ರಾಯ್ಪರ: ಚಿನ್ನದ ಸರವನ್ನು ಕದ್ದು ಸಾಗಿಸುತ್ತಿರುವ ಕಳ್ಳ ಇರುವೆಗಳ ವೀಡಿಯೋ ಸಖತ್ ವೈರಲ್ ಆಗಿದೆ.
ಚಿನ್ನ, ಬೆಳ್ಳಿಯಂತಹ ದುಬಾರಿ ವಸ್ತುಗಳನ್ನು ಕಳ್ಳತನ ಮಾಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಇರುವೆಗಳ ಗುಂಪು ಚಿನ್ನದ ಸರವನ್ನು ಕದ್ದೊಯ್ಯುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯುವುದರ ಜೊತೆಗೆ ಆಶ್ಚರ್ಯವನ್ನುಂಟು ಮಾಡಿದೆ.
Smallest Gold Smugglers! ???? pic.twitter.com/6kBASYP0si
— Dipanshu Kabra (@ipskabra) March 24, 2021
ವೈರಲ್ ವೀಡಿಯೋದಲ್ಲಿ ಏನಿದೆ?
ಇರುವೆಗಳ ಗುಂಪು ಚಿನ್ನದ ಸರವನ್ನು ತೆಗೆದುಕೊಂಡು ಹೋಗುತ್ತಿವೆ. ಸುಮಾರು ದೂರ ಎಳೆದುಕೊಂಡು ಹೋಗಿವೆ. 15 ಸೆಕೆಂಡ್‍ಗಳ ಕಾಲ ಇರುವ ಈ ವೀಡಿಯೋಗೆ ಅತ್ಯಂತ ಕಿರಿಯ ಚಿನ್ನ ಕಳ್ಳ ಸಾಗಾಣೆಗಾರರು ಎಂದು ಬರೆದುಕೊಂಡು ಛತ್ತೀಸ್‍ಗಢದ ಐಪಿಎಸ್ ಅಧಿಕಾರಿ ದಪಾನ್ಯು ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡೀಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕಳ್ಳ ಇರುವೆ ಬಂಧಿಸಲಾಗಿದೆಯೇ? ಅಥವಾ ಎಸ್ಕೇಪ್ ಆದರಾ? ಎಂದು ನೆಟ್ಟಿಗರು ಈ ವೀಡಿಯೋಗೆ ಹಾಸ್ಯಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ.