ಸೂಪರ್ ಓವರ್‌ನಲ್ಲಿ ಡೆಲ್ಲಿಗೆ ರೋಚಕ ಜಯ – 2ನೇ ಸ್ಥಾನಕ್ಕೆ ಜಿಗಿತ

Public TV
3 Min Read
delhi capitals

ಚೆನ್ನೈ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೂಪರ್ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕವಾಗಿ ಪಂದ್ಯವನ್ನು ಗೆದ್ದುಕೊಂಡಿದೆ.

ಗೆಲ್ಲಲು 160 ರನ್‍ಗಳ ಸವಾಲನ್ನು ಪಡೆದ ಹೈದರಾಬಾದ್ ಅಂತಿಮವಾಗಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸೂಪರ್ ಓವರ್‌ನಲ್ಲಿ ಡೆಲ್ಲಿ ಗೆದ್ದ ಪರಿಣಾಮ ಅಂಕಪಟ್ಟಿಯಲ್ಲಿ 8 ಅಂಕಗಳಿಸಿ ಬೆಂಗಳೂರು ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿ ಎರಡನೇ ಸ್ಥಾನಕ್ಕೆ ಏರಿದೆ. ಹೈದರಾಬಾದ್ 7ನೇ ಸ್ಥಾನದಲ್ಲೇ ಮುಂದುವರಿದಿದೆ.

VRP3460

ಟೈ ಆಗಿದ್ದು ಹೇಗೆ?
ಕೊನೆಯ 12 ಎಸೆತಗಳಿಗೆ 28 ರನ್ ಬೇಕಿತ್ತು. ಕ್ರೀಸ್‍ನಲ್ಲಿ ವಿಜಯ್ ಶಂಕರ್ ಮತ್ತು ಕೇನ್ ವಿಲಿಯಮ್ಸನ್ ಇದ್ದರು. ಅವಿಶ್ ಖಾನ್ ಎಸೆದ 3 ಎಸೆತದಲ್ಲಿ ವಿಜಯ್ ಶಂಕರ್ ಬೌಲ್ಡ್ ಆದರೆ ನಂತರ ಸುಚಿತ್ ಸತತ ಎರಡು ಬೌಂಡರಿ ಹೊಡೆದರು. ಈ ಓವರಿನಲ್ಲಿ 12 ರನ್ ಬಂತು.

ಕೊನೆಯ 6 ಎಸೆತದಲ್ಲಿ 16 ರನ್ ಬೇಕಿತ್ತು. ರಬಡಾ ಎಸೆದ ಮೊದಲ ಬಾಲ್ ವೈಡ್ ಆಯ್ತು. ನಂತರ ಸ್ಟ್ರೈಕ್‍ನಲ್ಲಿದ್ದ ವಿಲಿಯಮ್ಸನ್ ಬೌಂಡರಿ ಸಿಡಿಸಿದರೆ ಎರಡನೇ ಎಸೆತದಲ್ಲಿ ಬೈ ಮೂಲಕ 1 ರನ್ ಬಂತು. 3 ಎಸೆತದಲ್ಲಿ ಸುಚಿತ್ ಸಿಕ್ಸ್ ಸಿಡಿಸಿದರೆ 4ನೇ ಎಸೆತದದಲ್ಲಿ ಬೈ ಮೂಲಕ 1 ರನ್ ಬಂತು. 5 ಎಸೆತದಲ್ಲಿ ವಿಲಿಯಮ್ಸನ್ 1 ರನ್ ಓಡಿದರು. ಈ ವೇಳೆ ಪಂತ್‍ಗೆ ರನೌಟ್ ಮಾಡುವ ಅವಕಾಶ ಸಿಕ್ಕಿತ್ತು. ಕೊನೆಯ ಎಸೆತದಲ್ಲಿ ಸುಚಿತ್ 1 ರನ್ ತೆಗೆದ ಕಾರಣ ಪಂದ್ಯ ಸೂಪರ್ ಓವರ್‌ಗೆ ಹೋಯ್ತು.

Kane Williamson

ಸೂಪರ್ ಓವರ್ ಹೀಗಿತ್ತು:
ಹೈದರಾಬಾದ್‍ನಿಂದ ಡೇವಿಡ್ ವಾರ್ನರ್ ಮತ್ತು ಕೇನ್ ವಿಲಿಯಮ್ಸನ್ ಬ್ಯಾಟಿಂಗ್‍ಗೆ ಇಳಿದರೆ ಡೆಲ್ಲಿ ಸ್ಪಿನ್ನರ್ ಅಕ್ಷರ್ ಪಟೇಲ್ ಅವರನ್ನು ಇಳಿಸಿತ್ತು. ಮೊದಲ ಎಸೆತದಲ್ಲಿ ಯಾವುದೇ ರನ್ ಬರದೇ ಇದ್ದರೆ 2ನೇ ಎಸೆತದಲ್ಲಿ ವಾರ್ನರ್ 1 ರನ್ ತೆಗೆದರು. ಸ್ಟ್ರೈಕ್‍ಗೆ ಬಂದ ವಿಲಿಯಮ್ಸನ್ ನಂತರದ ಎಸೆತದವನ್ನು ಬೌಂಡರಿಗೆ ಅಟ್ಟಿದರೆ 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5 ನೇ ಎಸೆತದಲ್ಲಿ ಲೆಗ್‍ಬೈ ಮೂಲಕ 1 ರನ್ ಬಂದರೆ 6ನೇ ಎಸೆತದಲ್ಲಿ ವಾರ್ನರ್ 1 ರನ್ ಓಡಿದರು.

Kane Williamson 1

ರಶೀದ್ ಖಾನ್ ಎಸೆದ ಮೊದಲ ಓವರ್‍ನಲ್ಲಿ ಪಂತ್ 1 ರನ್ ತೆಗೆದರೆ, ಎರಡನೇ ಎಸೆತದಲ್ಲಿ ಧವನ್ ಲೆಗ್ ಬೈ ಮೂಲಕ 1ರನ್ ಓಡಿದರು. 3ನೇ ಎಸೆತವನ್ನು ಪಂತ್ ಬೌಂಡರಿಗೆ ಅಟ್ಟಿದರು. 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆದತಲ್ಲಿ ಲೆಗ್‍ಬೈ ಮೂಲಕ 1 ರನ್ ಬಂದರೆ ಕೊನೆಯ ಎಸೆತದಲ್ಲೂ ಲೆಗ್‍ಬೈ ಮೂಲಕ 1ರನ್ ಬಂತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದುಕೊಂಡಿತು.

ಹೈದರಾಬಾದ್ ಪರ ಜಾನಿ ಬೈರ್ ಸ್ಟೋ 38 ರನ್(18 ಎಸೆತ, 3 ಬೌಂಡರಿ, 4 ಸಿಕ್ಸರ್), ಕೇನ್ ವಿಲಿಯಮ್ಸನ್ ಔಟಾಗದೇ 66 ರನ್(51 ಎಸೆತ, 8 ಬೌಂಡರಿ) ಸುಚಿತ್ 14 ರನ್(6 ಎಸೆತ, 2 ಬೌಂಡರಿ, 1 ಸಿಕ್ಸ್) ಹೊಡೆಯುವ ಮೂಲಕ ಪಂದ್ಯವನ್ನು ರೋಚಕ ಘಟ್ಟದತ್ತ ತಂದು ನಿಲ್ಲಿಸಿದರು.

delhi capitals 2

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‍ಗೆ ಶಿಖರ್ ಧವನ್ ಮತ್ತು ಪೃಥ್ವಿ ಶಾ 10.2 ಓವರ್‍ಗಳಲ್ಲಿ 81 ರನ್‍ಗಳ ಜೊತೆಯಾಟವಾಡಿದರು. 28 ರನ್(26 ಎಸೆತ, 3 ಬೌಂಡರಿ) ಗಳಿಸಿದ್ದ ಶಿಖರ್ ಧವನ್ ಔಟಾದ ಬೆನ್ನಲ್ಲೇ 53 ರನ್ ಗಳಿಸಿದ್ದ ಪೃಥ್ವಿ ಶಾ ಔಟಾದರು.

ನಾಯಕ ರಿಷಭ್ ಪಂತ್ 37 ರನ್(27 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದರೆ ಕೊನೆಯಲ್ಲಿ ಸ್ಟಿವ್ ಸ್ಮಿತ್ ಔಟಾಗದೇ 34 ರನ್(25 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆಯುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅಂತಿಮವಾಗಿ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *