ಮಂಡ್ಯ: ಚಾಮರಾಜನಗರದಲ್ಲಿ ಆದಂತಹ ದುಸ್ಥಿತಿ ಮಂಡ್ಯಕ್ಕೂ ಬರುತ್ತಾ ಎಂದು ಮಾಜಿ ಸಚಿವ, ಮೇಲುಕೋಟೆ ಜೆಡಿಎಸ್ ಶಾಸಕ ಸಿ.ಎಸ್ ಪುಟ್ಟರಾಜು ಆತಂಕ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಸಾವು ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಅಂಕಿ ಅಂಶ ಪಡೆದ ಮೇಲೆ ನಮ್ಮ ಜಿಲ್ಲೆಯಲ್ಲೂ ಇಂದು ಸಂಜೆಯಿಂದ ಆ ರೀತಿ ಆಗಬಹುದೆಂಬ ಆತಂಕ ಎದುರಾಗಿದೆ. ನಿನ್ನೆ ಡಿಸಿಯಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಅವರು ಆಕ್ಸಿಜನ್ ತರೋಕೆ ಸಾಕಷ್ಟು ಪ್ರಯತ್ನ ಮಾಡ್ತಿದ್ದಾರೆ. ಆದರೂ ಸರ್ಕಾರ ಆಕ್ಸಿಜನ್ ಪೂರೈಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಸರ್ಕಾರ ಆಕ್ಸಿಜನ್ ಒದಗಿಸುವಲ್ಲಿ ವಿಫಲವಾಗಿದೆ. ಇಂದು ಸಂಜೆಯೊಳಗೆ ಆಕ್ಸಿಜನ್ ನೀಡುವುದಾಗಿ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ನಾವೆಲ್ಲರೂ ಇಂದು ಕೆಟ್ಟ ಪರಿಸ್ಥಿತಿ ತಲುಪಿದ್ದೇವೆ. ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಹೆಚ್ಚು ಕೇಸ್ ಗಳು ಬರುತ್ತಿವೆ ಎಂದು ತಿಳಿಸಿದರು.