ಮುಂದಿನ ವಾರವೇ ಹೊರಗೆ ಹೋಗು ನೀನು- ಪ್ರಿಯಾಂಕಾ

Public TV
2 Min Read
shamanth 2

ಪ್ರಿಯಾಂಕಾ ಮನೆಯೊಳಗೆ ಹೋದ ಮೇಲೆ ಯಾರೊಂದಿಗೆ ಅಷ್ಟಾಗಿ ಬೆರೆಯುತ್ತಿಲ್ಲ ಎಂಬ ಆರೋಪವನ್ನು ಮನೆಮಂದಿ ಆಗಾಗ ಹೇಳುತ್ತಿರುತ್ತಾರೆ. ಈ ವಾರ ಇದೀಗ ಕಳಪೆ ಪಟ್ಟಿಯನ್ನು ನೀಡಿ ಜೈಲಿಗೆ ಕಳುಹಿಸಿದ್ದಾರೆ.

FotoJet 12 1

ಪ್ರಿಯಾಂಕಾ ತಿಮ್ಮೇಶ್ ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಾಲಿಟ್ಟಿದ್ದಾರೆ. ಮನೆಗೆ ಬಂದು ಮೂರು ವಾರ ಕಳೆಯುವುದರೊಳಗೆ ಸಾಕಷ್ಟು ಕಿರಿಕ್, ಜಗಳಗಳು, ಮನಸ್ತಾಪಗಳು ನಡೆದಿವೆ. ಗೇಮ್‍ನಲ್ಲಿ ಸರಿಯಾದ ತೀರ್ಪು ಸಿಗದೇ ಇದ್ದಾಗ, ತೀರ್ಪುಗಾರರ ವಿರುದ್ಧವೇ ಗರಂ ಆಗಿದ್ದಾರೆ. ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಶಮಂತ್ ಜೊತೆಗೆ ಒಂಚೂರು ಕ್ಲೋಸ್ ಆಗಿ ಇರ್ತಾರೆ. ಆದರೆ ಇವಾಗ ಶಮಂತ್‍ಗೆ, ನಿಂಗೆ ನಾಚಿಕೆ ಆಗ್ಬೇಕು, ಮುಂದಿನ ವಾರವೇ ಹೊರಗೆ ಹೋಗು ನೀನು ಅಂತ ಶಾಪ ಹಾಕಿದ್ದಾರೆ.

 ಶಮಂತ್ ಜೈಲಿನಲ್ಲಿರುವ ಪ್ರಿಯಾಂಕಳ ಜೊತೆಗೆ ಮಾತನಾಡಲು ಬಂದಿದ್ದಾರೆ. ಆಗ ಪ್ರಿಯಾಂಕ ನಾನಿಲ್ಲಿಂದ ಹೊರಗೆ ಬಂದಮೇಲೆ ನಿನ್ನ ಜೊತೆ ನಯಾಪೈಸೆಯೂ ಸೇರುವುದಿಲ್ಲ. ಯಾಕೆಂದರೆ ನನಗೆ ಇಷ್ಟಬಂದವರ ಜೊತೆಗೆ ನಾನು ಸೇರುತ್ತೇನೆ. ನಾನಿಲ್ಲಿಗೆ ಸಂಬಂಧಗಳನ್ನು ಹುಟ್ಟುಹಾಕೋಕೆ, ಎಲ್ಲರೊಂದಿಗೆ ಬೆರೆಯುವುದಕ್ಕೆ ಬಂದಿಲ್ಲ. ನಾನು ಆಟ ಆಡಬೇಕು, ನಾನೇನೂ ಅಂತ ಸಾಬೀತು ಮಾಡಬೇಕು ಎಂದು ಸಿಟ್ಟಿನಿಂದ ಶಮಂತ್ ಬಳಿ ಹೇಳಿದ್ದಾರೆ.

 ಹಾಗಾದರೆ ಯಾರು ಜೊತೆ ಮಾತಾಡಲ್ವಾ? ಎಂದು ಶಮಂತ್ ಪ್ರಿಯಾಂಕಾಗೆ ಪ್ರಶ್ನಿಸಿದ್ದಾರೆ. ನಾನಾಗಿಯೇ ಮಾತನಾಡಲ್ಲ. ಮಾತಾಡಿದ್ರೆ, ಮಾತಾಡಿಸ್ತೀನಿ. ಅವರಿಗೂ ನನ್ನ ಜೊತೆ ಮಾತನಾಡಬೇಕು ಅಂತ ಇರಬೇಕಪ್ಪ. ಇಲ್ಲಿಂದ ಹೊರಗೆ ಹೋದಮೇಲೆಯೂ ನೀನೊಬ್ಬ ಬೆಸ್ಟ್ ಫ್ರೆಂಡ್ ಆಗ್ತೀಯಾ ಅಂತ ನಾನು ಅಂದ್ಕೊಂಡಿದ್ದೆ. ಇನ್ನೊಬ್ಬರ ಜೊತೆ ಇನ್ವಾಲ್ಮೆಂಟ್ ಇಲ್ಲ ನೀನು ಯಾಕ್ ಯೋಚನೆ ಮಾಡ್ತೀಯಾ. ನಿನ್ನ ಜೊತೆ ನಾನು ಮಾತಾಡಲ್ವಾ? ಹೇಳು ಎಂದು ಪ್ರಿಯಾಂಕ ಶಮಂತ್‍ಗೆ ಹೇಳಿದ್ದಾರೆ. ಬಿಗ್‍ಬಾಸ್ ಹತ್ರ ನನಗೆ ಅನ್ನಿಸಿದ್ದನ್ನು ನಾನು ಹೇಳಿದ್ದೇನೆ ಎಂದು ಶಮಂತ್ ಹೇಳಿದ್ದಾರೆ.

ಮುಂದಿನ ವಾರವೇ ಈ ಮನೆಯಿಂದ ಹೊರಗೆ ಹೋಗು ನೀನು. ನಂದೇ ಶಾಪ. ನಾಚಿಕೆ ಆಗ್ಬೇಕು. ಕಳಪೆ ಅಂತ ಹೇಳಿಬಿಟ್ಟು, ಕಳಪೆ ಜಾಗದಲ್ಲಿ ಬಂದು ಮಾತಾಡ್ತಾ ಇದಿಯಲ್ಲ. ನೀನು ಬಂದು ಹತ್ತು ವಾರ ಆಗಿದೆ. ಈಗ ಇನ್ನೊಬ್ಬರ ಬಾಯಲ್ಲಿ ಇವಾಗ ಚೆನ್ನಾಗಿ ಆಡ್ತಾ ಇದ್ದಾನೆ ಪರವಾಗಿಲ್ಲ ಅಂತ ಅನ್ನಿಸ್ಕೋತಿಯಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ. ಅಂದ್ರೆ ಇವಾಗಲೇ ಬಿಗ್ ಬಾಸ್ ಕಪ್ ಕೊಟ್ಟು ಕಳಿಸಬೇಕಾಗಿತ್ತಾ? ಎಂದು ಶಮಂತ್ ಹೇಳಿದ್ದಾರೆ. ಮೂರು ವಾರದಲ್ಲೇ ನಿನ್ನನ್ನ ನೀನು ಸಾಬೀತು ಮಾಡ್ಕೋಬೇಕಿತ್ತು. 10 ವಾರದವರೆಗೂ ಕಾಯಬೇಕಿತ್ತಾ? ಅದೇನು ಮಾಡುತ್ತೀಯಾ ನಾನು ನೋಡುತ್ತೇನೆ ಎಂದು ಶಮಂತ್ ಎಂದು ಪ್ರಿಯಾಂಕ ಹೇಳಿದ್ದಾರೆ.

ಮನೆಮಂದಿ ಪ್ರಿಯಾಂಕಾಗೆ ಜೈಲಿಗೆ ಹಾಕಿರುವುದು ಕೋಪಕ್ಕೆ ಕಾರಣವಾಗಿದೆ. ಮನೆಮಂದಿ ಮೇಲೆ ಇರುವ ಸಿಟ್ಟನ್ನು ಪ್ರಿಯಾಂಕಾ ಅಮಾಯಕ ಶಮಂತ್ ಮೇಲೆ ಹಾಕಿದ್ದಾರೆ. ಶಮಂತ್ ಮಾತ್ರ ಏನೂ ಮಾತನಾಡದೆ ಸುಮ್ನೆ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *