ರನ್ ಶಿಖರವೇರಿದ ಧವನ್- ರೈನಾ ದಾಖಲೆ ಉಡೀಸ್

Public TV
1 Min Read
SHIKAR DAWAN 1

ಅಹಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಅಟಗಾರ ಶಿಖರ್ ಧವನ್ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ರನ್ ಶಿಖರವನ್ನು ಕಟ್ಟುತ್ತಿದ್ದಾರೆ. ಈ ಮೂಲಕ ಧವನ್ ಇದೀಗ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರುವ ಮೂಲಕ ಸುರೇಶ್ ರೈನಾ ದಾಖಲೆಯನ್ನು ಮುರಿದಿದ್ದಾರೆ.

dawan

ಗಬ್ಬರ್ ಸಿಂಗ್ ಖ್ಯಾತಿಯ ಧವನ್ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಉತ್ತಮ ಫಾರ್ಮ್‍ನಲ್ಲಿದ್ದು. ಡೆಲ್ಲಿ ಪರ ರನ್ ಮಳೆ ಸುರಿಸುತ್ತಿದ್ದಾರೆ. ಧವನ್ ಬ್ಯಾಟಿಂಗ್‍ನಲ್ಲಿ ಮಿಂಚುತ್ತಿದ್ದಂತೆ ಐಪಿಎಲ್‍ನ ಹಲವು ದಾಖಲೆಗಳ ಒಡೆಯನಾಗಿ ಕಾಣಿಸಿಕೊಂಡಿದ್ದಾರೆ.

SHIKARDAWAN

ಐಪಿಎಲ್‍ನಲ್ಲಿ ಈ ಮೊದಲು ಅತೀ ಹೆಚ್ಚಿನ ರನ್ ಬಾರಿಸಿದವರಲ್ಲಿ ಆರ್‍ಸಿಬಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ಇದ್ದರು. ಆದರೆ ಇದೀಗ ಧವನ್ ರೈನಾ ಅವರ ರನ್ ದಾಖಲೆಯನ್ನು ಅಳಿಸಿ ಹಾಕಿ ಅವರ ಜಾಗಕ್ಕೆ ಲಗ್ಗೆ ಇಟ್ಟಿದ್ದಾರೆ. ರೈನಾ ಮೂರನೇ ಸ್ಥಾನಕ್ಕೆ ಜಾರಿದ್ದಾರೆ.

Suresh Raina 1

ಐಪಿಎಲ್‍ನ ಈವರೆಗಿನ ಆವೃತ್ತಿಗಳಲ್ಲಿ ವಿರಾಟ್ ಕೊಹ್ಲಿ 199 ಪಂದ್ಯಗಳಿಂದ 5 ಶತಕ ಮತ್ತು 40 ಅರ್ಧಶತಕ ಸಹಿತ 6,076 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಇದೀಗ ಶಿಖರ್ ಧವನ್ 184 ಪಂದ್ಯಗಳಿಂದ 2 ಶತಕ ಮತ್ತು 44 ಅರ್ಧಶತಕ ಹೊಡೆದು 5,577ರನ್ ಗಳಿಸಿದ್ದಾರೆ. ಇವರ ಬಳಿಕ 3ನೇ ಸ್ಥಾನದಲ್ಲಿ ಸುರೇಶ್ ರೈನಾ 200 ಪಂದ್ಯಗಳಿಂದ 1 ಶತಕ ಮತ್ತು 39 ಅರ್ಧಶತಕ ಸಿಡಿಸಿ 5,491ರನ್ ಗಳಿಸಿದ್ದಾರೆ. 4 ಮತ್ತು 5ನೇ ಸ್ಥಾನದಲ್ಲಿ ಕ್ರಮವಾಗಿ ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಇದ್ದಾರೆ.

virat kohli

ಇದು ಮಾತ್ರವಲ್ಲದೇ ಧವನ್ ಈ ಬಾರಿಯ ಐಪಿಎಲ್‍ನಲ್ಲಿ 8 ಪಂದ್ಯಗಳಿಂದ 3 ಅರ್ಧಶತಕ ಸಹಿತ 380 ರನ್ ಹೊಡೆದು ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದಾರೆ. ಇನ್ನೂ ಕೂಡ ಹಲವು ಪಂದ್ಯಗಳು ಬಾಕಿ ಇದ್ದು ಈ ಬಾರಿಯ ಸೀಸನ್‍ನ ಕೊನೆಯಲ್ಲಿ ಶಿಖರ್ ಧವನ್ ರನ್ ಶಿಖರ ಎಷ್ಟಾಗುವುದು ಎಂಬ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *