ಗದಗ: ಕ್ಷುಲ್ಲಕ ಕಾರಣಕ್ಕೆ ಲಾಂಗ್, ಕಬ್ಬಿಣ ರಾಡು, ಬಡಿಗೆ ಹಿಡಿದು ಹೊಡೆದಾಡಿರುವ ಘಟನೆ ಜಿಲ್ಲೆ ರೋಣ ಪಟ್ಟಣದಲ್ಲಿ ನಡೆದಿದೆ.
ಪೊಲೀಸ್ ಠಾಣೆ ಪಕ್ಕದಲ್ಲಿರುವ ಕುಮಾರ ಬಾರ್‍ನಲ್ಲಿ ಮದ್ಯ ಪ್ರೀಯರು ಹಾಗೂ ಬಾರ್ ಸಪ್ಲೈಯರ್ ನಡುವೆ ಗಲಾಟೆ ನಡೆದಿದೆ. ಮದ್ಯ ವ್ಯಸನಿ ಗ್ರಾಹಕರು, ಪಾನಮತ್ತಿನಲ್ಲಿ ಟೇಬಲ್ ಬಡಿದಿದ್ದಾರೆ. ಆದರೂ ಸಪ್ಲೈಯರ್‍ಗಳು ಬೇಗನೆ ಬಾರದಕ್ಕೆ ಜೋರಾಗಿ ಕೂಗಾಡಿದ್ದಾರೆ. ನಂತರ ಬಾರ್ ಸಪ್ಲೈಯರ್ ಹಾಗೂ ಗ್ರಾಹಕರ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಆವೇಶದಲ್ಲಿ ಮದ್ಯ ಪ್ರೀಯರು ಹಾಗೂ ಬಾರ್ ಸಪ್ಲೈಯರ್ ಕಬ್ಬಿಣ ರಾಡ್, ಕಟ್ಟಿಗೆ ಹಾಗೂ ಲಾಂಗ್ ನಿಂದ ಹೊಡೆದಾಡಲು ಶುರುಮಾಡಿದ್ದಾರೆ. ಈ ವೇಳೆ 2 ಗುಂಪಿನವರಿಗೂ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಎರಡೂ ಗುಂಪಿನವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಜಿಲ್ಲೆ ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.