Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Bengaluru City

ಕಷ್ಟದ ಪರಿಸ್ಥಿತಿಯಲ್ಲೂ ಅಭಿಮಾನಿಗಳಿಗೆ ಸಿಹಿ ಹಂಚಿದ ಕಲಾವಿದರು

Public TV
Last updated: April 13, 2021 4:20 pm
Public TV
Share
4 Min Read
FotoJet 12 8
SHARE

ಬೆಂಗಳೂರು: ಯುಗಾದಿ ಹಬ್ಬದಂದು ಪ್ರತಿವರ್ಷ ಸ್ಯಾಂಡಲ್‍ವುಡ್‍ನಲ್ಲಿ ಸ್ಟಾರ್ ನಟ, ನಟಿಯರ ಸಿನಿಮಾಗಳು ಥಿಯೇಟರ್‍ನಲ್ಲಿ ರಿಲೀಸ್ ಆಗುತ್ತಿದ್ದವು. ಆದರೆ ಈ ಬಾರಿ ಕೋವಿಡ್-19 ಭೀತಿ ಎದುರಾಗಿರುವುದರಿಂದ ಯಾವುದೇ ಸಿನಿಮಾಗಳು ಬಿಗ್ ಸ್ಕ್ರೀನ್‍ನಲ್ಲಿ ತೆರೆಕಂಡಿಲ್ಲ.

Srimurali AB

ಕೊರೊನಾ ಮಹಾಮಾರಿಗೆ ಜನ ಸಾಮಾನ್ಯರಷ್ಟೇ ಅಲ್ಲದೆ ಸ್ಟಾರ್ ನಟರು ಕೂಡ ಬೇಸತ್ತಿದ್ದಾರೆ. ಸದ್ಯ ಈ ಎಲ್ಲದರ ಮಧ್ಯೆ ಯುಗಾದಿ ಹಬ್ಬದ ಈ ದಿನದಂದು ಸಿನಿತಾರೆಯರೂ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಬೆಲ್ಲದಂತೆ ಸಿಹಿಯಾಗಿ ಶುಭಾಶಯ ಕೋರಿದ್ದಾರೆ.

jaggesh1

ನಟ ನವರಸ ನಾಯಕ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ‘ತಂದೆತಾಯಿ ರಾಯರ ಕೃಪೆಯಿಂದ ಈ ಸಂವತ್ಸರ ಸಮಸ್ತ ಮನುಕುಲದ ಮನೋವಾಂಛ ಫಲಗಳನ್ನು ಈಡೇರಿಸಿ, ನಮ್ಮ ಕಾಡುತ್ತಿರುವ ಕೊರೊನಾ ವಿಶ್ವದಿಂದ ತೊಲಗಿ. ಕ್ಷೇಮ ವಿಜಯ ಆಯು ಆರೋಗ್ಯ ಮಳೆ, ಬೆಳೆ, ಧನ, ಕನಕ, ವಸ್ತು, ವಾಹನ ಸಂತಸ ದೈವಭಕ್ತಿ ಸರ್ವರಿಗೂ ಪ್ರಾಪ್ತವಾಗಲಿ ಎಂದು ರಾಯರಲ್ಲಿ ಪ್ರಾರ್ಥನೆ. ಹಿಂದುಗಳ ನಿಜ ಹೊಸವರ್ಷ ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ತಂದೆತಾಯಿ ರಾಯರ ಕೃಪೆಯಿಂದ ಈ ಸಂವತ್ಸರ ಸಮಸ್ತ ಮನುಕುಲದ ಮನೋವಾಂಛ ಪಲಗಳನ್ನು
ಈಡೇರಿಸಿ..ನಮ್ಮ ಕಾಡುತ್ತಿರುವ ಕೊರೋನ ವಿಶ್ವದಿಂದ ತೊಲಗಿ..
ಕ್ಷೇಮ ವಿಜಯ ಆಯು ಆರೋಗ್ಯ ಮಳೆ ಬೆಳೆ ಧನಕನಕ ವಸ್ತುವಾಹನ ಸಂತಸ ದೈವಭಕ್ತಿ ಸರ್ವರಿಗು ಪ್ರಾಪ್ತವಾಗಲಿ ಎಂದು ರಾಯರಲ್ಲಿ ಪ್ರಾರ್ಥನೆ…..
ಹಿಂದುಗಳ ನಿಜ ಹೊಸವರ್ಷ ಯುಗಾದಿ ಹಬ್ಬದ ಶುಭಾಶಯಗಳು.. ಹರಿಃಓಂ.. pic.twitter.com/7GOYwHLZcd

— ನವರಸನಾಯಕ ಜಗ್ಗೇಶ್ (@Jaggesh2) April 12, 2021

ಅಭಿಮಾನಿಗಳ ಪ್ರೀತಿಯ ದಾಸ ನಟ ದರ್ಶನ್, ‘ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಿರಲಿ. ಸುಖ, ಸಮೃದ್ಧಿ, ಶಾಂತಿ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ ಎಂದು ಆಶಿಸುತ್ತೇನೆ ನಿಮ್ಮ ದಾಸ ದರ್ಶನ್ ಎಂದು ಟ್ವೀಟ್ ಮಾಡಿದ್ದಾರೆ.

ಸರ್ವರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು. ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಿರಲಿ. ಸುಖ, ಸಮೃದ್ಧಿ, ಶಾಂತಿ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ ಎಂದು ಆಶಿಸುತ್ತೇನೆ
ನಿಮ್ಮ ದಾಸ ದರ್ಶನ್ pic.twitter.com/fBpNxTumbS

— Darshan Thoogudeepa (@dasadarshan) April 13, 2021

‘ಚೈತ್ರಮಾಸದ ಪ್ರಾರಂಭದ ಸೂರ್ಯೋದಯದ ವೇಳೆ, ಚತುರ್ಮುಖ ಬ್ರಹ್ಮನು ಸಂಪೂರ್ಣ ಜಗತ್ತಿನ ಸೃಷ್ಟಿ ಮಾಡಿದನು ಎಂಬುದಾಗಿ ಯುಗಾದಿ ಬಗ್ಗೆ ಸಂಸ್ಕೃತ ಶ್ಲೋಕ ಹೇಳುತ್ತದೆ. ಹೊಸ ವರ್ಷದ ಬದುಕು ಹಬ್ಬವಾಗಿರಲು ವಾಸ್ತವಕ್ಕೆ ಮಾಸ್ಕೇ ಬೆಲ್ಲ, ಸ್ಯಾನಿಟೈಸರೇ ಬೇವು. ನವ ವಸಂತದ ಅಲೆಯಲಿ, ಜಗತ್ತಿನ ಸಂಕಷ್ಟಗಳು ದೂರಾಗಲಿ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು’ ಎಂದು ನಟ ಗೋಲ್ಡನ್ ಸ್ಟಾರ್ ಗಣೇಶ್ ಶುಭಾಶಯ ತಿಳಿಸಿದ್ದಾರೆ.

ಚೈತ್ರಮಾಸದ ಪ್ರಾರಂಭದ ಸೂರ್ಯೋದಯದ ವೇಳೆ; ಚತುರ್ಮುಖ ಬ್ರಹ್ಮನು ಸಂಪೂರ್ಣ ಜಗತ್ತಿನ ಸೃಷ್ಟಿ ಮಾಡಿದನು ಎಂಬುದಾಗಿ ಯುಗಾದಿ ಬಗ್ಗೆ ಸಂಸ್ಕೃತ ಶ್ಲೋಕ ಹೇಳುತ್ತದೆ..
ಹೊಸ ವರ್ಷದ ಬದುಕು ಹಬ್ಬವಾಗಿರಲು ವಾಸ್ತವಕ್ಕೆ
ಮಾಸ್ಕೇ ಬೆಲ್ಲ, ಸ್ಯಾನಿಟೈಸರೇ ಬೇವು.
ನವ ವಸಂತದ ಅಲೆಯಲಿ ಜಗತ್ತಿನ ಸಂಕಷ್ಟಗಳು ದೂರಾಗಲಿ.
ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು..

— Ganesh (@Official_Ganesh) April 13, 2021

ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಈ ನಿಮ್ಮ ಕಿಚ್ಚನಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಯುಗಾದಿ ಹಬ್ಬದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

Happy New year to all you friends.
Have a gud one.
???????????? pic.twitter.com/aS46sTOd3n

— Kichcha Sudeepa (@KicchaSudeep) April 13, 2021

ರೋರಿಂಗ್ ಸ್ಟಾರ್ ಶ್ರೀ ಮುರುಳಿ ತಮ್ಮ ಮುಂದಿನ ಮದಗಜ ಸಿನಿಮಾದ ಮುದ್ದಾದ ಪೋಸ್ಟರ್‍ವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ‘ಯುಗಾದಿ ಹಬ್ಬದ ಶುಭಾಶಯಗಳು’ ಎಂದು ವಿಶ್ ಮಾಡಿದ್ದಾರೆ.

ಯುಗಾದಿ ಹಬ್ಬದ ಶುಭಾಶಯಗಳು. Presenting MADHAGAJA ????♥️ Lovesome teaser… https://t.co/9kIBirIsq5 “all we need is some love” tc all! pic.twitter.com/2YX4iJ3axv

— SRIIMURALI (@SRIMURALIII) April 13, 2021

ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ರಯಲ್ ಸ್ಟಾರ್ ಉಪೇಂದ್ರ ಜೊತೆ ಅಭಿನಯಿಸುತ್ತಿರುವ ಲಗಾಮ್ ಸಿನಿಮಾದ ಪೋಸ್ಟರ್‍ನನ್ನು ಶೇರ್ ಮಾಡಿಕೊಳ್ಳುವುದರ ಜೊತೆಗೆ ‘ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಯುಗಾದಿ, ಎಲ್ಲರ ಬದುಕಿನಲ್ಲಿ ಹೊಸ ಸಂತೋಷ ಸಂಭ್ರಮ ತರಲಿ, ನಿಮ್ಮ ಜೀವನದ ಸಿಹಿ ಹೆಚ್ಚಿಸಲಿ’ ಎಂದು ಶುಭಾ ಹಾರೈಸಿದ್ದಾರೆ.

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ????❤️ ಈ ಯುಗಾದಿ, ಎಲ್ಲರ ಬದುಕಿನಲ್ಲಿ ಹೊಸ ಸಂತೋಷ ಸಂಭ್ರಮ ತರಲಿ, ನಿಮ್ಮ ಜೀವನದ ಸಿಹಿ ಹೆಚ್ಚಿಸಲಿ ????

Team “LAGAAM” wishes you a #HappyUgadi ???????????? pic.twitter.com/uH9ElPZ2QT

— HariPrriya (@HariPrriya6) April 13, 2021

ನಟ ರಕ್ಷಿತ್ ಶೆಟ್ಟಿ, ಸಮಸ್ತ ನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ಶುಭವ ತರಲಿ ಯುಗಾದಿ ಎಂದು ವಿಶ್ ಮಾಡಿದ್ದಾರೆ.

ಸಮಸ್ತ ನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ಶುಭವ ತರಲಿ ಯುಗಾದಿ ????#HappyUgadi ✨ https://t.co/OMC4dpDnxG

— Rakshit Shetty (@rakshitshetty) April 13, 2021

TAGGED:bengalurugreetingsPublic TVugadiಪಬ್ಲಿಕ್ ಟಿವಿ Sandalwood starsಬೆಂಗಳೂರುಯುಗಾದಿಶುಭಾಶಯಸ್ಯಾಂಡಲ್‍ವುಡ್ ತಾರೆಯರು
Share This Article
Facebook Whatsapp Whatsapp Telegram

Cinema Updates

Sanjay Dutt 4
ನಮ್ಮ ದೇಶದ ತಾಕತ್ ಏನಂತ ಪ್ರಪಂಚಕ್ಕೆ ಗೊತ್ತಾಗಿದೆ: ಸಂಜಯ್ ದತ್
7 hours ago
narendra modi with sudeep
‘ಆಪರೇಷನ್ ಸಿಂಧೂರ’ ಮೆಚ್ಚಿ ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್ ಪತ್ರ
11 hours ago
ravi mohan kenishaa
ಡಿವೋರ್ಸ್ ಘೋಷಿಸಿದ ಬೆನ್ನಲ್ಲೇ ಗಾಯಕಿ ಜೊತೆ ಕಾಣಿಸಿಕೊಂಡ ರವಿ ಮೋಹನ್
1 day ago
rajamouli
ಆರ್ಮಿಗೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡಬೇಡಿ: ರಾಜಮೌಳಿ ಮನವಿ
1 day ago

You Might Also Like

ajit doval wang yi
Latest

ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನು ಚೀನಾ ಖಂಡಿಸುತ್ತದೆ: ಅಜಿತ್‌ ದೋವಲ್‌ಗೆ ಫೋನ್‌ ಕರೆಯಲ್ಲಿ ಚೀನಾ ಸ್ಪಷ್ಟನೆ

Public TV
By Public TV
2 hours ago
nagrota indian army
Latest

ನಾಗ್ರೋಟಾದಲ್ಲಿ ಭಾರತೀಯ ಸೇನೆ & ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ

Public TV
By Public TV
2 hours ago
big bulletin 10 may 2025 part 1
Big Bulletin

ಬಿಗ್‌ ಬುಲೆಟಿನ್‌ 10 May 2025 ಭಾಗ-1

Public TV
By Public TV
2 hours ago
wang yi pakistan
Latest

ಉಗ್ರರ ಪೋಷಕ ಪಾಕಿಸ್ತಾನಕ್ಕೆ ಮತ್ತೆ ಬೆಂಬಲ ಘೋಷಿಸಿದ ಚೀನಾ

Public TV
By Public TV
2 hours ago
big bulletin 10 may 2025 part 2
Big Bulletin

ಬಿಗ್‌ ಬುಲೆಟಿನ್‌ 10 May 2025 ಭಾಗ-2

Public TV
By Public TV
3 hours ago
big bulletin 10 may 2025 part 3
Big Bulletin

ಬಿಗ್‌ ಬುಲೆಟಿನ್‌ 10 May 2025 ಭಾಗ-3

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Welcome Back!

Sign in to your account

Username or Email Address
Password

Lost your password?