ತರೀಕೆರೆ ಶಾಸಕ ಸುರೇಶ್‍ಗೆ ಕೊರೊನಾ ಪಾಸಿಟಿವ್

Public TV
1 Min Read
ckm tarikere mla ds suresh

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಬಿಜೆಪಿ ಶಾಸಕ ಡಿ.ಎಸ್.ಸುರೇಶ್‍ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಶಿವಮೊಗ್ಗದ ನವಸಂಜೀವಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಸದ್ಯ ಹೋಮ್ ಐಸೋಲೇಶನ್‍ಗೆ ಒಳಗಾಗಿದ್ದಾರೆ.

WhatsApp Image 2021 04 18 at 7.32.15 PM e1618756100529

ಕಳೆದ ಸೋಮವಾರ ಬೆಂಗಳೂರಿಗೆ ಹೋಗಿ ಬಂದಿದ್ದ ಶಾಸಕ ಸುರೇಶ್, ಆರು ದಿನಗಳಿಂದ ಕ್ಷೇತ್ರದಲ್ಲೇ ಇದ್ದರು. ಹಬ್ಬ ಕಳೆದ ಮರುದಿನದಿಂದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇದೀಗ ಸುರೇಶ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆ ಕಳೆದ ನಾಲ್ಕೈದು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಸ್ವತಃ ಶಾಸಕ ಸುರೇಶ್ ಮನವಿ ಮಾಡಿದ್ದಾರೆ.

WhatsApp Image 2021 04 18 at 7.32.15 PM 2 e1618756194350

ಶುಕ್ರವಾರ ಅಜ್ಜಂಪುರ ತಾಲೂಕಿನಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ನನಗೆ ಸ್ವಲ್ಪ ಮೈ ಹುಷಾರಿಲ್ಲ ಎಂದು ಹೇಳಿದ್ದರಂತೆ. ಅಜ್ಜಂಪುರ ತಾಲೂಕಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 60-70 ಜನ ಭಾಗವಹಿಸಿದ್ದರು. ಇಂದು ಕೊರೊನಾ ಧೃಡಪಟ್ಟಿದ್ದು, ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲೇ ಐಸೋಲೇಶನ್‍ನಲ್ಲಿದ್ದಾರೆ. ಅವರ ಅಭಿಮಾನಿಗಳು ಶೀಘ್ರವೇ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *