ಮುಂಬೈ: ಎಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್‍ಪೋರ್ಟ್ ಅಂಡರ್ ಟೇಕಿಂಗ್ ಸಿಬ್ಬಂದಿಗೆ ಕಳೆದ ಕೆಲವು ತಿಂಗಳಿಂದ ನಾಣ್ಯಗಳಲ್ಲಿ ವೇತನವನ್ನು ಮುಂಬೈನಲ್ಲಿ ನೀಡಲಾಗ್ತಿದೆ.
ಬಸ್ ಪ್ರಯಾಣಿಕರಿಂದ ಪ್ರತಿನಿತ್ಯ ನಾಣ್ಯದ ರೂಪದಲ್ಲಿ ಬೃಹತ್ ಪ್ರಮಾಣದಲ್ಲಿ ಟಿಕೆಟ್ ಹಣ ಸಂಗ್ರಹವಾಗುತ್ತಿದೆ. ನಗರದ ಪ್ರಮುಖ ಖಾಸಗಿ ಬ್ಯಾಂಕ್‍ವೊಂದು ಸಾರಿಗೆ ಸಂಸ್ಥೆಯಿಂದ ಈ ನಾಣ್ಯಗಳನ್ನು ಸಂಗ್ರಹಿಸುತ್ತಿತ್ತು. ಆದರೆ ಇತ್ತೀಚೆಗೆ ಬ್ಯಾಂಕ್‍ನೊಂದಿಗಿನ ಒಪ್ಪಂದದ ಅವಧಿ ಮುಕ್ತಾಯವಾಗಿದೆಯಂತೆ. ಹೀಗಾಗಿ ನಾಣ್ಯಗಳನ್ನು ಪಡೆಯಲು ಖಾಸಗಿ ಬ್ಯಾಂಕ್ ಒಪ್ಪುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಸುಮಾರು 40 ಸಾವಿರ ಸಿಬ್ಬಂದಿಯ ವೇತನದ ಬಹುಭಾಗವನ್ನು ನಾಣ್ಯಗಳ ರೂಪದಲ್ಲಿ ನೀಡಲಾಗುತ್ತಿದೆ. ಇದರಿಂದ ಉದ್ಯೋಗಿಗಳು ಅಸಮಾಧಾನಗೊಂಡಿದ್ದಾರೆ. ಹಲವಾರು ಉದ್ಯೋಗಿಗಳು ಅಂಬರ್ನಾಥ್, ಬದ್ಲಾಪುರ, ಪನ್ವೆಲ್ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಸಂಬಳದ ಹಣದ ನಾಣ್ಯಗಳನ್ನು ಕೊಂಡೊಯ್ಯುವುದು ತುಂಬಾ ಕಷ್ಟವಾಗುತ್ತಿದೆ ಎಂದು ಉದ್ಯೋಗಿಯೊಬ್ಬರು ಹೇಳಿದ್ದಾರೆ.
11 ಸಾವಿರ ನಗದು ನಾಣ್ಯಗಳ ರೂಪದಲ್ಲಿ ದೊರೆಯುತ್ತದೆ. ಸಾಮಾನ್ಯವಾಗಿ ಬಹುತೇಕ ಸಂಬಳವನ್ನು 2, 5, 10 ರೂಪಾಯಿ ಮುಖಬೆಲೆಯ ನಾಣ್ಯಗಳೊಂದಿಗೆ ಕೊಡಲಾಗುತ್ತಿದೆ. ಕೆಲವೊಮ್ಮೆ 10, 50. 100, 500 ರೂಪಾಯಿಗಳ ನೋಟ್ ಪಡೆಯುತ್ತೇವೆ. ಉಳಿದ ಸಂಬಳವನ್ನು ನೇರವಾಗಿ ನಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಎಂದು ಉದ್ಯೋಗಿಯೊಬ್ಬರು ಹೇಳಿದ್ದಾರೆ. ಸಿಬ್ಬಂದಿಗೆ ನಾಣ್ಯಗಳಲ್ಲಿ ಸಂಬಳ ಕೊಡಲಾಗುತ್ತಿದೆ. ಈ ವಿಚಾರವಾಗಿ ಮುಂಬೈ ಬಸ್ ಆಪರೇಟರ್, ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.