ಬಿಗ್‍ಬಾಸ್ ರಿಯಾಲಿಟಿ ಶೋ ಆರಂಭದಿಂದಲೂ ದಿವ್ಯಾ ಸುರೇಶ್ ಹಾಗೂ ಶಮಂತ್ ಎಣ್ಣೆ-ಸೀಗೆಕಾಯಿಯಂತೆ ಇದ್ದಾರೆ. ಎಷ್ಟೋ ಬಾರಿ ಶಮಂತ್ ದಿವ್ಯಾ ಜೊತೆ ಮಾತನಾಡಲು ಪ್ರಯತ್ನಿಸಿದರೂ, ದಿವ್ಯಾ ಶಮಂತ್‍ರನ್ನು ಆವಾಯ್ಡ್ ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಅಷ್ಟಾಗಿ ಹೊಂದಾಣಿಕೆ ಇಲ್ಲ ಎಂಬುವುದು ಎದ್ದು ಕಾಣುತ್ತದೆ.
ಸದ್ಯ ನಿನ್ನೆ ಶಮಂತ್ ರಘು ಜೊತೆ ಗಾರ್ಡನ್ ಏರಿಯಾದಲ್ಲಿ ಕುಳಿತು ಈ ವಾರ ಕಳಪೆ ಬೋರ್ಡ್ ಯಾರಿಗೆ ನೀಡುವುದು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಂಜೆ ಕಳಪೆ ಯಾರಿಗೆ ನೀಡುವುದು ಎಂದು ಈಗಲೇ ನಿರ್ಧರಿಸಿ ಎಂದು ಹೇಳುತ್ತಾರೆ. ಆಗ ರಘು ನಿಮ್ಮ ತಲೆಯಲ್ಲಿ ಇರುವುದು ಯಾರು ಎನ್ನುತ್ತಾರೆ.
ಈ ವೇಳೆ ಶಮಂತ್ ಹುಸಿನಗೆ ಬೀರುತ್ತಾ, ಒಂದೊಂದು ಬಾರಿ ಸುಮ್ ಸುಮ್ನೆ ಏನೇನೋ ಕ್ಯಾರಿ ಮಾಡುವುದು, ಒಂದೇ ಕಡೆ ಇರುವುದು, ದಿಕ್ಕು ತಪ್ಪಿಸುವುದು, ಎಲ್ಲರ ಅಭಿಪ್ರಾಯ ಒಂದೇ ಇರುವಾಗ, ಅವಳದ್ದೇ ಬೇರೆ ಎಂಬುವಂತೆ ಹೇಳುವುದು. ಅದರಲ್ಲೂ ಈ ಬಾರಿ ಕಳಪೆಗೆ ಹುಡುಗಿ ಹೋಗಬೇಕೆಂಬುವುದು ನನ್ನ ಅಭಿಪ್ರಾಯ ಎಂದು ಪರೋಕ್ಷವಾಗಿ ದಿವ್ಯಾ ಸುರೇಶ್ ಬಗ್ಗೆ ಮಾತನಾಡಿದ್ದಾರೆ.
ನನಗೂ ಕೆಲವೊಂದು ಸಿಟ್ಟಿದೆ ಅದನ್ನೇಲ್ಲಾವನ್ನು ತೀರಿಸಿಕೊಂಡು ಬಿಡಬೇಕು. ಅಲ್ಲಿಯವರೆಗೂ ನನಗೆ ಸಮಾಧಾನ ಇಲ್ಲ. ಯಾಕೆಂದರೆ ಅವರು ನನಗೆ ಏನು ನೀಡುತ್ತಾರೋ ಅದನ್ನೇ ನಾನು ವಾಪಸ್ ಅವರಿಗೆ ನೀಡುತ್ತೇನೆ. ಇಲ್ಲಿ ಲವ್ ಮಾಡುವುದಕ್ಕೆ ಬಂದಿದ್ದಾರೋ ಇಲ್ಲ ಗೇಮ್ ಆಡಲು ಬಂದಿದ್ದಾರೋ ಗೊತ್ತಿಲ್ಲ ಬಿಗ್‍ಬಾಸ್ ಎಂದು ಹೇಳಿದ್ದರು. ಆ ಫ್ರಸ್ಟ್ರೆಷನ್‍ನನ್ನು ನಾನು ಇಂದು ತೀರಿಸಿಕೊಳ್ಳಬೇಕು. ಇಂದು ಸಂಜೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೇನೆ. ನಾನು ಹೇಳೆ ಹೇಳುತ್ತೀನೆ ಎಂದು ಕಿಡಿಕಾರಿದರು.