ಬಿಗ್‍ಬಾಸ್ ಕಾರ್ಯಕ್ರಮ ಪ್ರಾರಂಭವಾಗಿ ನಾಲ್ಕನೇ ವಾರಕ್ಕೆ ಮುನ್ನುಗ್ಗುತ್ತಿದೆ. ಈ ವೇಳೆ ಬಿಗ್‍ಬಾಸ್ ಮನೆಯ ಸದಸ್ಯರಿಗೆ ನಿನ್ನೆ ಚಟುವಟಿಕೆಯೊಂದನ್ನು ನೀಡಿದ್ದಾರೆ. ಅದರ ಅನುಸಾರ ಮನೆಯ ಸದಸ್ಯರಿಗೆ ಪ್ರತಿಸ್ಪರ್ಧಿ ನೀಡುವ ವ್ಯಕ್ತಿಯನ್ನು ಸೂಕ್ತ ಕಾರಣಗಳೊಂದಿಗೆ ತಿಳಿಸಿ ಅವರ ಫೋಟೋಗೆ ಡಾಟ್ ಚುಚ್ಚಬೇಕು. ಯಾರು ಪ್ರತಿಸ್ಪರ್ಧಿ ಎನಿಸುವುದಿಲ್ಲವೋ ಆ ಫೋಟೋವನ್ನು ಕಸದ ಬುಟ್ಟಿಗೆ ಹಾಕಬೇಕೆಂದು ಸೂಚಿಸುತ್ತಾರೆ.
ಮೊದಲಿಗೆ ಮಂಜು ನನ್ನ ಪ್ರತಿ ಸ್ಪರ್ಧಿ ಬಂದು ರಾಜೀವ್ ಹಾಗೂ ಅರವಿಂದ್, ಆದರೆ ನನಗಿಂತ ಅರವಿಂದ ನನಗಿಂತ ಹೆಚ್ಚು ಯೋಚಿಸುತ್ತಾನೆ. ಹಾಗಾಗಿ ಅವನ ಎದೆ ಬಗೆಯುತ್ತೇನೆ ಅಂತ ಹೇಳಿ ಡಾಟ್ ಚುಚ್ಚಿದ್ರು. ವೈಷ್ಣವಿಯವರು ನನಗೆ ಸ್ಪರ್ಧಿನೇ ಅಲ್ಲ. ಬೇರೆಯವರ ಆಟಗಳಿಗೆ ಹೋಲಿಸಿದರೆ ಲೆಕ್ಕಕ್ಕೆ ಇಲ್ಲ ಎನಿಸುತ್ತದೆ ಎಂದು ವೈಷ್ಣವಿ ಫೋಟೋವನ್ನು ಕಸದ ಬುಟ್ಟಿಗೆ ಹಾಕುತ್ತಾರೆ.
ಬಳಿಕ ರಾಜೀವ್ ಮಂಜು ನಾಲ್ಕು ಜನರನ್ನು ಸಂತೋಷವಾಗಿಡುವ ಮೂಲಕ ತನ್ನನ್ನು ತಾನು ಮಂಜು ಬಹಳ ಚೆನ್ನಾಗಿ ಗುರುತಿಸಿಕೊಳ್ಳುತ್ತಿದ್ದಾನೆ. ಹಾಗಾಗಿ ಮಂಜು ನನಗೆ ಕಾಂಪಿಟೇಟರ್ ಎಂದು ಸೂಚಿಸುತ್ತೇನೆ ಎಂದು ಹೇಳುತ್ತಾರೆ. ಟಾಸ್ಕ್ ವಿಚಾರವಾಗಿ ಆಯೋಚಿಸುವ ರೀತಿ, ಎಂಟರ್ಟೈನ್ಮೆಂಟ್, ಮನೆಯ ಸದಸ್ಯರ ಪ್ರೀತಿ ಹಾಗೂ ಜನರ ಪ್ರೀತಿ ವಿಶ್ವಾಸವನ್ನು ಹೇಗೆ ಗಳಿಸಬೇಕೆಂದು ಬಹಳ ಚೆನ್ನಾಗಿ ಮಂಜು ಅರಿತಿದ್ದಾರೆ. ಈ ಹಿನ್ನೆಲೆ ಮಂಜುರನ್ನು ತಮ್ಮ ಪ್ರತಿಸ್ಪರ್ಧಿಯಾಗಿ ಪ್ರಶಾಂತ್, ರಘು, ಶಮಂತ್, ದಿವ್ಯಾ ಉರುಡುಗ ತಿಳಿಸುತ್ತಾರೆ.
ಇನ್ನೂ ಬಿಗ್‍ಬಾಸ್ ಕಾರ್ಯಕ್ರಮ ಪ್ರಾರಂಭವಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಆದರೂ ಆಟದ ಬಗ್ಗೆ ಶಮಂತ್ ಉತ್ಸಾಹ ತೋರಿಸದೆ, ಇರುವುದರಿಂದ ಈಗ ಅವರನ್ನು ಕಾಂಪಿಟೇಟರ್ ಅಲ್ಲ ಎಂದು ಹೇಳಿದರೆ, ಇನ್ನೂ ಮುಂದೆ ಯಾದರೂ ಆಟವನ್ನು ಚೆನ್ನಾಗಿ ಆಡಬಹುದು ಅನಿಸುತ್ತದೆ ಅಂತ ರಾಜೀವ್ ಶಮಂತ್ ಫೋಟೋವನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಬಳಿಕ ಬಂದ ವೈಷ್ಣವಿ, ಶುಭ, ದಿವ್ಯಾ ಸುರೇಶ್, ವಿಶ್ವನಾಥ್, ಶಮಂತ್ ಟಾಸ್ಕ್ ಹಾಗೂ ಎಂಟರ್ಟೈನ್ಮೆಂಟ್ ವಿಚಾರದಲ್ಲಿ ಬೇರೆ ಸದಸ್ಯರಿಗೆ ಹೋಲಿಸಿದರೆ ಶಮಂತ್ ಪ್ರತಿ ಸ್ಪರ್ಧೆಯೇ ಅಲ್ಲ ಎಂದು ಸೂಚಿಸುತ್ತಾರೆ.
ಒಟ್ಟಾರೆ ನಿನ್ನೆ ಬಿಗ್‍ಬಾಸ್ ಮನೆಯ ಸದಸ್ಯರಿಗೆ ತಮ್ಮ ಪ್ರತಿಸ್ಪರ್ಧಿಗಳು ಯಾರು ಎಂದು ತಿಳಿದುಕೊಳ್ಳಲು ಚಟುವಟಿಕೆ ಮೂಲಕ ಅವಕಾಶ ಮಾಡಿಕೊಟ್ಟಿದ್ದಾರೆ ಎಂದೇ ಹೇಳಬಹುದು.