदद के लिए आगे आएं। pic.twitter.com/4SBQxYOvyJ
— Arvind Kejriwal (@ArvindKejriwal) May 4, 2021