ಬೆಂಗಳೂರು: ವೀಕೆಂಡ್ ಕರ್ಫ್ಯೂ ಜಾರಿಯಾದಾಗ ಸಿಟಿ ಬಿಟ್ಟು ಊರಿನಕಡೆಗೆ ಜನ ಪ್ರಯಾಣ ಮಾಡಿದ್ದಾರೆ. ಕೆಲವು ಜನರು ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ಆದರೆ ರಿಯಲ್ ಸ್ಟಾರ್ ಉಪೇಂದ್ರ ಅವರು ಮಾತ್ರ ಅಪ್ಪಟ ಕೃಷಿಕನಂತೆ ಕೆಲಸವನ್ನು ಮಾಡುತ್ತಿದ್ದಾರೆ.
ವೀಕೆಂಟ್ ಕರ್ಫ್ಯೂನಲ್ಲಿ ವ್ಯವಸಾಯದತ್ತ ವಾಲಿದ್ದಾರೆ. ತಮ್ಮ ಫಾರ್ಮ್ ಹೌಸ್‍ನಲ್ಲಿ ಗುದ್ದಲಿ ಹಿಡಿದು ಕೆಲಸ ಮಾಡಲು ಶುರು ಮಾಡಿದ್ದಾರೆ. ಕಾಯಕವೇ ಕೈಲಾಸ ಎಂದು ಬರೆದುಕೊಂಡು ಕೆಲಸ ಮಾಡುತ್ತಿರುವ ಕೆಲವು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.
ಕಾಯಕವೇ ಕೈಲಾಸ ???????????? pic.twitter.com/ilHst5iTAL
— Upendra (@nimmaupendra) April 25, 2021
ಕೊರೊನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೆಲೆಬ್ರಿಟಿಸ್ಟಾರ್‍ಗಳು ತಾವು ಇರುವ ಜಗವನ್ನು ಬಿಟ್ಟು ತಮ್ಮ ಫಾರ್ಮ್ ಹೌಸ್‍ನಲ್ಲಿ ವಾಸ್ತವ್ಯ ಹೋಡಿದ್ದಾರೆ. ಶಿವರಾಜ್‍ಕುಮಾರ್, ದರ್ಶನ್, ಯಶ್, ಉಪೇಂದ್ರ ಅವರು ಪಾರ್ಮ್ ಹೌಸ್‍ನಲ್ಲಿ ಇದ್ದಾರೆ. ಕಳೆದ ಬಾರಿಯ ಲಾಕ್‍ಡೌನ್‍ಲ್ಲಿ ಹೂ, ತರಕಾರಿಗಳನ್ನು ಬೆಳದಿದ್ದರು. ಈ ಬಾರಿ ತೋಟದಲ್ಲಿ ಕೆಲಸ ಮಾಡುವುದರಲ್ಲಿ ಬ್ಯೂಸಿಯಾಗಿದ್ದಾರೆ.