– ಪೋಷಕರಿಗೆ ಫೋನ್ ಮಾಡುವಂತೆ ಯುವತಿಗೆ ಪೊಲೀಸರಿಂದ ಒತ್ತಡ
ಬೆಂಗಳೂರು: ಸಿಡಿ ಪ್ರಕರಣ ಒಂದು ಹಂತಕ್ಕೆ ಬಂದ ನಂತರವೇ ಯುವತಿ ಪೋಷಕರ ಬಳಿ ಹೋಗುವದಾಗಿ ಹೇಳಿದ್ದಾರೆ. ಸಂತ್ರಸ್ತೆ ಪೋಷಕರು ಆರೋಪಿಗಳ ಪರ ಇರೋದರಿಂದ ಯುವತಿ ಹೋಗುತ್ತಿಲ್ಲ ಎಂದು ವಕೀಲ ಜಗದೀಶ್ ಹೇಳಿದ್ದಾರೆ.
ಸಂತ್ರಸ್ತೆ ಪೋಷಕರ ಬಳಿ ಹೋಗಲು ಒಪ್ಪುತ್ತಿಲ್ಲ. ಅಲ್ಲಿಗೆ ಹೋದ್ರೆ ನಾನು ಎಮೋಷನಲ್ ಆಗುತ್ತೆ ಅಂತ ಹೇಳುತ್ತಿದ್ದಾರೆ. ಅದು ಅವರ ಕೂಸು. ನಮ್ಮ ಆಶ್ರಯ ಕೇಳಿದಷ್ಟು ದಿನ ನಾವು ನೀಡುತ್ತೇವೆ. ಯಾಕೆ ಸ್ವಾವಲಂಬಿಯಾಗಿದ್ದು, ತನ್ನ ನಿರ್ಧಾರ ತೆಗೆದುಕೊಳ್ಳಲು ಶಕ್ತಳಿದ್ದಾಳೆ. ಪೋಷಕರು ಬಳಿ ಹೋಗುವುದು ಸಂತ್ರಸ್ತೆಯ ಇಚ್ಛೆ. ಆ ವಿಷಯದಲ್ಲಿ ನಾವು ತಲೆ ಹಾಕಲ್ಲ ಎಂದು ತಿಳಿಸಿದರು.
ಸದ್ಯ ಯುವತಿ ಎಸ್‍ಐಟಿ ತನಿಖೆ ಎದುರಿಸುತ್ತಿದ್ದಾರೆ. ವಿಚಾರಣೆ ವೇಳೆ ಅಲ್ಲಿಯ ಕೆಲ ಪೊಲೀಸರು ಪೋಷಕರಿಗೆ ಫೋನ್ ಮಾಡುವಂತೆ ಒತ್ತಡ ಹಾಕುತ್ತಿರುವ ವಿಷಯವನ್ನ ಸಂತ್ರಸ್ತೆ ನಮ್ಮ ಬಳಿ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪೋಷಕರ ಜೊತೆ ಮಾತನಾಡಲು ಮತ್ತು ಭೇಟಿಯಾಗಲು ಇಷ್ಟವಿಲ್ಲ ಎಂದು ಯುವತಿ ನಮ್ಮ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ನೀಡಿದರು.