ದೊಡ್ಮನೆಯಲ್ಲಿರುವ ಪ್ರಾಪರ್ಟಿಗಳಿಗೆ ಹಾನಿಯಾದರೆ ಸ್ಪರ್ಧಿಗಳಿಗೆ ಶಿಕ್ಷೆಯಂತೂ ಖಂಡಿತ ಆಗೇ ಆಗುತ್ತದೆ. ಅದರಂತೆ ಪಾತ್ರೆ ತೊಳೆಯುವ ವೇಳೆ ಗ್ಲಾಸ್ ಹೊಡೆದು ಹಾಕಿದ್ದ ವೈಷ್ಣವಿಗೆ ಬಿಗ್‍ಬಾಸ್ ಚಿಕ್ಕ ಗ್ಲಾಸ್ ಕಳುಹಿಸಿ ತಮ್ಮ ಮುಂದಿನ ಆದೇಶದವರೆಗೂ ಆ ಚಿಕ್ಕ ಗ್ಲಾಸ್‍ನಲ್ಲಿಯೇ ನೀರು ಕುಡಿಯಬೇಕು ಎಂದು ತಿಳಿಸಿದ್ದರು. ಟ್ವಿಸ್ಟ್ ಏನಪ್ಪಾ ಅಂದರೆ ವೈಷ್ಣವಿ ನೀರು ಕುಡಿಯುವ ಮುನ್ನ ಮನೆಯ ಸದಸ್ಯರಿಗೆ ಒಂದು ಜೋಕ್ ಹೇಳಿ, ಅವರನ್ನು ನಗಿಸಿದ ನಂತರ ನೀರು ಕುಡಿಯಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದಾರೆ.
ಅದರಂತೆ ನಿನ್ನೆಯಿಂದ ನೀರು ಕುಡಿಯಬೇಕೆಂದು ಅನಿಸಿದಾಗಲೆಲ್ಲ ವೈಷ್ಣವಿ ಮನೆಯ ಓರ್ವ ಸದಸ್ಯರಿಗೆ ಜೋಕ್ ಹೇಳಿ ನೀರು ಕುಡಿಯುತ್ತಿದ್ದಾರೆ. ಸದ್ಯ ನಿನ್ನೆ ಅರವಿಂದ್‍ಗೆ ವೈಷ್ಣವಿ ಆನೆ ಇರುವೆ ಜೋಕ್ ಹೇಳಿದ್ದಾರೆ.
ಒಮ್ಮೆ ಆನೆ ಇರುವೆ ಹೋಗುತ್ತಿರುತ್ತದೆ. ಇರುವೆ ಚೆನ್ನಾಗಿ ಡ್ರೆಸ್ ಮಾಡಿಕೊಂಡಿರುತ್ತದೆ. ಆದರೆ ಆನೆ ಮರೆತು ಹೋಗಿ ನಾರ್ಮಲ್ ಬಟ್ಟೆ ಹಾಕಿಕೊಂಡು ಹಾಗೆಯೇ ಹೋಗಿರುತ್ತದೆ ಎಂದಾಗ, ಅರವಿಂದ್ ಎರಡು ಇರುವೆ ಒಂದು ಆನೆನಾ ಎಂದು ಕೇಳುತ್ತಾರೆ. ಇಲ್ಲ ಒಂದು ಇರುವೆ ಒಂದು ಆನೆ ಇಬ್ಬರೂ ಕೂಡ ಬೆಸ್ಟ್ ಫ್ರೆಂಡ್ಸ್ ಎಂದು ವೈಷ್ಣವಿ ಹೇಳುತ್ತಾರೆ. ನಂತರ ಇರುವೆ ಆನೆಗೆ ಕೇಳುತ್ತದೆ ಯಾಕೆ ನೀನು ನಾರ್ಮಲ್ ಬಟ್ಟೆ ಹಾಕಿಕೊಂಡಿದ್ಯಾ? ಇನ್ನೊಂದು ಬಟ್ಟೆ ಏನಾಯಿತು ಅಂತಾ ಅದಕ್ಕೆ ಆನೆ ಏನು ಹೇಳಬಹುದು ಎಂದು ವೈಷ್ಣವಿ ಅರವಿಂದ್‍ಗೆ ಕೇಳುತ್ತಾರೆ.
ಆಗ ಅರವಿಂದ್ ನಾನು ನಿನ್ನನ್ನು ಏಪ್ರಿಲ್ ಫೂಲ್ ಮಾಡಿದೆ ಎಂದು ಹೇಳಬಹುದು ಎನ್ನುತ್ತಾರೆ. ಆಗ ವೈಷ್ಣವಿ ಇಲ್ಲ. ಆನೆ ಹೇಳುತ್ತದೆ ನನ್ನ ಬಟ್ಟೆ ಕಳೆದುಹೋಗಿದೆ ಎಂದು ನಗುತ್ತಾ ಹಾಸ್ಯಮಯವಾಗಿ ಹೇಳುತ್ತಾರೆ. ಈ ಜೋಕ್ ಕೇಳಿ ಅರವಿಂದ್ ಅಚ್ಚರಿಯಿಂದ ಜೋರಾಗಿ ನಗುತ್ತಾರೆ.
ಒಟ್ಟಾರೆ ಬಿಗ್‍ಬಾಸ್ ವೈಷ್ಣವಿಗೆ ಶಿಕ್ಷೆ ನೀಡಿದ್ದರೆ, ವೈಷ್ಣವಿ ಜೋಕ್ ಹೇಳುವ ಮೂಲಕ ಮನೆಮಂದಿಗೆ ಗೋಳೋಯ್ದುಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು.