ರೋಜಾ ಆಸ್ಪತ್ರೆಗೆ ದಾಖಲು

Public TV
1 Min Read
roja 1

ಚೆನ್ನೈ: ನಟಿ, ರಾಜಕಾರಣಿ ಆರ್.ಕೆ ರೋಜಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಐಸಿಯುನಿಂದ ಸಾಮಾನ್ಯ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ.

ವೈಎಸ್‍ಆರ್‍ಸಿಪಿ ಶಾಸಕಿ ಮತ್ತು ಎಪಿಐಐಸಿ ಮುಖ್ಯಸ್ಥೆ ರೋಜಾ ಶಸ್ತ್ರಚಿಕಿತ್ಸೆಗೆಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರೋಜಾ ಅವರ ಪತಿ ಸೆಲ್ವಮಣಿ ಆಡಿಯೋ ಸಂದೇಶದ ಮೂಲಕವಾಗಿ ತಿಳಿಸಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ವಾರ್ಡಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

roja 2ರೋಜಾ ಅವರ ಮೇಲೆ ವೈದ್ಯರು 2 ವಾರಗಳ ಕಾಲ ನಿಗಾ ಇಡಲಿದ್ದಾರೆ. ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಕುಟುಂಬಸ್ಥರು ಸೇರಿದಂತೆ ರೋಜಾರ ಭೇಟಿಗೆ ಯಾರಿಗೂ ಅನುಮತಿ ಇಲ್ಲ ಎಂದು ಸೆಲ್ವಮಣಿ ಹೇಳಿದ್ದಾರೆ.

roja4

ಕಳೆದ ವರ್ಷವೇ ರೋಜಾ ಅವರಿಗೆ ಆಪರೇಷನ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಮುಂದೂಡಲಾಗಿತ್ತು. ಜನವರಿಯಲ್ಲಿ ಸ್ಥಳೀಯ ಚುನಾವಣೆ ಇರುವುದರಿಂದ ಚಿಕಿತ್ಸೆ ತೆಗೆದುಕೊಳ್ಳುವುದು ವಿಳಂಬವಾಯಿತು. ಹೀಗಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *