ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೇಪ್ ಪದ ಬಳಕೆ ಮಾಡಿರುವುದು ಸರಿಯಲ್ಲ. ಈ ಪದ ಬಳಕೆ ಅವರಿಗೆ ಶೋಭೆ ತರಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಗರಂ ಆಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹೇಳಿಕೆ ಸರಿಯಲ್ಲ. ಸಿದ್ದರಾಮಯ್ಯ ರೇಪ್ ಕೇಸ್ ಮಾಡಬೇಕು ಅಂತ ಹೇಳೋದು ಸರಿಯಲ್ಲ. ಸಿದ್ದರಾಮಯ್ಯ ರೇಪ್ ಪದ ಬಳಸಬಾರದು. ಇದು ನಿಮಗೆ ಶೋಭೆ ತರೋದಿಲ್ಲ ಎಂದು ತಿಳಿಸಿದ್ದಾರೆ.
ಸೋಮವಾರ ಸಿಡಿ ವಿಚಾರ ಚರ್ಚೆಯಾದಾಗ ನಾನು ಸದನದಲ್ಲಿದ್ದೆ. ಕೆಲವರು ಮಾತನಾಡದಂತೆ ಸಲಹೆ ಕೊಟ್ರು. ಯುವತಿ ವೀಡಿಯೋ ಮನಸಾರೆ ಮಾಡಿದ್ದಾರೋ ಒತ್ತಾಯಕ್ಕೆ ಮಾಡಿದ್ದಾರೋ ಗೊತ್ತಿಲ್ಲ. ವೀಡಿಯೋ ಸಾಕ್ಷಿಯಾಗಿ ಇಟ್ಟುಕೊಂಡು ಕೇಸ್ ಮಾಡಬಾರದು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಇನ್ವೆಸ್ಟಿಗೇಷನ್ ವರದಿ ಬರಬೇಕು. ಎಲ್ಲವೂ ಲ್ಯಾಬ್‍ಗೆ ಹೋಗಿದೆ. ಈ ಸಿಡಿ ವಿಚಾರ ಇಟ್ಟುಕೊಂಡ ಸದನ ವ್ಯರ್ಥ ಮಾಡಬಾರದು. ಎಸ್.ಐ.ಟಿ ಟೀಮ್ ತನಿಖೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಗೃಹ ಸಚಿವ ಬಸವರಾಜ್ ಬೊಮ್ಮಯಿ ಅವರು ಮಹಿಳೆಗೆ ರಕ್ಷಣೆ ಕೊಡೋದಾಗಿ ಹೇಳಿದ್ದಾರೆ. ಅವರು ಒಂದು ವೀಡಿಯೋ ಬಿಟ್ರು, ಅದಾದ ಬಳಿಕ ಏನಾಗಿದೆ ಯಾರಿಗೂ ಗೊತ್ತಿಲ್ಲ. ಅವರು ಅಷ್ಟು ಕಾನ್ಫಿಡೆಂಟ್ ಆಗಿದ್ರೆ ಮುಂದೆ ಬರಲಿ. ದಿನೇಶ್ ಕಲ್ಲಳ್ಳಿ ದೂರು ಕೊಟ್ಟು ವಾಪಸ್ ಪಡೆದ್ರು. ಅನ್ಯಾಯ ಆಗಿದೆ ಅಂತ ಯುವತಿ ಬಂದು ಹೇಳಬೇಕು, ಇವರಲ್ಲ ಎಂದು ಕಿಡಿಕಾರಿದರು.
ಮುಂದೆ ಉಪಚುನಾವಣೆ ಬರ್ತಿರೋದ್ರಿಂದ ಈ ರೀತಿ ಕಾಂಗ್ರೆಸ್ ಆರೋಪ ಮಾಡುತ್ತಿದೆ. ರಮೇಶ್ ಜಾರಕಿಹೊಳಿ ಬಗ್ಗೆ ತನಿಖೆಯಾಗಲಿ, ಆರೋಪ ಮುಕ್ತರಾಗಿ ಬರ್ತಾರೆ. ಯುವತಿ ಮನೆಯವರು ಬೆಳಗಾವಿ ಎಪಿಎಂಸಿ ಬಾಡಿಗೆ ಮನೆಯಲ್ಲಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಮಗೂ ಸಂಶಯ ಇದೆ, ಯುವತಿಯನ್ನ ಒಂದು ತಂಡ ಹಿಡಿದಿಟ್ಟುಕೊಂಡಿದೆ. ಅದರ ಬಗ್ಗೆ ಎಸ್.ಐ.ಟಿ ತನಿಖೆ ನಡೆಸಲಿ, ಆದಷ್ಟು ಬೇಗ ವರದಿ ಬರಲಿ ಎಂದು ಚಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.