– ಡಿಕೆಶಿಯಷ್ಟು ದೊಡ್ಡ ವಿಜ್ಞಾನಿ ಯಾರೂ ಇಲ್ಲ
ಗದಗ: ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡ ಮೇಲೆ ಹುಚ್ಚರಾಗಿದ್ದಾರೆ. ಅವರ ಅಧಿಕಾರದಲ್ಲಿ ಮೈಸೂರು ಮರಳು ಲೂಟಿ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಲೂಟಿಕೋರ ಸಿದ್ದರಾಮಯ್ಯನವರಿಗೆ, ಈಶ್ವರಪ್ಪ, ಯಡಿಯೂರಪ್ಪ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಸಿಎಂ ಸ್ಥಾನ ಕಳೆದುಕೊಂಡು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರೂ ಬುದ್ಧಿ ಬಂದಿಲ್ಲ. ಇದಲ್ಲದೆ ಆರ್.ಎಸ್.ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಡಿಕೆಶಿ ಹಾಗೂ ಸಿದ್ದರಾಮಯ್ಯಗೆ ಇಲ್ಲ. ಅವರಿಬ್ಬರು ಅಯೋಗ್ಯರು ಆರ್.ಎಸ್.ಎಸ್ ಬಗ್ಗೆ ಮಾತನಾಡಲು ಅವರಿಗೆ ಏನೂ ಗೊತ್ತಿಲ್ಲ. ನರೇಂದ್ರ ಮೋದಿ, ರಾಷ್ಟ್ರೀಯತೆ, ಜನ ಗಣ ಮನ, ಜೈಘೋಷ ಬಗ್ಗೆ ಇಡೀ ದೇಶದ ಕೂಗು ಕೇಳಿ ಅವರಿಗೆ ಹುಚ್ಚು ಹಿಡಿಯುತ್ತಿದೆ ಎಂದು ಅಭಿಪ್ರಾಯಪಟ್ಟರು.
ನಂತರ ನೈಟ್ ಕಫ್ರ್ಯೂ ಜಾರಿ ಕುರಿತು ಡಿಕೆಶಿ ಹೇಳಿಕೆಗೆ, ಡಿಕೆಶಿಯಷ್ಟು ಬಹಳ ದೊಡ್ಡ ವಿಜ್ಞಾನಿ, ಪ್ರಪಂಚದಲ್ಲಿ ಯಾರೂ ಇಲ್ಲ. ಎನ್ನುವ ಮೂಲಕ ಈಶ್ವರಪ್ಪ ಮಾತಿನ ತಿರುಗೇಟು ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಡಿಕೆಶಿ ಏನೇ ಸಲಹೆ ಕೊಟ್ಟರು ಸರ್ಕಾರ ಪಾಲಿಸುತ್ತೆ. ಆಗಲಾದರು ಕೋವಿಡ್ ದೂರವಾಗುತ್ತೆ ಅಲ್ವಾ ಅಂತ ಹಾಸ್ಯಾಸ್ಪದ ಮಾತುಗಳನ್ನಾಡಿದರು. ಇದೇ ವೇಳೆ ಕಾಶಿ ವಿಶ್ವನಾಥ ದೇವಸ್ಥಾನ ಸಮೀಕ್ಷೆ ಬಗ್ಗೆ ವಾರಣಾಸಿ ಹೈಕೋರ್ಟ್ ನೀಡಿದ ತೀರ್ಪು ಬಗ್ಗೆ ಸ್ವಾಗತಿಸಿದರು. ಆದಷ್ಟು ಬೇಗ ಮಸೀದಿ ಒಡೆದು ಕಾಶಿ ವಿಶ್ವನಾಥ ದೇವಸ್ಥಾನ ಆಗಲಿದೆ ಎಂದು ನುಡಿದರು.