ಮಂಜು ತ್ಯಾಗದಿಂದ ದೊಡ್ಮನೆ ಮಂದಿಗೆ ಸಿಕ್ತು ಬೆಡ್ ರೂಮ್!

Public TV
2 Min Read
FotoJet 3 8

ಕಳೆದ ಒಂದು ವಾರದಿಂದ ಚಳಿ ಹಾಗೂ ಸೊಳ್ಳೆ ಕಾಟದಿಂದ ಹೊರಗೆ ನಿದ್ರೆ ಮಾಡಲು ಆಗದೇ ಕಷ್ಟ ಪಡುತ್ತಿರುವ ಬಿಗ್‍ಬಾಸ್ ಸ್ಪರ್ಧಿಗಳು ಬೆಡ್ ರೂಮ್‍ನನ್ನು ಹಿಂದಿರುಗಿಸುವಂತೆ ಬಿಗ್‍ಬಾಸ್‍ಗೆ ಎಷ್ಟೋ ಬಾರಿ ಮನವಿ ಮಾಡಿದ್ದರು. ಆದರೂ ಕೂಡ ಬಿಗ್‍ಬಾಸ್ ಮನಕರಗಲಿಲ್ಲ. ಆದರೆ ನಿನ್ನೆ ಜೋಡಿ ಟಾಸ್ಕ್ ವೊಂದರಲ್ಲಿ ಗೆದ್ದ ಮಂಜುವಿನಿಂದ ಇದೀಗ ದೊಡ್ಮನೆ ಮಂದಿಗೆ ಬೆಡ್ ರೂಮ್ ದೊರೆತಿದೆ.

manju geetha

ಹೌದು ನಿನ್ನೆ ಬಿಗ್‍ಬಾಸ್ ಸದಸ್ಯರಿ ಮಸ್ತ್ ಮಸ್ತ್ ಮೊಟ್ಟೆ ಬಂತು ಎಂಬ ಟಾಸ್ಕ್ ನೀಡಿದ್ದರು. ಅದರ ಅನುಸಾರ ಪ್ರತಿ ಜೋಡಿಯ ಒಬ್ಬ ಸದಸ್ಯ ಗಾರ್ಡನ್ ಏರಿಯಾದಲ್ಲಿ ಚಿನ್ನ, ಬೆಳ್ಳಿ, ಬಿಳಿ ಮೊಟ್ಟೆಯನ್ನು ಕ್ಯಾಚ್ ಹಿಡಿದು ಬುಟ್ಟಿಯೊಂದಕ್ಕೆ ಹಾಕಬೇಕಾಗಿತ್ತು. ಮತ್ತೋರ್ವ ಸದಸ್ಯ ಮೊಟ್ಟೆಯನ್ನು ಒಂದು ಬುಟ್ಟಿಯಿಂದ ಮತ್ತೊಂದು ಬುಟ್ಟಿಗೆ ವರ್ಗಾಯಿಸಬೇಕಿತ್ತು.

manju 5

ಅದರಂತೆ ಈ ಟಾಸ್ಕ್‍ನಲ್ಲಿ ಎಲ್ಲಾ ಜೋಡಿಗಳನ್ನು ಹಿಂದಿಕ್ಕಿ ಲ್ಯಾಗ್ ಮಂಜು ಹಾಗೂ ಗೀತಾ 6 ಗೋಲ್ಡನ್ ಮೊಟ್ಟೆ ಹಾಗೂ 4 ಸಿಲ್ವರ್ ಮೊಟ್ಟೆ ಗಳಿಸುವ ಮೂಲಕ 800 ಅಂಕ ಪಡೆದು ವಿಜೇತರಾಗುತ್ತಾರೆ. ಆಟದಲ್ಲಿ ಗೆದ್ದ ಮಂಜು ಹಾಗೂ ಗೀತಾಗೆ ಬಿಗ್‍ಬಾಸ್ ರಿಚಾರ್ಜ್ ಯಂತ್ರವನ್ನು ಕಳುಹಿಸುತ್ತಾರೆ. ಬಳಿಕ ಬಿಗ್‍ಬಾಸ್ ನಿಮಗೆ ಸಿಕ್ಕಿರುವ ರಿಚಾರ್ಜ್ ಯಂತ್ರ ವಿಶೇಷವಾದದ್ದೂ ಇದು ನಿಮ್ಮ ಬಳಿಯೇ ಇರುತ್ತದೆ. ಅದನ್ನು ಯಾರು ಕದಿಯುವಂತಿಲ್ಲ. ಒಂದು ವೇಳೆ ವಿಶೇಷ ಯಂತ್ರವನ್ನು ಹಿಂದಿರುಗಿಸಿದರೆ ಬೆಡ್‍ರೂಮ್‍ನನ್ನು ಮನೆಯ ಸದಸ್ಯರಿಗಾಗಿ ಬಿಗ್‍ಬಾಸ್ ಹಿಂದಿರುಗಿಸುತ್ತಾರೆ ಎಂದು ಘೋಷಿಸುತ್ತಾರೆ.

FotoJet 2 10

ಈ ವೇಳೆ ಮಂಜು ಹಾಗೂ ಗೀತಾ ಹಿಂದೆ-ಮುಂದೆ ಯೋಚಿಸದೇ ಯಂತ್ರವನ್ನು ಬಿಗ್‍ಬಾಸ್‍ಗೆ ಹಿಂದಿರುಗಿಸಿ ಮನೆ ಮಂದಿಗೆ ಬೆಡ್ ರೂಮ್ ಹಿಂದಿರುಗಿಸಿ ಕೊಡಿಸುತ್ತಾರೆ. ಇದರಿಂದ ಫುಲ್ ಖುಷ್ ಆದ ಬಿಗ್ ಬಾಸ್ ಮಂದಿ ಮಂಜುವಿಗೆ ಜೈಕಾರ ಹಾಕಿ ಅಪ್ಪಿ ಮುದ್ದಾಡುತ್ತಾರೆ. ಅದರಲ್ಲೂ ಬೆಡ್ ರೂಮ್ ಇಲ್ಲದೆ ಕಂಗೆಟ್ಟಿದ್ದ ಶುಭ ಪೂಂಜಾ ಮಂಜು ಮೇಲೆ ಹಾರಿ, ಮನೆ ಪೂರ್ತಿ ಕುಣಿದಾಡುತ್ತಾ ಮಂಜುವಿಗೆ ಧನ್ಯವಾದ ತಿಳಿಸಿ ಸಂತಸ ವ್ಯಕ್ತಪಡಿಸಿದರು. ಉಳಿದವರು ಜೋರಾದ ಚಪ್ಪಾಳೆ ಹಾಗೂ ಶಿಳ್ಳೆ ಹೊಡೆಯುವ ಮೂಲಕ ಕೃತಜ್ಞತೆ ಸಲ್ಲಿಸಿದರು.

manju geetha1

ಒಟ್ಟಾರೆ ಬೆಡ್‍ರೂಮ್ ಇರದೇ ಪರದಾಡುತ್ತಾ ದಿಕ್ಕಾಪಾಲಾಗಿದ್ದ ದೊಡ್ಮನೆ ಮಂದಿಗೆ ಮತ್ತೆ ಬೆಡ್ ರೂಮ್ ದೊರಕಿಸಿ ಕೊಡುವ ಮೂಲಕ ಮಂಜು ಎಲ್ಲರಿಗೂ ಹೀರೋ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *