ಬೆಂಗಳೂರು: ಬಿಗ್‍ಬಾಸ್ ಸೀಸನ್-5ರ ಸ್ಪರ್ಧಿ, ನಟಿ ಆಶಿತಾ ಚಂದ್ರಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರೋಹನ್ ಗೌಡ ಜೊತೆ ಹೊಸ ಜೀವನ ಆರಂಭಿಸುತ್ತಿರುವ ಆಶಿತಾ ಚಂದ್ರಪ್ಪಗೆ ಸ್ನೇಹಿತರು, ಸೆಲೆಬ್ರೆಟಿಗಳು ಹಾಗೂ ಅಭಿಮಾನಿಗಳು ವಿಶ್ ಮಾಡಿದ್ದಾರೆ.
ಪ್ರಸ್ತುತ ಕೋವಿಡ್-19 ಭೀತಿಯಿರುವುದರಿಂದ ಈ ಜೋಡಿ ಕೇವಲ ಕುಟುಂಬಸ್ಥರು, ಆಪ್ತರನಷ್ಟೇ ವಿವಾಹ ಸಮಾರಂಭಕ್ಕೆ ಆಹ್ವಾನಿಸಿದ್ದು, ಮಾರ್ಚ್ 31ರಂದು ಬೆಂಗಳೂರಿನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
ಮದುವೆ ದಿನ ಆಶಿತಾ ರೇಷ್ಮೆ ಸೀರೆ ಉಟ್ಟಿದ್ದರೆ, ರೋಹನ್ ಸಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ್ದಾರೆ. ಈ ವಿವಾಹ ಮಹೋತ್ಸವಕ್ಕೆ ಕಿರುತರೆ ನಟ ಹಾಗೂ ಬಿಗ್‍ಬಾಸ್ ಸೀಸನ್-5ರ ಸ್ಪರ್ಧಿ ಜಯಂ ರಾಮ್ ಕಾರ್ತಿಕ್, ನಟಿ ತೇಜಸ್ವಿನಿ ಪ್ರಕಾಶ್, ಜಗನ್ನಾಥ್ ಚಂದ್ರಶೇಖರ್ ಸೇರಿದಂತೆ ಕೆಲವರು ಭಾಗವಹಿಸಿದ್ದರು.
ಈ ವೇಳೆ ಆಶಿತಾ ಜೊತೆಗಿರುವ ಫೋಟೋವನ್ನು ಕ್ಲಿಕ್ಕಿಸಿಕೊಂಡಿರುವ ಜೆಕೆ, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ‘ನಿನ್ನ ದಾಂಪತ್ಯ ಜೀವನ ಸಂತಸದಿಂದ ಕೂಡಿರಲಿ’ ಎಂದು ಕ್ಯಾಪ್ಷನ್ ಹಾಕಿ ವಿಶ್ ಮಾಡುವ ಮೂಲಕ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಖಾಸಗಿ ವಾಹಿನಿಯ ನೀಲಿ, ಜೊತೆ ಜೊತೆಯಲಿ, ರಾಧಾ ರಮಣ ಸೀರಿಯಲ್‍ನಲ್ಲಿ ಆಶಿತಾ ನಟಿಸಿದ್ದರು. ಅಲ್ಲದೆ ಇತ್ತೀಚೆಗೆ ರಾಧಾ ರಮಣ ಸಿರಿಯಲ್‍ನಲ್ಲಿ ಅವನಿ ಎಂಬ ಪಾತ್ರದಲ್ಲಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಖ್ಯಾತಿ ಪಡೆದು ಮನೆಮಾತಾಗಿದ್ದರು.