– ಕಾಂಗ್ರೆಸ್‍ನದ್ದು ನಿರ್ದಿಷ್ಟತೆ ಇಲ್ಲದೆ ಎಡಬಿಡಂಗಿತನ
– ಪಾರ್ಟಿ ಖಜಾನೆ ತುಂಬಿಸಿ ರಾಜ್ಯದ ಖಜಾನೆ ಖಾಲಿ ಮಾಡಿದ್ದಾರೆ ಸಿದ್ದು
ಚಿಕ್ಕಮಂಗಳೂರು: ಕಾಂಗ್ರೆಸ್‍ನದ್ದು ನಿರ್ದಿಷ್ಟತೆ ಇಲ್ಲದೆ ಎಡಬಿಡಂಗಿತನ ಅವ್ರು ಕುಟುಂಬದ ನಾಯಕತ್ವವನ್ನ ಒಪ್ಪಿಕೊಳ್ಳಬೇಕೆಂದು ಬಯಸುತ್ತಾರೆ. ಜನ ಒಪ್ಪಲ್ಲ ಕಾಂಗ್ರೆಸ್‍ಗೆ ರಾಷ್ಟ್ರಮಟ್ಟದಲ್ಲಿ ಜನನಾಯಕತ್ವ ಇಲ್ಲ. ಅಲ್ಲಿರೋದು ಕುಟುಂಬ ನಾಯಕತ್ವ ಮಾತ್ರ ಎಂದು ಹೇಳುವ ಮೂಲಕವಾಗಿ ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ಕಿಡಿಕರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದು, ಬಿಎಸ್‍ವೈ, ಮೋದಿ ಲೀಡ್ರು ನಾನು ಒಪ್ಪುತ್ತೇನೆ. ರಾಹುಲ್, ಪ್ರಿಯಾಂಕಾ ಸೋನಿಯಾರನ್ನ ಲೀಡ್ರು ಎನ್ನಲು ಆಗಲ್ಲ ಕಾಂಗ್ರೆಸ್‍ಗೆ ನಿರ್ದಿಷ್ಟವಾದ ತಾತ್ವಿಕ ತಳಹದಿಯೂ ಇಲ್ಲ, ರಾಷ್ಟ್ರ ನಾಯಕತ್ವವೂ ಇಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಕೇರಳದಲ್ಲಿ ಕಮ್ಯುನಿಷ್ಟರನ್ನ ವಿರೋಧಿಸಿ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್‍ನದ್ದು ನಿರ್ದಿಷ್ಟತೆ ಇಲ್ಲದೆ ಎಡಬಿಡಂಗಿತನವಾಗಿದೆ. ಅವ್ರು ಕುಟುಂಬದ ನಾಯಕತ್ವವನ್ನ ಒಪ್ಪಿಕೊಳ್ಳಬೇಕೆಂದು ಬಯಸುತ್ತಾರೆ, ಸೋನಿಯಾ ಗಾಂಧಿ ರಾಜೀವ್ ಗಾಂಧಿ ಪತ್ನಿ ಅಷ್ಟೆ. ರಾಹುಲ್-ಪ್ರಿಯಾಂಕ, ರಾಜೀವ್ ಗಾಂಧಿ-ಸೋನಿಯಾ ಗಾಂಧಿ ಮಕ್ಕಳು ಆಗಿದ್ದಾರೆ. ನಾಯಕತ್ವವು ಇಲ್ಲ, ಗೊತ್ತು, ಗುರಿ ಇಲ್ಲದೆ ಮುಳುಗುತ್ತಿರುವ ಹಡಗು ಎಂದು ಹೇಳುವ ಮೂಲಕವಾಗಿ ನಗೆಚಟಾಕೆ ಹಾರಿಸಿದ್ದಾರೆ.
ರಾಹುಲ್ ಗಾಂಧಿ ಕಂಡ್ರೆ ಬಿಜೆಪಿಗೆ ಭಯ, ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಸ್ವತಃ ಖರ್ಗೆಯೇ ಗೆಲ್ಲಲಿಲ್ಲ. ಹೈಕಮಾಂಡ್‍ಗೆ ನಜರ್ ರೂಪಿಸುವ ಕಲ್ಚರ್ ಕಾಂಗ್ರೆಸ್‍ನಲ್ಲಿದೆ. ರಾಹುಲ್ ನೇತೃತ್ವದಲ್ಲಿ ಯಾವ ಚುನಾವಣೆ ಗೆದ್ದಿದ್ದಾರೆ, ನಮಗ್ಯಾಕೆ ಭಯ ಇರುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಗೆದ್ದಿರೋದು ಕೂಡ 50 ಪರ್ಸೆಂಟ್ ಮೈನಾರಿಟಿ ಇರೋ ಕ್ಷೇತ್ರದಲ್ಲಿ ಆಗಿದೆ. ರಾಹುಲ್ ನೇತೃತ್ವದ ಚುನಾವಣೆಯಲ್ಲಿ ರಾಜ್ಯದಲ್ಲಿ ಸಿಕ್ಕಿದ್ದು ಒಂದೇ ಕ್ಷೇತ್ರವಾಗಿದೆ. ಬಲವಾದ ಅಭ್ಯರ್ಥಿ ಹಾಕಿ ಕ್ಯಾಂಪೇನ್ ಮಾಡಿದ್ರು ಅದನ್ನ ಬಿಡ್ತಿರ್ಲಿಲ್ಲ. ನಮ್ಮ ಪೂರ್ವ ತಯಾರಿಯ ಕೊರತೆಯಿಂದ ಒಂದು ಕ್ಷೇತ್ರ ಗೆದ್ದರು ಅಷ್ಟೆ. ರಾಹುಲ್ ಗಾಂಧಿ ಕರ್ಕೊಂಡ್ ಬಂದು ಕ್ಯಾಂಪೇನ್ ಮಾಡ್ಸಿದ್ರೆ ಅದನ್ನೂ ಗೆಲ್ತಿದ್ವಿ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಮಾಜಿ ಸಿಎಂ ಖಜಾನೆಯನ್ನ ಭರ್ತಿ ಮಾಡಿ ಹೋಗಿಲ್ಲ, ಖಾಲಿ ಮಾಡಿ ಹೆಚ್ಚುವರಿ ಸಾಲ ಮಾಡಿ ಹೋಗಿದ್ದಾರೆ. ವಿಜಯನಗರದ ಅರಸರಂತೆ ಶ್ರೀಮಂತಿಕೆ ತುಂಬಿಸಿ ಹೋಗಿದ್ರೆ ಈ ರೀತಿ ಹೇಳಬಹುದಿತ್ತು. ಅವರ ಮನೆ ಖಜಾನೆ ತುಂಬಿಸಿಕೊಂಡು ಹೋಗಿದ್ದಾರೆ. ಪಾರ್ಟಿ ಖಜಾನೆ ತುಂಬಿಸಿ ರಾಜ್ಯದ ಖಜಾನೆ ಖಾಲಿ ಮಾಡಿ ಹೋಗಿದ್ದಾರೆ.ಅವ್ರು ಇದ್ದಾಗ ಏನೇನು ಕೊಟ್ರು ಅನ್ನೋದರ ಪಟ್ಟಿ ಇದೆ ಎಂದು ಸಿದ್ದು ವಿರುದ್ಧ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.