ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೊಳಗಾದ ವೃದ್ಧೆ ನಿಧನ

Public TV
1 Min Read
tmc flag

ಕೋಲ್ಕತ್ತಾ: ಟಿಎಂಸಿ ಸದಸ್ಯರಿಂದ ಹಲ್ಲೆಗೊಳಗಾಗಿದ್ದ ಬಿಜೆಪಿ ಮುಖಂಡನ ತಾಯಿ ನಿಧನರಾಗಿದ್ದಾರೆ.

ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಮ್ದಾರ್ ಅವರ ತಾಯಿ ನಿಮ್ತಾ(85) ಸಾವನ್ನಪಿದ್ದಾರೆ. ಹಲ್ಲೆಗೊಳಗಾಗಿದ್ದ ನಿಮ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 4 ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದ ವೃದ್ಧೆ ಇಂದು ಕೊನೆಯುಸಿರೆಳದಿದ್ದಾರೆ.

bjp

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲೇ ವೃದ್ಧೆ ಮೇಲೆ ಹಲ್ಲೆ ನಡೆದಿತ್ತು. ಫೆ.27 ರಂದು ಮೂವರು ಟಿಎಂಸಿ ಸದಸ್ಯರು ವೃದ್ಧೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವೈದ್ಧೆಯ ಕುಟುಂಬಸ್ಥರು ದೂರು ದಾಖಲಿಸಿದ್ದರು. ತನ್ನ ಮೇಲೆ ಆಗಿರುವ ಹಲ್ಲೆ ಕುರಿತಾಗಿ ವಿವರಿಸಿದ ವೃದ್ಧೆ ನನ್ನ ಕುತ್ತಿಗೆ, ಮುಖಕ್ಕೆ ಹೊಡೆದಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿರುವ ವಿಚಾರವನ್ನು ಯಾರಿಗೂ ಹೇಳಬಾರದು ಎಂದಿದ್ದಾರೆ. ನನಗೆ ತುಂಬಾ ನೋವಾಗುತ್ತಿದೆ ಎಂದು ಹೇಳಿದ್ದರು.

kolkatta2

ಬಂಗಾಳದ ಮಗಳು ಸಾವನ್ನಪ್ಪಿದ್ದಾರೆ. ಇವರ ಮೇಲೆ ಟಿಎಂಸಿ ಕಾರ್ಯಕರ್ತರು ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ವೃದ್ಧೆಯ ಬಗ್ಗೆ ಸಹಾನೂಭೂತಿಯ ಮಾತುಗಳನ್ನು ಆಡಲಿಲ್ಲ. ಇವರು ಕುಟುಂಬಸ್ಥರಿಗೆ ಆಗಿರುವ ನೋವನ್ನು ಯಾರು ಗುಣಪಡಿಸುತ್ತಾರೆ? ಎಂದು ಪ್ರಶ್ನಿಸಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

koltatta

ಟಿಎಂಸಿ ಹಿಂಸಾಚಾರದ ರಾಜಕೀಯವನ್ನು ನಿಲ್ಲಿಸಬೇಕಾಗಿದೆ. ಮೃತರ ಆತ್ಮಕ್ಕಾಗಿ ಪ್ರಾರ್ಥನೆ ಮಾಡುತ್ತೇನೆ. ಓಂ ಶಾಂತಿ ಎಂದು ಬೆಂಗಳೂರಿನ ಬೆಜೆಪಿ ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿದ್ದಾರೆ.

Share This Article