ಬಿಗ್‍ಬಾಸ್‍ನಲ್ಲಿ ದಿನೇ ದಿನೇ ಪ್ರಶಾಂತ್ ಸಂಬರಗಿ ವಿರುದ್ಧ ಅಸಮಾಧಾನ ಸ್ಫೋಟಗೊಂಡಂತೆ ಕಾಣಿಸ್ತಿದೆ. ಮನೆಯ ಸದಸ್ಯರಿಗೆ ಪ್ರಶಾಂತ್ ಸಂಬರಗಿ ಕಿರಿಕಿರಿಯುನ್ನುಂಟು ಮಾಡ್ತಿದ್ದಾರೆ ಅನ್ನೋದು ಅವರ ಮಾತುಗಳಲ್ಲಿಯೇ ಅರ್ಥ ಆಗ್ತಿದೆ. ಒಂದು ವಿಶೇಷ ಅಂದ್ರೆ ಯಾರು ನೇರವಾಗಿ ಸಂಬರಗಿ ಮುಂದೆ ಹೇಳದೇ, ತಾವೇ ತಾವೇ ಮಾತಾಡಿಕೊಳ್ಳುತ್ತಿದ್ದಾರೆ.
ಮಂಗಳವಾರ ಕಿಚನ್‍ನಲ್ಲಿ ನಿಧಿ ಸುಬ್ಬಯ್ಯ, ರಘು ಮಾತನಾಡಿಕೊಳ್ಳುತ್ತಾ ಸಂಬರಗಿ ದಡ್ಡ, ಹಾಗೆ ಹೀಗೆ ಅಂತ ಮಾತಾಡಿಕೊಂಡಿದ್ದರು. ನಿನ್ನೆ ಎಪಿಸೋಡ್ ನಲ್ಲಿ ಒಂದೆಡೆ ಕುಳಿತಿದ್ದ ವಿಶ್ವನಾಥ್, ರಘು ಮತ್ತು ಅರವಿಂದ್ ಮೂವರ ನಡುವೆಯೂ ಸಂಬರಗಿಯ ಕುರಿತಾದ ಮಾತುಗಳನ್ನಾಡುತ್ತಿದ್ದರು.
ಪ್ರಶಾಂತ್ ಸಂಬರಗಿ ತಮಗೆ ಬೇಕಾಗಿದ್ದನ್ನ ಮಾಡ್ತಾರೆ. ಇಲ್ಲ ಅಂದ್ರೆ ಆಗಲ್ಲ ಗುರು ಅಂತ ಹೇಳ್ತಾರೆ. ತಾವು ಏನೇ ಕೆಲಸ ಮಾಡಿದ್ರೂ ಎಲ್ಲರಿಗೂ ತಿಳಿಯುವಂತೆ ಹೇಳೋದು ಅವರ ನಡವಳಿಕೆ. ಊಟ, ಟೀ ತಂದಾಗಲೂ ಅದನ್ನ ಪದೇ ಪದೇ ಹೇಳ್ತಾರೆ ಎಂದು ಅರವಿಂದ್ ಮತ್ತು ವಿಶ್ವನಾಥ್ ಅಂದ್ರು.
ನಮ್ಮ ತಾಯಿಯ ವಿಷಯ ಹೇಳಿದಾಗ ರಘು ತಬ್ಬಲಿ ಅಲ್ಲ. ನಾವೆಲ್ಲ ಅವನ ಜೊತೆಯಲ್ಲಿದ್ದೇವೆ ಎಂದು ಸಂಬರಗಿ ಹೇಳಿದಾಗ ಬೇಜಾರ ಆಯ್ತು. ನಾನು ಯಾವಾಗಾದ್ರೂ ತಬ್ಬಲಿ ಅಂತ ಯಾರಿಗಾದ್ರೂ ಹೇಳಿದ್ನಾ? ಏನೇ ಮಾತಾಡಿದ್ರೂ ಸಂಬರಗಿ ಅವರು ಅದನ್ನ ಕಂಟೆಂಟ್ ತರ ನೋಡ್ತಾರೆ. ಯಾವುದೇ ಟಾಪಿಕ್ ಬಂದ್ರೂ ನಂದೆಲ್ಲಿಡಲಿ ಅನ್ನೋ ಜಾಯಮಾನದವರು ಅಂತ ಆಡಿಕೊಂಡ್ರು. ಇದೇ ವಿಷಯವಾಗಿ ನಿಧಿ ಸುಬ್ಬಯ್ಯ ಮುಂದೆಯೂ ರಘು ಮಾತಾಡಿದ್ರು.