ಬೆಂಗಳೂರು: ಕೋವಿಡ್ 19 ಮಾರ್ಗಸೂಚಿಯನ್ನು ಪಾಲಿಸದ ಹಿನ್ನೆಲೆಯಲ್ಲಿ ಹೋಟೆಲ್, ಅಂಗಡಿ, ಸೂಪರ್ ಮಾರ್ಕೆಟ್ ಸೇರಿ ಒಟ್ಟು 20 ಅಂಗಡಿ ಮುಗ್ಗಟ್ಟುಗಳನ್ನು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಬಂದ್ ಮಾಡಿದ್ದಾರೆ.
ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ಇಡಬೇಕು, ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಿದ ಗ್ರಾಹಕರಿಗೆ ಮಾತ್ರ ಒಳಗಡೆ ಪ್ರವೇಶಿಸಲು ಅನುಮತಿ ನೀಡಬೇಕು, ಒಳಗಡೆ ಸಾಮಾಜಿಕ ಅಂತರಗಳನ್ನು ಕಾಪಾಡಬೇಕು ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ.
ಈ ನಿಯಮನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇಂದು ಅಂಗಡಿ, ಹೋಟೆಲ್‍ಗಳ ಮೇಲೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು ದಿಢೀರ್ ದಾಳಿ ಮಾಡಿ ಬಂದ್ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ 15 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ. ಬೆಂಗಳೂರಿನ ಕೋರಮಂಗಲ, ಹೆಚ್‍ಎಸ್‍ಆರ್ ಲೇಔಟ್ ವ್ಯಾಪ್ತಿಯ ಐದು ಹೋಟೆಲ್‍ಗಳ ಮೇಲೆ ದಂಡ ಹಾಕಿ ಬಂದ್ ಮಾಡಿಸಿದ್ದಾರೆ.
ಎಲ್ಲಿ ಎಷ್ಟು?
ಯಲಹಂಕ 1, ಮಹದೇವಪುರ 4, ಬೆಂಗಳೂರು ಪಶ್ಚಿಮ 3, ಬೆಂಗಳೂರು ದಕ್ಷಿಣ 4, ಬೊಮ್ಮನಹಳ್ಳಿ 2, ಬೆಂಗಳೂರು ಪೂರ್ವ 3, ರಾಜರಾಜೇಶ್ವರಿ ನಗರ 3 ಸೇರಿದಂತೆ ಒಟ್ಟು 20 ಉದ್ದಿಮೆಗಳನ್ನು ಬಂದ್ ಮಾಡಲಾಗಿದೆ.