ಬೆಂಗಳೂರು: ಸತತ ಎರಡನೇ ದಿನವೂ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2 ಸಾವಿರದ ಗಡಿ ದಾಟಿದೆ. ಇಂದು 2,298 ಮಂದಿಗೆ ಸೋಂಕು ಬಂದಿದ್ದು,995 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 12 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಬರೋಬ್ಬರಿ 1,398 ಮಂದಿಗೆ ಸೋಂಕು ಬಂದಿದೆ. ಕಲಬುರಗಿ 118, ತುಮಕೂರು 94, ಬೀದರ್ 82, ಉಡುಪಿ 79, ಮೈಸೂರು 74 ಮಂದಿಗೆ ಸೋಂಕು ಬಂದಿದೆ. ಇಂದು ಬೆಂಗಳೂರು ನಗರದಲ್ಲೇ 7 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 34 ವರ್ಷದ ಯುವಕ ಬಲಿಯಾಗಿದ್ದಾನೆ.
ಈ ಹಿಂದೆ ಮಾಡುತ್ತಿದ್ದಂತೆ ಇಂದು 1 ಲಕ್ಷಕ್ಕೂ ಅಧಿಕ ಕೋವಿಡ್ ಟೆಸ್ಟ್ ಮಾಡಲಾಗಿದೆ. 6,525 ಆಂಟಿಜನ್ ಟೆಸ್ಟ್, 1,01,488 ಆರ್‌ಟಿ ಪಿಸಿಆರ್ ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 1,08,013 ಪರೀಕ್ಷೆ ಮಾಡಲಾಗಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,75,955ಕ್ಕೆ ಏರಿಕೆ ಆಗಿದೆ. ಈ ಪೈಕಿ 9,46,589 ಸಕ್ರಿಯ ಪ್ರಕರಣಗಳಿದ್ದು, ಆಸ್ಪತ್ರೆಯಿಂದ 9,46,589 ಮಂದಿ ಬಿಡುಗಡೆಯಾಗಿದ್ದು, 16,886 ಸಕ್ರಿಯ ಪ್ರಕರಣಗಳಿವೆ.
ಇಂದು ಒಟ್ಟು 64,927 ಕೊರೊನಾ ಲಸಿಕೆಯನ್ನು ವಿತರಿಸಲಾಗಿದೆ. ಐಸಿಯು ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದು, ಬೆಂಗಳೂರು ನಗರ 45, ಕಲಬುರಗಿ 19, ಮಂಡ್ಯ 12 ಸೇರಿದಂತೆ ಒಟ್ಟು 143 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.