ಹೊಸ ಪಕ್ಷ ಆರಂಭಿಸುವ ದಿನಾಂಕ ಪ್ರಕಟಿಸಿದ ಜಗನ್ ಸಹೋದರಿ

Public TV
1 Min Read
ys sharmila

ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ.ಎಸ್ ಶರ್ಮಿಳಾ ಅವರು ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಆರಂಭವನ್ನು ಘೋಷಣೆ ಮಾಡುವ ದಿನಾಂಕವನ್ನು ಹೇಳಿದ್ದಾರೆ.

ys sharmila4

ಜುಲೈ 8 ರಂದು ಹೊಸ ಪಕ್ಷವನ್ನು ತೆಲಂಗಾಣದಲ್ಲಿ ಉದ್ಘಾಟಿಸಲಿದ್ದೇನೆ. ಜುಲೈ 8 ರಂದು ತಂದೆ ದಿ.ವೈ ಎಸ್ ರಾಜಶೇಖರ ರೆಡ್ಡಿಯವರ ಜನ್ಮದಿನದ ವಾರ್ಷಿಕೋತ್ಸವಿದೆ. ಇದೇ ದಿನದಂದು ನಮ್ಮ ಹೊಸ ಪಕ್ಷವನ್ನು ಉದ್ಘಾಟಿಸಲಿದ್ದೇನೆ ಎಂದು ಶರ್ಮಿಳಾ ಖಮ್ಮಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.

ys sharmila1

ಭರವಸೆ ನೀಡಿರುವ ಪ್ರಕಾರ, ಸರ್ಕಾರಿ ಉದ್ಯೋಗ ನೀಡುವುದಕ್ಕೆ ಅಧಿಸೂಚನೆ ಹೊರಡಿಸದಿದ್ದಲ್ಲಿ ಏಪ್ರಿಲ್ 15ರಿಂದ ಮೂರು ದಿನಗಳ ಕಾಲ ಹೈದರಾಬಾದ್‍ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ. ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಆರೋಪಗಳನ್ನು ಪ್ರಶ್ನೆ ಮಾಡುವುದಕ್ಕಾಗಿ ನಮ್ಮ ಪಕ್ಷ ಅಗತ್ಯ ಇದೆ. ತೆಲಂಗಾಣ ರಾಜ್ಯ ಸ್ಥಾಪನೆಯಾಗಿ 7 ವರ್ಷ ಆಗಿರಬಹುದು. ಜನರ ಆಶೋತ್ತರಗಳನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ.

jagan mohan reddy 2

ತೆಲಂಗಾಣ ರಾಜ್ಯ ಸ್ಥಾಪನೆಗಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ತೆಲಂಗಾಣ ಅಸ್ತಿತ್ವಕ್ಕೆ ಬಂದ ನಂತರವೂ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳನ್ನು ಎಮ್‍ಎಲ್‍ಎಗಳು ಅಥವಾ ಎಂಪಿಗಳು ಭೇಟಿಯಾಗುವ ಅವಕಾಶವೇ ಇಲ್ಲ. ಕಾಂಗ್ರೆಸ್ ಪಾರ್ಟಿ ಕೆಸಿಆರ್ ಜೊತೆಗೆ ಫೈಟ್ ಮಾಡಲು ತಯಾರಿಲ್ಲ. ಬಿಜೆಪಿ ನೀಡಿದ ಭರವಸೆಗಳು ಏನಾದವು? ಅವರು ರೈಲು, ಫ್ಯಾಕ್ಟರಿಯ ಭರವಸೆ ನೀಡಿದ್ದರು. ಅದಿನ್ನೂ ಜಾರಿಗೆ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *