ಬಿಗ್‍ಬಾಸ್ ಮನೆಯಲ್ಲಿ ಎಲ್ಲಾ ವಯೋಮಾನದವರು ಇದ್ದಾರೆ. ಆದರೆ ಅತ್ಯಂತ ಕಿರಿಯ ಸ್ಪರ್ಧಿ ಎಂದರೆ ವಿಶ್ವನಾಥ್. 3 ವಾರದ ನಾಮಿನೇಷನ್ ನಿಂದ ತಪ್ಪಿಸಿಕೊಂಡ ವಿಶ್ವನಾಥ್ ಬಗ್ಗೆ ವೀಕ್ಷಕರಿಗೆ ಮನೆಯಿಂದ ಮುಂದಿನ ಹೋಗುತ್ತಾರೆ ಎನ್ನುವ ಅಂದಾಜು ಇತ್ತು. ಆದರೆ ಇದೀಗ ವಿಶ್ವ ಮನೆಯ ಕ್ಯಾಪ್ಟನ್ ಆಗುವ ಮೂಲಕವಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.

ಚದುರಂಗ ಆಟದಲ್ಲಿ ಬಿಳಿ ತಂಡ ಗೆದ್ದಿತ್ತು. ಈ ಮೂಲಕವಾಗಿ ಬಿಳಿ ತಂಡದ ಸದಸ್ಯರು ಕ್ಯಾಪ್ಟನ್ಸಿಗೆ ಅರ್ಹರಾಗಿದ್ದರು. ಗೆದ್ದ ಬಳಿಕ ತಂಡದವರಿಗೆ ಶಬ್ದವೇದಿ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಪ್ರಕಾರ ಒಂದಷ್ಟು ಪ್ರಾಣಿಗಳ ಶಬ್ದ ಕೇಳಿ ಜೋಡಿಸ ಬೇಕಿತ್ತು. ಈ ವೇಳೆ ವಿಶ್ವನಾಥ್ 2 ಸುತ್ತುಗಳಲ್ಲಿ ಸರಿಯಾಗಿ ಜೋಡಿಸುವ ಮೂಲಕವಾಗಿ ನಾಲ್ಕನೇ ವಾರದ ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈ ವೇಳೆ ರಘು ಕದುರೆ ಎಂದರೆ ಅಶ್ವ, ಕ್ಯಾಪ್ಟನ್ ಅಂದ್ರೆ ವಿಶ್ವ. ಇತ್ತ ವಿಶ್ವ ಅವರಿಗೆ ಅವರ ಅಮ್ಮನಿಂದ ಕರೆ ಬಂದಿದೆ. ಒಳ್ಳೆಯದಾಗಿ ಆಟ ಆಡು ಎಂದು ಹರಸಿದ್ದಾರೆ.
ವಿಶ್ವನಿಗೆ ಕಳಪೆ, ಚಿಕ್ಕವನು ಎಂದವರಿಗೆ ಕ್ಯಾಪ್ಟನ್ ಅಗುವ ಮೂಲಕವಾಗಿ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ. ವಿಶ್ವ ಈ ವಾರದ ಆಟದ ವೈಖರಿ ಬದಲಾಯಿಸಿಕೊಂಡಿದ್ದಾರೆ. ಇದೇ ರೀತಿಯಾಗಿ ಸ್ಟ್ರಾಂಗ್ ಆಗಿ ನಾನು ಚಿಕ್ಕವನಾದರು ಯಾರಿಗೂ ಏನೂ ಕಮ್ಮಿ ಇಲ್ಲ ಎನ್ನುವ ಮೂಲಕ ಒಳ್ಳೆಯ ಅಭಿಪ್ರಾಯವನ್ನು ಮೂಡಿಸುತ್ತಿದ್ದಾರೆ. ಬಿಗ್ ಮನೆಯಲ್ಲಿ ಯಾರಿಗೆ ಬೇಕಾದರೂ ಅದೃಷ್ಟ ಕುಲಾಯಿಸ ಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆ ಸಿಕ್ಕಂತಾಗಿದೆ.



