ಬೈಕ್ ಮಾರಿ ಬಡವರಿಗಾಗಿ ಆಕ್ಸಿಜನ್ ಖರೀದಿಸುತ್ತಿದ್ದಾರೆ ನಟ

Public TV
1 Min Read
harshvardhan

ಬೆಂಗಳೂರು: ಹಿಂದಿ, ತೆಲಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಹರ್ಷವರ್ಧನ್ ರಾಣೆ ಅವರು ಬಡವರಿಗಾಗಿ ಆಕ್ಸಿಜನ್ ಸಿಲಿಂಡರ್ ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ತಮ್ಮ ನೆಚ್ಚಿನ ಬೈಕ್ ಮಾರಾಟ ಮಾಡುತ್ತಿದ್ದಾರೆ.

harshvardhan3

ಕೊರೊನಾ ವೈರಸ್ 2ನೇ ಅಲೆಗೆ ಜನರು ಕಂಗಾಲಾಗಿದ್ದಾರೆ. ಆಸ್ಪತ್ರೆಯಲ್ಲಿ ಬೆಸ್ ಸಿಗದಷ್ಟು ಪರಿಸ್ಥಿತಿ ಕೆಟ್ಟು ಹೋಗಿದೆ. ಸೆಲೆಬ್ರಿಟಿಗಳು ಜನರ ಕಷ್ಟಕ್ಕೆ ತಮ್ಮ ಕೈಲಾದಷ್ಟು ನೆರವಾಗುತ್ತಿದ್ದಾರೆ.   ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

harshvardhan2

ನನ್ನ ಮೋಟರ್ ಸೈಕಲ್ ಮಾರುತ್ತಿದ್ದೇನೆ. ಅದರಿಂದ ಬಂದ ಹಣದಲ್ಲಿ ಆಕ್ಸಿಜನ್ ಖರೀದಿಸಿ ತುಂಬಾ ಅವಶ್ಯಕತೆ ಇರುವವರಿಗೆ ನೀಡುತ್ತಿದ್ದೇನೆ. ಹೈದರಾಬಾದ್‍ನಲ್ಲಿ ಉತ್ತಮ ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಸಲು ನನಗೆ ಸಹಾಯ ಮಾಡಿ ಎಂದು ಬರೆದುಕೊಂಡು ತನ್ನ ಬೈಕ್ ಫೋಟೋವನ್ನು ಹರ್ಷವರ್ಧನ್ ರಾಣೆ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಹರ್ಷವರ್ಧನ್ ರಾಣೆ ಮಾತ್ರವಲ್ಲದೇ ಇನ್ನು ಅನೇಕ ಸೆಲೆಬ್ರೆಟಿಗು ಇಂಥಹ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸುನೀಲ್ ಶೆಟ್ಟಿ ಬೆಂಗಳೂರು, ಮುಂಬೈ ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ದೊರಕಿಸಲು ಯತ್ನಿಸುತ್ತಿದ್ದಾರೆ. ನಟ ಜಗ್ಗೇಶ್ ಬೆಂಗಳೂರಿನಲ್ಲಿರುವ ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ ಮಾಡುತ್ತಿದ್ದಾರೆ. ಸ್ಯಾಂಡಲ್‍ವಡ್ ನಟ ಅರ್ಜುನ್ ಗೌಡ ಕಷ್ಟದ ಸಂದರ್ಭದಲ್ಲಿ ಅಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜನರ ಕಷ್ಟಕ್ಕೆ ಹೆಲ್ಪಲೈನ್‍ಗಳನ್ನು ಕೂಡ ಸೆಲೆಬ್ರಿಟಿಗಳು ಮಾಡಿಕೊಂಡು ಸಹಾಯ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *