ದಿಸ್ಪುರ್: ಕಾಂಗ್ರೆಸ್ ಅಂದ್ರೆ ಸುಳ್ಳು, ಗೊಂದಲ, ಅಸ್ಥಿರತೆ, ಹೀಂಸೆ, ಭ್ರಷ್ಟಾಚಾರ. ಪಕ್ಷ ಬೊಕ್ಕಸ ಖಾಲಿಯಾಗಿದೆ. ಅದನ್ನು ತುಂಬಿಸಿಕೊಳ್ಳಲು ಅವರು ಅಧಿಕಾರಕ್ಕೆ ಬರಲೇಬೇಕಿದೆ. ಹೀಗಾಗಿ ಹಾತೊರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಗ್ದಾಳಿ ನಡೆಸಿದರು.
केंद्र और राज्य में एनडीए सरकार होने से डबल इंजन की ताकत असम को तेजी से आगे बढ़ा रही है।
अब इंफ्रास्ट्रक्चर की स्पीड भी डबल है, क्योंकि राज्य सरकार भी विकास में जुटी है और केंद्र सरकार भी। pic.twitter.com/I6P41pNyDZ
— Narendra Modi (@narendramodi) March 21, 2021
ಅಸ್ಸಾಂ ವಿಧಾನಸಭೆ ಚುನಾವಣೆ ಹಿನ್ನೆಲೆ ಬೊಕಾಖಾಟ್‍ನಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುತ್ತದೆ. ಕೇಂದ್ರದಲ್ಲಿ ಹಾಗೂ ಅಸ್ಸಾಂನಲ್ಲಿ ಎರಡೂ ಕಡೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈಶಾನ್ಯ ರಾಜ್ಯದಲ್ಲಿ ಸ್ಥಿರತೆ ನೀಡುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೇರಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ. ಇದಕ್ಕೆ ಅವರು ಬಿಡುಗಡೆ ಮಾಡುವ ಪ್ರಣಾಳಿಕೆಯೇ ಸಾಕ್ಷಿ ಎಂದರು.
Speaking in Bokakhat. Overwhelming support for NDA! https://t.co/iP7tgplDXM
— Narendra Modi (@narendramodi) March 21, 2021
ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಕಾಂಗ್ರೆಸ್ ಸರ್ಕಾರ ಇದ್ದಾಗ ದುಪ್ಪಟ್ಟು ನಿರ್ಲಕ್ಷ್ಯ, ಭ್ರಷ್ಟಾಚಾರ ಹಾಗೂ ಒಳನುಸುಳುವಿಕೆಗೆ ಅವಕಾಶ ನೀಡಿದ್ದಾರೆ. ಉದ್ಯೋಗ, ಮಹಿಳಾ ಸಬಲೀಕರಣದ ಬಗ್ಗೆ ಸುಳ್ಳು ಭರವಸೆಗಳನ್ನು ನೀಡಿದ್ದಾರೆ. ಬಿಜೆಪಿಗೆ ಅಧಿಕಾರ ನೀಡಿದರೆ ಮುಂದಿನ ಐದು ವರ್ಷಗಳಲ್ಲಿ ಡಬಲ್ ಎಂಜಿನ್ ಸರ್ಕಾರವಾಗಿ ಕೆಲಸ ಮಾಡುತ್ತೇವೆ. ಹೆಚ್ಚು ಅಭಿವೃದ್ಧಿಪಡಿಸುತ್ತೇವೆ ಎಂದು ತಿಳಿಸಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಾಂಬ್ ಸ್ಫೋಟ, ಗನ್‍ಗಳು, ಹಿಂಸಾಚಾರ ಯಾವಾಗ ನಿಲ್ಲತ್ತವೋ ಎಂದು ಚಿಂತಿಸುತ್ತಿದ್ದರು. ಇದೀಗ ಎನ್‍ಡಿಎ ಸರ್ಕಾರ ಶಾಂತಿ ನೆಲೆಸುವಂತೆ ಮಾಡಿದೆ ಎಂದರು.