ಭಾರತದಲ್ಲಿ ಕೊರೊನಾ ಸ್ಫೋಟ – ಜಾಗತಿಕ ಮಾರುಕಟ್ಟೆ ಮೇಲೆ ಎಫೆಕ್ಟ್

Public TV
2 Min Read
corona a 1

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಹರಡುವಿಕೆ ಬಿಡುವು ಸಹ ಪಡೆಯದೇ ಸುನಾಮಿಯಂತೆ ಪಸರಿಸುತ್ತಿದೆ. ದೇಶದ 10ಕ್ಕೂ ಅಧಿಕ ರಾಜ್ಯಗಳು ಕೊರೊಮಾ ಕಪಿಮುಷ್ಟಿಯಲ್ಲಿ ಸಿಲುಕಿದ್ದು, ಆರೋಗ್ಯ ವ್ಯವಸ್ಥೆ ಐಸಿಯು ಸೇರಿದೆ. ಕೆಲ ರಾಜ್ಯಗಳು ಲಾಕ್‍ಡೌನ್ ಮಾದರಿಯ ಕಟ್ಟು ನಿಟ್ಟಿನ ಕ್ರಮಗಳನ್ನ ತಂದ ಪರಿಣಾಮ ಭಾರತ ಭಾಗಶಃ ಸ್ತಬ್ಧವಾಗಿದೆ. ಕೊರೊನಾದಿಂದ ಆರ್ಥಿಕ ಚುಟುವಟಿಕೆಗಳು ಸ್ಥಗಿತಗೊಂಡಿವೆ. ಭಾರತದಲ್ಲಿ ಕೊರೊನಾ ಸ್ಫೋಟ ಇಡೀ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.

delhi Lockdown

ಇಂಧನ ಬೆಲೆ ಮೇಲೆ ಎಫೆಕ್ಟ್:
ಭಾರತದಲ್ಲಿ ಕೊರೊನಾ ಸ್ಫೋಟದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ 1 ಡಾಲರ್ ಇಳಿಕೆಯಾಗಿದೆ. ವಿಶ್ವದಲ್ಲಿ ಭಾರತ ಇಂಧನ ಆಮದು ಮಾಡಿಕೊಳ್ಳುವ ಮೂರನೇ ಅತಿ ದೊಡ್ಡ ರಾಷ್ಟ್ರ. ಒಂದು ವೇಳೆ ಭಾರತ ಕೊರೊನಾದಿಂದಾಗಿ ಲಾಕ್‍ಡೌನ್ ಮಾಡಿಕೊಂಡ್ರೆ ವಾಹನಗಳ ಸಂಚಾರ ಕಡಿಮೆಯಾಗಲಿದೆ. ಇದರಿಂದ ಭಾರತ ತನ್ನ ಆಮದು ಪ್ರಮಾಣವನ್ನ ಕಡಿಮೆ ಮಾಡಬಹುದು. ಹೀಗಾಗಿ ಒಪೆಕ್ ರಾಷ್ಟ್ರಗಳು ತೈಲ ಬೆಲೆ ಇಳಿಕೆಗೆ ಮುಂದಾಗಿವೆ. ತೈಲ ಬೆಲೆ ಇಳಿಕೆಯಿಂದಾಗಿ ಪೂರೈಕೆಯನ್ನ ಹೆಚ್ಚಿಸಿಕೊಳ್ಳಲು ಒಪೆಕ್ ರಾಷ್ಟ್ರಗಳು ಮುಂದಾಗುತ್ತಿವೆ ಎಂದು ವರದಿಯಾಗಿದೆ.

india usa crude oil storage 4

ಶೇ.1.4ರಷ್ಟು ಇಳಿಕೆ:
ಒಪೆಕ್ ರಾಷ್ಟ್ರಗಳ ಈ ನಿರ್ಧಾರದಿಂದ ಸೋಮವರ ಭಾರತದಲ್ಲಿ ಕಚ್ಚಾ ತೈಲದ ಬೆಲೆ ಶೇ.1.4ರಷ್ಟು ಅಂದ್ರೆ ಪ್ರತಿ ಬ್ಯಾರೆಲ್ ಗೆ 65.22 ಡಾಲರ್ ರಷ್ಟು ಇಳಿಕೆಯಾಗಿದೆ. ಅದೇ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೇಟ್ (ಡಬ್ಲ್ಯೂಟಿಐ) ನಲ್ಲಿ ಕಚ್ಚಾ ತೈಲದ ಬೆಲೆ ಶೇ.1.4ರಷ್ಟು ಕುಸಿತ ಕಂಡಿದೆ. ಇದರ ಮೌಲ್ಯ ಪ್ರತಿ ಬ್ಯಾರಲ್ ಗೆ 61.27ರಷ್ಟು ಡಾಲರ್ ಆಗಿದೆ. ಕಳೆದ ಒಂದು ವರದಲ್ಲಿ ಎರಡೂ ಬೆಂಚ್ ಮಾರ್ಕ್ ನಡುವೆ ಪ್ರತಿಶತ 1ರಷ್ಟು ಇಳಿಕೆಯಾಗಿದೆ.

Saudi aramco oil main

ತೈಲ ಬೆಲೆ ಇಳಿಕೆ ಆಗ್ತಿರೋದ್ಯಾಕೆ?
ಭಾರತ ಮತ್ತು ಜಪಾನ್ ದೇಶಗಳು ಕೊರೊನಾ ಹೊಡೆತಕ್ಕೆ ಸಿಲುಕಿವೆ. ಇಲ್ಲಿ ಹೊಸ ಕೊರೊನಾ ಅಲೆ ವೇಗದಿಂದ ಹರಡಿಕೊಳ್ಳುತ್ತಿದೆ. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರಗಳು ಜನರ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿವೆ. ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತ, ಜಪಾನ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಕೊರೊನಾದಿಂದಾಗಿ ಭಾರತ ತನ್ನ ಆಮದು ಪ್ರಮಾಣವನ್ನ ನಿಧಾನವಾಗಿ ಕಡಿಮೆಗೊಳಿಸುತ್ತಿದೆ. ಇದೆಲ್ಲ ಪರಿಣಾಮ ತೈಲ ಬೆಲೆ ಇಳಿಕೆಯಾಗುತ್ತಿದೆ ಎಂದು ಕಾಮರ್ಸ್ ಬ್ಯಾಂಕ್ ವಿಶ್ಲೇಷಕ ಯುಜೆನ್ ಬೆನ್‍ಬರ್ಗ್ ಹೇಳುತ್ತಾರೆ.

Petrol Diesel

ಬೇಡಿಕೆಯಲ್ಲಿ ಭಾರೀ ಇಳಿಕೆ:
ಏಪ್ರಿಲ್ ನಲ್ಲಿ ಭಾರತ 1,00,000 ಬ್ಯಾರೆಲ್ ಗಳಷ್ಟು ತೈಲ ಬೇಡಿಕೆಯನ್ನ ಕಡಿತಗೊಳಿಸುವ ಸಾಧ್ಯತೆಗಳಿವೆ. ಇದು ಮೇ ನಲ್ಲಿ 1,70,000 ಬ್ಯಾರಲ್ ನಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ. ಭಾರತ ಮಾರ್ಚ್ ನಲ್ಲಿ ಪೆಟ್ರೋಲ್ ಸೇರಿದಂತೆ ಅಂದಾಜು 7,47,000 ಬ್ಯಾರೆಲ್ ತೈಲವನ್ನ ಆಮದು ಮಾಡಿಕೊಂಡಿತ್ತು. ಪೆಟ್ರೋಲ್ ಜೊತೆಯಲ್ಲಿ ಡೀಸೆಲ್ ಬೇಡಿಕೆ ಸಹ ಇಳಿಕೆಯಾಗಲಿದೆ. ಏಪ್ರಿಲ್ ನಲ್ಲಿ ಡೀಸೆಲ್ ಬೇಡಿಕೆ 2,20,000 ಬ್ಯಾರಲ್, ಮೇನಲ್ಲಿ 4,00,000 ಬ್ಯಾರಲ್ ಇಳಿಕೆ ಆಗಬಹುದು ಎಂದು ಕನ್ಸಲಟನ್ಸಿ ಎಫ್‍ಜಿಐ ಅಂದಾಜಿಸಿದೆ.

Share This Article
Leave a Comment

Leave a Reply

Your email address will not be published. Required fields are marked *