ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಡ್ರಗ್ಸ್ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಖಚಿತವಾದ ಮಾಹಿತಿಯನ್ನು ಪಡೆದುಕೊಂಡ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ಪೆಡ್ಲರ್ ಸೇರಿದಂತೆ ಇಬ್ಬರನ್ನು ಬಂಧಿಸಿ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿ ಧಾರವಾಡ ಸಿಸಿಬಿ ಪೆÇಲೀಸರು ಕಾರ್ಯಾಚರಣೆ ಮಾಡಿದ್ದು ಅಜಯ ರಾಮ್ ವೆಂಕಟೇಶ್ ರಾವ್ ಮತ್ತು ಶಿಮ್ರಾನ್ ಜಿತ್ ಕೌರ್ ಬಂಧಿತ ಆರೋಪಿಗಳು. ಹುಬ್ಬಳ್ಳಿಯ ಗೋಕುಲ ರಸ್ತೆಯ ವಿಮಾನ ನಿಲ್ದಾಣ ಬಳಿ ಇಬ್ಬರನ್ನು ಬಂಧನ ಮಾಡಲಾಗಿದೆ.
ಅಜಯ್ ರಾವ್ ಮುಂಬೈ ಅಂಧೇರಿ ನಿವಾಸಿಯಾಗಿದ್ದು ಪೆಡ್ಲರ್ ಆಗಿದ್ದು, ಇವನಿಂದ ಡ್ರಗ್ಸ್ ಖರೀದಿ ಮಾಡುತ್ತಿದ್ದ ಹುಬ್ಬಳ್ಳಿಯ ಶಿಮ್ರಾನ್ ಜಿತ್ ಕೌರ್ ಇವರನ್ನು ಬಂಧನ ಮಾಡಲಾಗಿದೆ. ಈಕೆ ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೇಲ್ ಉದ್ಯಮಿಯ ಪುತ್ರಿಯಾಗಿದ್ದು ಪೆಡ್ಲರ್ ನಿಂದ ತಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.