ದಿವ್ಯಾ ಸ್ಟೈಲ್ ತೋರಿಸಿದ್ಯಾಕೆ ರಘು?

Public TV
1 Min Read
Divya Raghu e1618195960468

ಒಂಟಿ ಮನೆಗೆ ಸಿಂಗಲ್ ಆಗಿ ಬಂದಿದ್ದ ಸೆಲೆಬ್ರಿಟಿಗಳು ಅಲ್ಲಿದ್ದವರ ಜೊತೆ ಜಂಟಿಯಾಗೋದು ಕಾಮನ್. ಈ ಹಿಂದೆಯೂ ಇಂತಹ ಪ್ರೇಮ ಕಥೆಗಳಿಗೆ ಬಿಗ್‍ಬಾಸ್ ಸಾಕ್ಷಿಯಾಗಿತ್ತು. ಈಗ ಮತ್ತೊಂದು ಅಂತಹುವುದೇ ಮುದ್ದಾದ ಪ್ರೇಮ ಕಥೆ ಹೊರ ಬಂದಿದೆ. ಮನೆ ಮಂದಿಯೆಲ್ಲ ಇದೇ ವಿಷ್ಯ ಇಟ್ಕೊಂಡು ಜೋಡಿಹಕ್ಕಿಯ ಕಾಲೆಳೆದು ಮಜಾ ತೆಗೆದುಕೊಂಡರು.

Divya Arvind 2

ಪ್ರೀತಿಯಲ್ಲಿ ಬಿದ್ದವರಿಗೆ ಊಟ, ನಿದ್ದೆ ಬೇಡ ಅನ್ನೋದು ಪ್ರೇಮದ ಮೋಡಿಯಲ್ಲಿ ಸಿಲುಕಿದವರ ಮಾತು. ತಮ್ಮ ಜೋಡಿಯ ಜೊತೆ ಆದಷ್ಟು ಸಮಯ ಕಳೆಯೋಕೆ ಟ್ರೈ ಮಾಡುತ್ತಿರುತ್ತಾರೆ. ಕಳೆದ ಕೆಲ ದಿನಗಳಿಂದ ಬಿಗ್‍ಬಾಸ್ ಮನೆಯಲ್ಲಿ ಲೈಟ್ ಆಫ್ ಆದ್ರೂ, ದಿವ್ಯಾ ಮತ್ತು ಅರವಿಂದ್ ನಡ್ವೆ ಕಣ್ಣಸನ್ನೆ ಆಟ ನಡೆಯುತ್ತಿತ್ತು. ಇದೇ ವಿಷಯವನ್ನ ಸುದೀಪ್ ಚರ್ಚೆಗೆ ತಂದರು. ದಿವ್ಯಾ ಯು ಇತ್ತೀಚೆಗೆ ನಿದ್ದೆ ಮಾಡ್ತಿಲ್ಲ ಅಂದರು. ಅದಕ್ಕೆ ಎಲ್ಲರೂ ಯೆಸ್ ಅಂದ್ರು.

Divya Arvind 1

ನಾನು ಮಲಗೋವರೆಗೂ ದಿವ್ಯಾ ಮಲಗಿರಲ್ಲ. ನಾನು ಮಲಗಿದ್ಮೇಲೆಯೂ ಎಚ್ಚರ ಇರ್ತಾರೆ ಅಂತ ಶಮಂತ್ ಹೇಳಿದ ಎಂದು ಅರವಿಂದ್ ಹೇಳಿದ್ರು.. ಈ ವೇಳೆ ಶಮಂತ್ ಮಧ್ಯ ಪ್ರವೇಶಿಸಿದ್ರು. ಅರವಿಂದ್ ಎಲ್ಲಿಯವರೆಗೂ ಮಲಗಲ್ಲವೋ, ಅಲ್ಲಿಯವರೆಗೂ ದಿವ್ಯಾ ನಿದ್ದೆ ಮಾಡಲ್ಲ. ಅರವಿಂದ್ ನಿದ್ದೆ ಮಾಡೋವರೆಗೂ ಮಡಚಿರೋ ಬಟ್ಟೆಯನ್ನ ಮತ್ತೆ ಮತ್ತೆ ಮಡಚಿ ಇಡ್ತಾರೆ ಎಂದು ಇಬ್ಬರ ಲವ್ ಸ್ಟೋರಿ ಬಿಚ್ಚಿಟ್ಟರು ಶಮಂತ್.

ಅರವಿಂದ್ ನಿದ್ದೆ ಮಾಡೋವರೆಗೂ ದಿವ್ಯಾ ಮಲಗಲ್ಲ. ಅರವಿಂದ್ ಮಲಗಿದ್ಮೇಲೆ ಸ್ವಲ್ಪ ಸಮಯ ಎರಡೂ ಕೈಗಳನ್ನ ಕೆನ್ನೆ ಮೇಲೆ ಇಟ್ಕೊಂಡು ಅತ್ತ ಇತ್ತ ನೋಡ್ತಿರ್ತಾರೆ ಎಂದು ದಿವ್ಯಾ ಕುಳಿತುಕೊಳ್ಳೋ ಸ್ಟೈಲ್ ತೋರಿಸಿದ್ರು ರಘು. ಒಟ್ಟಿನಲ್ಲಿ ಸಂಡೇ ಎಪಿಸೋಡ್ ದಿವ್ಯಾ, ಅರವಿಂದ್ ಲವ್ ಸ್ಟೋರಿ ಹೆಚ್ಚು ಸದ್ದು ಮಾಡಿದ್ದಂತೂ ನಿಜ.

Share This Article
Leave a Comment

Leave a Reply

Your email address will not be published. Required fields are marked *