ಮುಂಬೈನಲ್ಲಿ ಗುಪ್ತಗಾಮಿನಿಯಾದ ಕೊರೊನಾ – ಶೇ.80ರಷ್ಟು ಸೋಂಕಿತರಿಗಿಲ್ಲ ಗುಣಲಕ್ಷಣ

Public TV
1 Min Read
Corona 1 1

ಮುಂಬೈ: ದೇಶದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ತನ್ನ ಪಸರಿಸುವ ವೇಗವನ್ನ ಹೆಚ್ಚಿಸಿಕೊಳ್ಳುತ್ತಿದೆ. ಕಳೆದ 49 ದಿನಗಳಲ್ಲಿ ಬರೋಬ್ಬರಿ 91 ಸಾವಿರಕ್ಕೂ ಅಧಿಕ ಪ್ರಕರಣಗಳು ರಾಜಧಾನಿ ಮುಂಬೈನಲ್ಲಿ ವರದಿಯಾಗಿವೆ. ಆದ್ರೆ ಇವುಗಳಲ್ಲಿ ಶೇ.80ರಷ್ಟು ಸೋಂಕಿತರಿಗೆ ಯಾವುದೇ ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ ಎಂದು ಮಾಧ್ಯಮವೊಂದು ಪ್ರಕಟಿಸಿದೆ.

Corona 2 1

ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ 30 ಸಾವಿರದ ಆಸುಪಾಸಿನಲ್ಲಿಯೇ ಕೊರೊನಾ ಪ್ರಕರಣಗಳು ದಾಖಲಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಈ ಪೈಕಿ ಹೆಚ್ಚಿನ ವ್ಯಕ್ತಿಗಳಿಗೆ ರೋಗ ಲಕ್ಷಣವೇ ಇಲ್ಲ. ಕೊರೊನಾ ಗುಪ್ತಗಾಮಿನಿಯಾಗಿ ಬದಲಾಗಿರುವ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Corona 1

ಸುಮಾರು 74 ಸಾವಿರ ಸೋಂಕಿತರಲ್ಲಿ ಮಾಹಾಮಾರಿಯ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಕೇವಲ 17 ಸಾವಿರ ಸೋಂಕಿತರಲ್ಲಿ ಶೀತ, ಕೆಮ್ಮು ಸಂಬಂಧಿತ ಕೆಲ ಲಕ್ಷಣಗಳು ಕಾಣಿಸಿವೆ. ಸೋಂಕಿತರ ಕೈಗಳಿಗೆ ಸೀಲ್ ಹಾಕಲಾಗಿದ್ದು, ಕಡ್ಡಾಯವಾಗಿ ಕ್ವಾರಂಟೈನ್ ನಿಯಮಗಳನ್ನ ಪಾಲಿಸಬೇಕು. ಅವಧಿಗೂ ಮುನ್ನ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಎಫ್‍ಐಆರ್ ದಾಖಲಿಸಲಾಗುವುದು ಬಿಎಂಸಿ (ಬೃಹನ್ ಮುಂಬೈ ಕಾರ್ಪೋರೇಷನ್) ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.

Corona 3 1

ಬೆಡ್‍ಗಳ ಸಮಸ್ಯೆ: 30 ಸಾವಿರ ಆಸುಪಾಸಿನಲ್ಲಿ ಕೊರೊನಾ ಪ್ರಕರಣಗಳ ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ತಲೆದೋರಿದೆ. ಮುಂಬೈನ 9,900 ಆಸ್ಪತ್ರೆಗಳಲ್ಲಿ ಬೆಡ್ ಭರ್ತಿಯಾಗಿವೆ. ಸರ್ಕಾರ 4 ಸಾವಿರ ಬೆಡ್ ಗಳ ವ್ಯವಸ್ಥೆಗೆ ಮುಂದಾಗಿದ್ದು, ಸಾರ್ವಜನಿಕರು ಆನ್‍ಲೈನ್ ಮುಖಾಂತರ ಕಾಯ್ದಿರಿಸಬಹುದಾಗಿದೆ. ಸರ್ಕಾರದ ಮುಂದೆ ಲಾಕ್‍ಡೌನ್ ಆಯ್ಕೆ ಇಲ್ಲ. ಆದ್ರೆ ಜನರು ಕಟ್ಟುನಿಟ್ಟಾಗಿ ಸರ್ಕಾರದ ನಿಯಮಗಳನ್ನ ಪಾಲಿಸಬೇಕು. ಪಾಲನೆ ಆಗದಿದ್ರೆ ಅನಿವಾರ್ಯವಾಗಿ ಲಾಕ್‍ಡೌನ್ ಅಸ್ತ್ರ ಪ್ರಯೋಗಕ್ಕೆ ಮುಂದಾಗಬೇಕಾಗುತ್ತದೆ ಎಂದು ಬಿಎಂಸಿ ಕಮೀಷನರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *