– ಸದನದಲ್ಲಿ ಸಿಡಿ ಕೋಲಾಹಲ
ಬೆಂಗಳೂರು: ಇಂದು ಸದನ ಆರಂಭವಾಗುತ್ತಿದ್ದಂತೆ ಸಿಡಿ ಪ್ರದರ್ಶಿಸಿ ಕಾಂಗ್ರೆಸ್ ನಾಯಕರು, ಆರು ಸಚಿವರ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸಿದರು. ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸದನ ಪ್ರವೇಶಕ್ಕೂ ಮುನ್ನವೇ ಸಿಡಿ ಪ್ರದರ್ಶಿಸಿ ಒಳ ಹೋಗಿದ್ದರು.
ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ವಿಚಾರಣೆ ಮಾಡಿ ವರದಿ ನೀಡುವಂತೆ ಹೇಳಿದೆ. ತನಿಖೆ ಮಾಡಿ ವರದಿ ಕೊಡೋಕೆ ಹೇಳಿಲ್ಲ. ಅದಕ್ಕೆ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿ ಸದನದ ಬಾವಿಗೆ ಇಳಿದು ಧರಣಣಿ ಆರಂಭಿಸಿದರು. ಇತರ ಕಾಂಗ್ರೆಸ್ ನಾಯಕರು ಸಿಡಿ ಪ್ರದರ್ಶಿಸಿ,ಲ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಇದನ್ನೂ ಓದಿ: ನಾವೇನು ತಪ್ಪು ಮಾಡಿದ್ದೇವೆ? ರೇಪ್ ಮಾಡಿದ್ದೀವಾ? – ಸುಧಾಕರ್ ಗರಂ
ನಿನ್ನೆಯೇ ಪ್ರಕರಣ ಸಂಬಂಧ ಸರ್ಕಾರ ಉತ್ತರ ಕೊಟ್ಟಿದೆ. ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಕೊಡಿ. ಪ್ರಕರಣದಲ್ಲಿ ತನಿಖೆ ನಡೆಯುತ್ತಿದ್ದು, ಸದನದ ಸಮಯ ವ್ಯರ್ಥ ಮಾಡಬೇಡಿ ಎಂದು ಬೊಮ್ಮಾಯಿ ಹೇಳಿದರು. ಸದನದಲ್ಲಿ ಕಾಂಗ್ರೆಸ್ ಸಿಡಿ ಸರ್ಕಾರಕ್ಕೆ ದಿಕ್ಕಾರ ಅಂತ ಕೂಗಿದರು. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ಹೆಚ್ಚಾಗುತ್ತಲೇ ಸ್ಪೀಕರ್ ಸದನವನ್ನ 10 ನಿಮಿಷ ಮುಂದೂಡಿದರು. ಇದನ್ನೂ ಓದಿ: ಸಿಡಿ ಪ್ರಕರಣದ ಹೆಣ್ಮಗಳು ಸಿಕ್ಕಿದ್ದರೆ ಪ್ರಕರಣಕ್ಕೆ ಅಂತ್ಯ ದೊರೆಯಲಿದೆ: ಬಿಎಸ್‍ವೈ