-ಅಭಿಮಾನಿಗಳಲ್ಲಿ ಕ್ಷಮೆ ಯಾಚನೆ
ಚೆನ್ನೈ: 14ನೇ ಆವೃತ್ತಿಯ ಐಪಿಎಲ್‍ನ ಐದನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಬಹುದಾದ ಪಂದ್ಯವನ್ನು ಸೋತ ಬಳಿಕ ಕೆಕೆಆರ್ ಮಾಲೀಕರಾಗಿರುವ ಶಾರುಖ್ ಖಾನ್ ತಂಡದ ನಿರ್ವಾಹಣೆ ನಿರಾಸೆ ಮೂಡಿಸಿದೆ ಎಂದಿದ್ದಾರೆ.
ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮೊರ್ಗನ್ ಸಾರಥ್ಯದ ಕೆಕೆಆರ್ ತಂಡ ಮುಂಬೈ ನೀಡಿದ 153 ರನ್‍ಗಳ ಟಾರ್ಗೆಟ್‍ನ್ನು ಸುಲಭವಾಗಿ ಗುರಿಮುಟ್ಟಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಆರಂಭದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಕೆಕೆಆರ್ ತಂಡ ಕೊನೆಯಲ್ಲಿ ಮುಂಬೈ ಬೌಲರ್ ಗಳ ದಾಳಿಗೆ ಕುಸಿತ ಕಂಡು ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 142 ರನ್‍ಗಳಿಸಿ 10ರನ್ ಗಳ ಅಂತರದಿಂದ ಸೋಲು ಕಂಡಿತು.
Disappointing performance. to say the least @KKRiders apologies to all the fans!
— Shah Rukh Khan (@iamsrk) April 13, 2021
ಈ ಸೋಲಿನ ಬಳಿಕ ಕೆಕೆಆರ್ ತಂಡದ ಮಾಲೀಕರಾದ ಶಾರುಖ್ ಖಾನ್, ಕೆಕೆಆರ್ ತಂಡದ ಸೋಲಿನಿಂದ ಬಾರಿ ನಿರಾಸೆಯಾಗಿದ್ದು, ಎಲ್ಲ ಅಭಿಮಾನಿಗಳಲ್ಲಿ ನಾನು ಕ್ಷಮೆಯಾಚಿಸುತ್ತೇನೆಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
ಈ ಮೊದಲು ಪಂದ್ಯಾಟದ ಪ್ರಶಸ್ತಿ ಸಮಾರಂಭದಲ್ಲಿ ಕೆಕೆಆರ್ ತಂಡದ ನಾಯಕ ಮಾರ್ಗನ್ ಈ ಸೋಲು ನಿರಾಸೆಯಾಗಿದೆ. ಕೆಲವು ತಪ್ಪುಗಳಿಂದ ಸೋತಿದ್ದೇವೆ ಮುಂದಿನ ಪಂದ್ಯದಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮೈದಾನಕ್ಕಿಳಿಯುತ್ತೇವೆ ಎಂದಿದ್ದಾರೆ.