ಬಿಗ್ಬಾಸ್ ಮನೆಯ ಕ್ಯೂಟ್ ಕಪಲ್ ಆಗಿರುವ ದಿವ್ಯಾ ಉರುಡುಗ ಮತ್ತು ಅರವಿಂದ್‍ಗೆ ಎದುರಾದ ಪ್ರಶ್ನೆಗಳಿಗೆ ಒಂದೆ ಉತ್ತರ ನೀಡಿದ್ದಾರೆ. ದಿವ್ಯಾ ಹೇಳಿ ಅರವಿಂದ್ರನಾ ನೀವು ಲವ್ ಮಾಡುತ್ತಿಲ್ಲವಾ? ನಿಮ್ಮ ಇಬ್ಬರು ಜೋಡಿ ತುಂಬಾ ಚೆನ್ನಾಗಿದೆ. ನಾನು ದೇವರ ಹತ್ತಿರ ನಾನು ಪ್ರಾರ್ಥಿಸುತ್ತೇನೆ. ಆಚೆನೂ ಹೀಗೆ ಇರಲಿ ನಿಮ್ಮ ಇಬ್ಬರ ಪ್ರೀತಿ ಎಂದು ರಘು ಹೇಳಿದ್ದಾರೆ.
ರಘು ಮಾತನ್ನು ಕೇಳಿದ ದಿವ್ಯಾ ಇಲ್ಲ.. ನಗೆ ಅವಿ ಅಂದರೆ ತುಂಬಾ ಇಷ್ಟ… ನನಗೆ ಅವರು ತುಂಬಾ ಇಷ್ಟವಾಗುತ್ತಾರೆ. ಮುಂದೆ ಹೇಗೆ ಆಗುತ್ತೆ ಎಂದು ಗೊತ್ತಿಲ್ಲ. ನಾನು ಇರುವುದನ್ನು ಹೇಳುತ್ತಿದ್ದೇನೆ. ಅವಿ ಬಂದಾ ಇದೇ ಪ್ರಶ್ನೆಯನ್ನು ಕೇಳಿ. ಯಾಕೆಂದರೆ ಅವರು ಇದೇ ಉತ್ತರವನ್ನು ಕೊಡುತ್ತಾರೆ ಎಂದು ದಿವ್ಯಾ ಹೇಳಿದ್ದಾರೆ. ಈ ವೇಳೆ ರಘು ಅರವಿಂದ್ ದಿವ್ಯಾನಾ ಎಷ್ಟು ಇಷ್ಟಾಪಡುತ್ತಿರಾ ಎಂದು ಕೇಳಿದ್ದಾರೆ. ಅರವಿಂದ್ ಕೂಡಾ ದಿವ್ಯಾ ಹೇಳಿರುವ ಹಾಗೆಯೆ ಮಾತನಾಡಿದ್ದಾರೆ.
ದಿವ್ಯಾ ಎಂದರೆ ನನಗೆ ಬಾರಿ ಇಷ್ಟ ಎಂದಿದ್ದಾರೆ. ಆಗ ರಘು ಪ್ರೀತಿ, ಪ್ರೇಮ ಇದೆಯಾ ಎಂದು ಕೇಳಿದ್ದಾರೆ. ಆಗ ಅರವಿಂದ್ ನಗುತ್ತಾ ಸದ್ಯಕ್ಕೆ ಹಾಗೆನು ಇಲ್ಲಾ. ಮುಂದೆ ನೋಡುವಾ ಸಮಯ ಇದೆ. ಬಿಗ್‍ಬಾಸ್ ಮನೆಯಿಂದ ಆಚೆ ನೋಡುವಾ ಎಂದು ಹೇಳಿದ್ದಾರೆ. ಆಗ ವೈಷ್ಣವಿ, ಶಮಂತ್ ನಾವು ತುಂಬಾ ಎಕ್ಸೈಟೆಡ್ ಆಗಿದ್ದೇವೆ ಎಂದು ಹೇಳಿದ್ದಾರೆ.
ಅವರಿಗೂ ನಾನು ಇಷ್ಟ…. ನನಗೂ ಅವರು ಇಷ್ಟ… ಎಂದು ನಗು ನಗುತ್ತಾ ದಿವ್ಯಾ ಹೇಳಿದ್ದಾರೆ. ಶಮಂತ್ ಭಾವ ಎಂದು ಕರೆಯಲಾ ಎಂದು ದಿವ್ಯಾಗೆ ತಮಾಷೆ ಮಾಡಿದ್ದಾರೆ. ದಿವ್ಯಾ ಮಾತ್ರ ಮತ್ತೆ ಮತ್ತೆ ಇದೇ ವಿಚಾರವನ್ನು ಅರವಿಂದ್ ಬಳಿ ದಿವ್ಯಾಗೆ ಹೇಳಿದ್ದಾರೆ. ಅಲ್ಲಿಯೇ ಇದ್ದ ವೈಷ್ಣವಿ, ರಘು, ಶಮಂತ್ ದಿವ್ಯಾಗೆ ಮತ್ತೆ ಯಾಕೆ ಅರವಿಂದ್ ಬಳಿ ಅದೇ ವಿಚಾರವನ್ನು ಮಾತನಾಡುತ್ತೀದ್ದಿಯಾ? ನಿನಗೆ ಅರವಿಂದ್ ಕಡೆಯಿಂದ ಏನು ಉತ್ತರಬೇಕು ಎಂದು ಕೇಳಿದ್ದಾರೆ. ಈ ವೇಳೆ ದಿವ್ಯಾ ನಗುತ್ತಾ ಸುಮ್ಮನಾಗಿದ್ದಾರೆ.